

ಮೂಲ್ಕಿ: ನಿಯಮಿತ ರಕ್ತದಾನ ಆರೊಗ್ಯ ವೃದ್ಧಿಯಾಗುವುದರ ಜತೆಗೆ ಇನ್ನೊಂದು ಜೀವ ಉಳಿಸಿದ ಪುಣ್ಯ ಲಭಿಸುತ್ತದೆ ಎಂದು ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಫಯರ್ ಸ್ಥಾಪಕ ಅಧ್ಯಕ್ಷ ವೆಂಕಟೇಶ್ ಹೆಬ್ಬಾರ್ ಹೇಳಿದರು.
ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಫಯರ್, ಸೇಂಟ್ ಆ್ಯನ್ಸ್ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಶ್ರೀನಿವಾಸ ವೈದ್ಯಕೀಯ ವಿದ್ಯಾಲಯ ರಕ್ತದಾನ ವಿಭಾಗ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ಪ್ರಸ್ತುತ ಕಾಲದಲ್ಲಿ ರಕ್ತದಾನಕ್ಕೆ ಯುವ ಜನತೆ ಹಿಂದೇಟು ಹಾಕುತ್ತಿರುವುದು ನಿಜಕ್ಕೂ ಖೇದಕರ. ಕಳೆದ ವರ್ಷ ನಮ್ಮ ಸಂಸ್ಥೆ 1289 ಯುನಿಟ್ ರಕ್ತ ಸಂಗ್ರಹಿಸಿ ಜಿಲ್ಲೆಯ ವಿವಿಧ ರಕ್ತ ಸಂಗ್ರಹ ಕೇಂದ್ರಕ್ಕೆ ನೀಡಿದ್ದು, ಅದರಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಕಾಲೇಜಿನ ಪಾಲು ಇದೆ ಎಂದರು.
ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಫಯರ್ ಅಧ್ಯಕ್ಷ ಅನಿಲ್ ಕುಮಾರ್ ಉದ್ಘಾಟಿಸಿದರು. ಶ್ರೀನಿವಾಸ್ ಕಾಲೇಜಿನ ವೈದ್ಯಾಧಿಕಾರಿ ಡಾ.ಮಧುಕರ ರಕ್ತದಾನದ ಅಗತ್ಯ ಮತ್ತು ಲಾಭದ ಬಗ್ಗೆ ಮಾಹಿತಿ ನೀಡಿದರು.
ಶಿಕ್ಷಣ ಸಂಸ್ಥೆ ಮುಖ್ಯಸ್ಥ ಡಾ.ಎರಿಕ್ ಲೋಬೋ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ನಿರ್ದೇಶಕಿ ಸರಿತಾ ಡಿಸೋಜ, ಮುಖ್ಯಶಿಕ್ಷಕಿ ಪ್ರೊ.ಮರಿಯ ಬರೆಟ್ಟೊ, ಪ್ರತಿಭಾ ಹೆಬ್ಬಾರ್, ಡಾ.ಉದಯ್ ನಾಯಕ್, ಬ್ಲಡ್ ಬ್ಯಾಂಕ್ ಸಂಚಾಲಕಿ ಸವಿತಾ, ಶಿಕ್ಷಕಿ ಸೋನಿಯಾ, ಉಪಸ್ಥಿತರಿದ್ದರು. ಬಳಿಕ ರಕ್ತದಾನ ಶಿಬಿರ ನಡೆದು 51 ಯೂನಿಟ್ ರಕ್ತ ಸಂಗ್ರಹಿಸಲಾಯಿತು.
ವಿಜ್ಞಾನ ಎಷ್ಟೇ ಮುಂದುವರಿದರು ರಕ್ತಕ್ಕೆ ಪರ್ಯಾಯ ವಸ್ತುವನ್ನು ತಯಾರಿಸಲು ಸಾಧ್ಯವಾಗಿಲ್ಲ. ರಕ್ತದಾನದ ಮೂಲಕವೇ ಪ್ರಾಣವನ್ನು ಕಾಪಾಡಬಹುದು ಆದ್ದರಿಂದ ಯುವ ಜನತೆ ನಿಯಮಿತವಾಗಿ ರಕ್ತದಾನ ಮಾಡಿ ಜೀವ ಉಳಿಸಬೇಕು. ಅನಿಲ್ ಕುಮಾರ್ ಅಧ್ಯಕ್ಷ, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಫಯರ್