ರಕ್ತದಾನ ಮಹತ್ತರ ಕಾರ್ಯ : ಶರತ್ ಕೃಷ್ಣ ಪಡುವೆಟ್ನಾಯ ಅನಿಸಿಕೆ

New Project (1)
Published on

ಬೆಳ್ತಂಗಡಿ: ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ ನೇತೃತ್ವದಲ್ಲಿ ರೋಟರಿ ಕ್ಲಬ್ ಬೆಳ್ತಂಗಡಿ, ಸೇವಾಭಾರತಿ ಕನ್ಯಾಡಿ, ಮಂಗಳೂರಿನ ಕೆ.ಎಂ.ಸಿ. ಬ್ಲಡ್‌ಬ್ಯಾಂಕ್ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ಉಜಿರೆ ಶಾರದಾ ಮಂಟಪದಲ್ಲಿ ಭಾನುವಾರ ನಡೆಯಿತು.

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತದಾನ ಮಾಡುವುದು ಒಂದು ಮಹತ್ತರವಾದ ಕಾರ್ಯ. ಹಲವು ಸಂಘಟನೆಗಳ ಸಹಕಾರದಲ್ಲಿ ನಡೆಸುತ್ತಿರುವ ಈ ರಕ್ತದಾನ ಶಿಬಿರ ಮಾದರಿಯಾಗಿದೆ ಎಂದರು.

ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ಪೂರಣ್ ವರ್ಮ, ಉಜರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ, ಅಧ್ಯಕ್ಷ ಧರ್ಣಪ್ಪ ಗೌಡ, ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ, ಗೌರವಾಧ್ಯಕ್ಷ ಪ್ರಕಾಶ್ ಗೌಡ, ಅಪ್ರಮೇಯ, ಬೆಳ್ತಂಗಡಿ ತಾಲೂಕು ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಶ್ರೀಧರ ಕೆ.ವಿ., ಸೇವಾಧಾಮ ಸಂಸ್ಥಾಪಕರಾದ ಕೆ.ವಿನಾಯಕ ರಾವ್ ಉಪಸ್ಥಿತರಿದ್ದರು.

ಶಿಬಿರದ ಯಶಸ್ಸಿಗೆ ಸ್ಥಳೀಯ ಸಂಘ-ಸಂಸ್ಥೆಗಳು ಸಹಕರಿಸಿದವು. ಶಿಕ್ಷಕರಾದ ರಮೇಶ್ ಪೈಲಾರ್ ಸ್ವಾಗತಿಸಿ, ಸಿ.ಆರ್.ಪಿ. ವಾರಿಜ ನಿರೂಪಿಸಿ, ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ, ಕಾರ್ಯದರ್ಶಿ ಶೇಖರ್ ಗೌಡ ಉಜಿರೆ ವಂದಿಸಿದರು. ಒಟ್ಟು 123 ಯುನಿಟ್ ರಕ್ತ ಸಂಗ್ರಹಣೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net