ಯೋಗ ದಿನದಂದು 14 ಜನರಿಂದ ರಕ್ತದಾನ

HNL YOGA 22
Published on

ಹಾನಗಲ್ಲ: ಯೋಗ ದಿನಾಚರಣೆ ಅಂಗವಾಗಿ ಪಟ್ಟಣದ ಜೀವ ವಿಮಾ ಕಚೇರಿಯಲ್ಲಿ ರಕ್ತದಾನ ಶಿಬಿರ ನಡೆಯಿತು.


ಕಾರ್ಯಕ್ರಮವನ್ನು ಶಾಖಾ ವ್ಯವಸ್ಥಾಪಕ ಶ್ರೀಧರ್ ಮನ್ಸೂರ್ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು.


ಹಾವೇರಿಯ ವಿಶ್ವಧಾರ ರಕ್ತ ನಿಧಿ ಕೇಂದ್ರದ ವೈದ್ಯ ಎಸ್.ಎಸ್. ನಿಡುಗುಂದಿ ಮಾತನಾಡಿ, ರಕ್ತದಾನದಿಂದ ಮನುಷ್ಯನ ಆರೋಗ್ಯದಲ್ಲಿ ಲವಲವಿಕೆ ಮೂಡುತ್ತದೆ. ಹೊಸ ರಕ್ತ ಉತ್ಪಾದನೆಗೊಂಡು ಆರೋಗ್ಯ ಉತ್ತಮಗೊಳ್ಳುತ್ತದೆ.

ಆದರೆ, ಸಾರ್ವಜನಿಕರಲ್ಲಿ ರಕ್ತದಾನದ ಬಗ್ಗೆ ಮೂಢನಂಬಿಕೆಗಳಿವೆ. ಅದನ್ನು ರಕ್ತದಾನ ಮಾಡಿದ ಅನುಭವಿಗಳು ತಿಳಿವಳಿಕೆ ನೀಡಬೇಕು. ಆಗ ಮಾತ್ರ ಇನ್ನೊಂದು ಜೀವ ಉಳಿಸಲು ಸಾಧ್ಯವಾಗುತ್ತದೆ.

ರಕ್ತದ ಅಗತ್ಯವಿದ್ದವರು ಪರದಾಡುವುದನ್ನು ತಪ್ಪಿಸಲು ನಾವೆಲ್ಲರೂ ರಕ್ತ ಸೈನಿಕರಾಗಬೇಕಿದೆ ಎಂದರು.


ಜೀವ ವಿಮಾ ಅಭಿವೃದ್ಧಿ ಅಧಿಕಾರಿಗಳಾದ ಚನ್ನಬಸಪ್ಪ ಜವಳಿ, ಪ್ರಹ್ಲಾದ ಸಾಮ್ರಾಣಿ, ವಿ.ವಿ. ಕುಲಕರ್ಣಿ, ಮುತ್ತು ವಿನಾಯಕ್, ಲಿಫಿಯ ಸಂಘದ ಅಧ್ಯಕ್ಷ ಶಂಭು ಮಲ್ಲಿಗಾರ, ಶಿಬಿರದ ಸಂಘಟಕ ಕರಬಸಪ್ಪ ಗೊಂದಿ ಇದ್ದರು. ಕಾರ್ಯಕ್ರಮದಲ್ಲಿ ಹಾನಗಲ್ಲ, ಅಕ್ಕಿಆಲೂರ, ಹುಲ್ಲತ್ತಿ ಗ್ರಾಮಗಳ ಒಟ್ಟು 14 ಜನರು ರಕ್ತದಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net