ದೇವಳಗಳಲ್ಲಿ ನಡೆಯಲಿ ಧರ್ಮ ಪ್ರಚಾರ : ಕಂಚಿಶ್ರೀ ಆಶೀರ್ವಚನ

New Project
Published on

ಸುಬ್ರಹ್ಮಣ್ಯ: ದೇವಸ್ಥಾನಗಳಲ್ಲಿ ಧರ್ಮ ಪ್ರಚಾರ ಪರಿಷತ್ ಮಾಡಿ ಧರ್ಮದ ಪ್ರಚಾರ ಮಾಡುವ ಕೆಲಸವಾಗಬೇಕು. ಹಿಂದುಗಳ ಆಚಾರ-ವಿಚಾರ ಪಾಲನೆ, ತಿಲಕಧಾರಣೆ, ಗೋಸಂರಕ್ಷಣೆ ಮುಂತಾದ ವಿಚಾರಗಳನ್ನು ದೇವಸ್ಥಾನಗಳಿಂದ ತಿಳಿಸುವ ಕಾರ್ಯ ಆಗಬೇಕು. ಇಲ್ಲಿನ ಪ್ರಸಿದ್ಧ ದೇವಾಲಯಗಳು ಮಿನಿ ತಿರುಪತಿ ಆಗಿ ಅಭಿವೃದ್ಧಿ ಆಗಬೇಕು ಎಂದು ಕಂಚಿ ಕಾಮಕೋಟಿ ಪೀಠದ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.

ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದ ಧರ್ಮ ಸಮ್ಮೇಳನ ಮಂಟಪದಲ್ಲಿ ಆಶೀರ್ವಚನ ನೀಡಿ, ಕುಕ್ಕೆ ಸುಬ್ರಹ್ಮಣ್ಯ ಭಾರತದ ಹೆಸರಾಂತ ನಾಗಾರಾಧನೆಯ ಪುಣ್ಯ ಕ್ಷೇತ್ರ. ಇಲ್ಲಿಗೆ ದೇಶ-ವಿದೇಶಗಳಿಂದ ಅಸಂಖ್ಯಾತ ಭಕ್ತರು ಬಂದು ತಮ್ಮ ಸಂಕಲ್ಪಗಳನ್ನು ಈಡೇರಿಸಿಕೊಂಡಿದ್ದಾರೆ. ಶ್ರೀ ದೇವಳದಿಂದ ನಡೆಯುವ ಶಾಲೆಗಳ ಮಕ್ಕಳ ಶ್ರದ್ಧೆ, ಭಕ್ತಿ, ಶಿಸ್ತು ಕಂಡು ಬಂದಿದ್ದೇನೆ. ಸುಬ್ರಹ್ಮಣ್ಯದ ವಾತಾವರಣ ಅತ್ಯುತ್ತಮವಾಗಿದೆ. ಶ್ರದ್ಧಾ ಭಕ್ತಿಗೆ ಪೂರಕ ಪರಿಸರ ಇಲ್ಲಿದೆ ಎಂದು ಶ್ರೀಗಳು ತಿಳಿಸಿದರು.

ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಶಿಷ್ಠಾಚಾರ ಅಧಿಕಾರಿ ಜಯರಾಮ ರಾವ್, ದೇವಳದ ಸಿಬ್ಬಂದಿಗಳು, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net