ಕರ್ತವ್ಯಲೋಪ ಬಿಎಲ್​ಒ ಅಮಾನತು

suspend
Published on

ಲಕ್ಷ್ಮೇಶ್ವರ: ಬೂತ್ ಲೇವಲ್ ಆಫಿಸರ್ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಪಟ್ಟಣದ ಬಸ್ತಿಬಣ ಗ್ರಾಮ ಆಡಳಿತ ಅಧಿಕಾರಿ ವಿ.ವಿ. ಶಿರೂರ ಅವರನ್ನು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರು ಅಮಾನತುಗೊಳಿಸಿದ್ದಾರೆ.


ಲಕ್ಷ್ಮೇಶ್ವರ ಮತಗಟ್ಟೆ ಸಂಖ್ಯೆ 103ರ ಅಧಿಕಾರಿಯಾಗಿದ್ದ ಶಿರೂರ ಅವರನ್ನು ಬಿಎಲ್​ಒ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ, ಅವರು ಆಗಸ್ಟ್ 7ರಿಂದ ಇಲ್ಲಿಯವರೆಗೂ ಗೈರಾಗಿದ್ದಾರೆ. ಮತ್ತು ಆಗಸ್ಟ್ 12ರಂದು ಕರೆದಿದ್ದ ಸಭೆಗೂ ಹಾಜರಾಗಿಲ್ಲ. ಮನೆ-ಮನೆ ಸಮೀಕ್ಷೆಯನ್ನೂ ನಡೆಸಿಲ್ಲ. ದೂರವಾಣಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ಹೀಗಾಗಿ ಕರ್ತವ್ಯ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಲಕ್ಷೆ್ಮೕಶ್ವರ ತಹಸೀಲ್ದಾರ್ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ವಿಚಾರಣೆ ಕಾಯ್ದಿರಿಸಿದ ಡಿಸಿ ಅಮಾನತು ಆದೇಶ ಮಾಡಿದ್ದಾರೆ.
ಮತದಾರ ಪಟ್ಟಿಗಳ ಪರೀಕ್ಷರಣೆ ಮಾಡಲು ಚುನಾವಣಾ ಆಯೋಗ ಮನೆ ಮನೆಗೆ ತೆರಳಿ ಸಂಪೂರ್ಣ ಮಾಹಿತಿ ಸಂಗ್ರಹಿಸಲು ಜುಲೈ 21ರಿಂದ ಆಗಸ್ಟ್ 21ರವರೆಗೆ ವೇಳಾಪಟ್ಟಿ ನಿಗದಿ ಮಾಡಿದೆ.

ಆಯೋಗದ ಮಾರ್ಗಸೂಚಿಯಂತೆ ನಿಗದಿತ ನಮೂನೆಗಳಲ್ಲಿ ಬಿಎಲ್​ಒಗಳು ಮಾಹಿತಿ ಕ್ರೂಢೀಕರಿಸಿ ಸಲ್ಲಿಸಬೇಕೆಂಬ ಆದೇಶವಿದ್ದರೂ ಕರ್ತವ್ಯದಲ್ಲಿ ತೋರಿದ ನಿರ್ಲಕ್ಷ್ಯಂದ ಅಮಾನತುಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net