ಗಾಣಗಾಪುರ ಬ್ಯಾರೇಜ್ ಗೆ ಹೈಡ್ರೋಲಿಕ್ ಗೇಟ್ ಅಳವಡಿಕೆಗೆ ಆಗ್ರಹಿಸಿ ಹೆದ್ದಾರಿ ತಡೆ : ದತ್ತ ಭಕ್ತರು, ಪ್ರಯಾಣಿಕರ ಪರದಾಟ

IMG-20240930-WA0039
Published on

ಕಲಬುರಗಿ : ಜಿಲ್ಲೆಯ ಅಫಜಲಪುರ ತಾಲೂಕಿನ ದೇವಲ್ ಗಾಣಗಾಪುರ ಬಳಿ ಭೀಮಾ ನದಿಗೆ ನಿರ್ಮಿಸಿದ ಬ್ಯಾರೇಜ್ ಗೆ ಹೈಡ್ರೋಲಿಕ್ ಗೇಟ್ ಅಳವಡಿಕೆ ಮಾಡಬೇಕು ರೈತರ ಬೇಡಿಕೆಗೆ ಆಗ್ರಹಿಸಿ ಇಂದು ರೈತರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚವಡಾಪುರದಲ್ಲಿ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

ಭೀಮಾ ಅಮರ್ಜಾ ರೈತ ಸಂಘದ ನೇತೃತ್ವದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆಗೆ ಕುಳಿತಿದ್ದರಿಂದ ಸೊಲ್ಲಾಪುರ-ಕಲಬುರಗಿ- ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡ ಗಾಣಗಾಪುರ ದತ್ತ ಭಕ್ತರು, ಪ್ರಯಾಣಿಕರ ಪರದಾಡುತ್ರಿದ್ದಾರೆ.

ಶಾಸಕರು ತಹಸೀಲ್ದಾರರು ಸ್ಥಳಕ್ಕೆ ಆಗಮಿಸುವವರೆಗೂ ಹೋರಾಟ ಕೈಬಿಡಲ ಎಂದು ಹೋರಾಟಗಾರರು ಪಟ್ಟು ಹಿಡಿದಿದ್ದಾರೆ.ಟೈರ್ ಗಳಿಗೆ ಬೆಂಕಿ ಇಟ್ಟಿ ಇದ್ದಾರೆ. ವಾತಾವರಣ ಕೊಂಚ ಗರಂ ಆಗಿದೆ. ಪಿಎಸ್ ಐ ವಾತ್ಸಲ್ಯ ಹಾಗೂ ಸಿಬ್ಬಂದಿ ಬೀಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net