ಒತ್ತಡದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ

Untitled design(5)
ಹಲವಾಗಲಿ ಗ್ರಾಮದಲ್ಲಿ ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ, ದಂತ ತಪಾಸಣಾ ಶಿಬಿರ ಹಾಗೂ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅರಿವು ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಡಾ.ಪ್ರವೀಣ, ಗಂಗಮ್ಮ, ಸಂಗಮೇಶ, ಡಾ.ಸವಿತಾ, ಕಾಶಪ್ಪ, ಸಿದ್ದಪ್ಪ , ಸಂತೋಷ, ಸಾರೆಪ್ಪ, ಚನ್ನಪ್ಪ ಇತರರಿದ್ದರು.
Published on

ಅಳವಂಡಿ: ಮಾನಸಿಕ ಆರೋಗ್ಯ ಇಡೀ ದೇಹದ ಕಾರ್ಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ತಿಳಿಸಿದರು.

ಸಮೀಪದ ಹಲವಾಗಲಿ ಗ್ರಾಮದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳ ಕಾರ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಕವಲೂರು, ರಾಷ್ಟ್ರೀಯ ಫ್ಲೋರೋಸಿಸ್ ಹಾಗೂ ನಿಯಂತ್ರಣ ಕಾರ್ಯಕ್ರಮವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ, ದಂತ ತಪಾಸಣಾ ಶಿಬಿರ ಹಾಗೂ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಅರಿವು ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.

ಮಾನಸಿಕ ಒತ್ತಡದಿಂದ ಆರೋಗ್ಯವು ಹದಗೆಟ್ಟು ಖಿನ್ನತೆ, ಆತಂಕ, ಮಾನಸಿಕ ಒತ್ತಡ, ಉದ್ವೇಗ, ಆಕ್ರೋಶ, ಆವೇಶ ದಂತಹ ಸನ್ನಿವೇಶ ತರುತ್ತದೆ. ಅದರಲ್ಲೂ ವಿಶೇಷವಾಗಿ ಎಳೆಯ ವಯಸ್ಸಿನವರು ಹದಿಹರೆಯದವರಲ್ಲಿ ಮಾನಸಿಕ ಆರೋಗ್ಯ ಸಂಬಂಧಿ ಸಮಸ್ಯೆಗಳು ತಲೆದೋರುತ್ತವೆ. ಜನರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಮತ್ತು ಕಟ್ಟು ಕಥೆಗಳನ್ನು ಹೋಗಲಾಡಿಸಿ ಆರೋಗ್ಯ ಕಾಪಾಡಿಕೊಳ್ಳುವ ವಿವಿಧ ಹಂತಗಳ ಬಗ್ಗೆ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು. ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಸಂಗಮೇಶ, ದಂತ ವೈದ್ಯಾಧಿಕಾರಿ ಡಾ.ಸವಿತಾ ಮಾತನಾಡಿದರು.

ವೈದ್ಯಾಧಿಕಾರಿ ಡಾ.ಪ್ರವೀಣ, ಆರೋಗ್ಯ ನಿರೀಕ್ಷಣಾಧಿಕಾರಿ ಕಾಶಪ್ಪ, ಗ್ರಾಪಂ ಸದಸ್ಯರಾದ ಸಿದ್ದಪ್ಪ ಹಳ್ಳಿ, ಸಂತೋಷ, ಸಾರೆಪ್ಪ, ಚನ್ನಪ್ಪ, ಪ್ರಯೋಗಶಾಲ ತಂತ್ರಜ್ಞ ಬಸವರಾಜ ಸಿಎಚ್‌ಒ ಶೋಭಾ, ನರ್ಸಿಂಗ್ ಅಧಿಕಾರಿ ರೇಷ್ಮಾ, ಅಂಗನವಾಡಿ ಕಾರ್ಯಕರ್ತೆಯರಾದ ಹನುಮವ್ವ, ಗವಿಸಿದ್ದಮ್ಮ, ಪ್ರಮುಖರಾದ ಸರಸ್ವತಿ, ಸಂಗಮೇಶ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net