ಚಲಿಸುತ್ತಿದ್ದ ಬೈಕ್​ನಲ್ಲಿ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆದ ಸದ್ದು, ಬೆಚ್ಚಿ ಬಿದ್ದ ಜನರು; ಆಗಿದ್ದಾದರೂ ಏನು?

Untitled
Published on

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇಂದು ಚಲಿಸುತ್ತಿದ್ದ ಬೈಕ್​ನಿಂದ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆದ ಸದ್ದು ಕೇಳಿ ಬಂದಿದ್ದು, ರಸ್ತೆ ಅಕ್ಕಪಕ್ಕದಲ್ಲಿದ್ದ ಜನರಲ್ಲಿ ಹಲವರು ಒಮ್ಮೆ ಬೆಚ್ಚಿ ಬೀಳುವಂತಾಗಿದೆ. ಮಾತ್ರವಲ್ಲ, ಬೈಕ್​ ಸವಾರರು ಬೆದರಿ ಬೈಕ್​ನಿಂದ ಪಕ್ಕಕ್ಕೆ ನೆಗೆದಿದ್ದಾರೆ.

ಹುಬ್ಬಳ್ಳಿಯ ಮಹಾನಗರಪಾಲಿಕೆ ಎದುರುಗಡೆಯೇ ಇಂಥದ್ದೊಂದು ಘಟನೆ ಸಂಭವಿಸಿದೆ. ಬೈಕ್​ನಲ್ಲಿ ಇಬ್ಬರು ಯುವಕರು ಸಾಗುತ್ತಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಈ ಯುವಕರು ಬೈಕ್​ನಲ್ಲಿ ಆಕ್ಸಿಜನ್ ಸಿಲಿಂಡರ್ ಕೊಂಡೊಯ್ಯುತ್ತಿದ್ದರು. ಆಗ ಸಿಲಿಂಡರ್ ಬ್ಲಾಸ್ಟ್​ ಆಗಿದ್ದು, ಪವಾಡದ ರೀತಿಯಲ್ಲಿ ಬೈಕ್​ ಸವಾರರು ಅಪಾಯದಿಂದ ಪಾರಾಗಿದ್ದಾರೆ. ಬೈಕ್​ ಕೆಳಕ್ಕೆ ಬಿದ್ದಿದ್ದು, ಬೆಚ್ಚಿಬಿದ್ದ ಜನರು ಕೂಡಲೇ ಸಾವರಿಸಿಕೊಂಡು ಬೈಕ್​ ಸವಾರರ ನೆರವಿಗೆ ಧಾವಿಸಿದರು. ಬೈಕ್ ಸವಾರರಿಗೆ ನೀರು ಕೊಟ್ಟು ಧೈರ್ಯ ತುಂಬಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net