

ಸುಳ್ಳು, ಜೊಳ್ಳು, ಬ್ಲಾಕ್ ಮೇಲ್ ಪತ್ರಕರ್ತರು ನಮ್ಮ ನಡುವೆ ಇದ್ದಾರೆ. ಅವರನ್ನು ಸ್ವಚ್ಛಗೊಳಿಸುವ ಕೆಲಸ ನಾವೇ ಮಾಡಬೇಕಿದೆ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಪತ್ರಿಕಾ ವೃತ್ತಿ ಶ್ರೇಷ್ಠವಾದ ವೃತ್ತಿ. ಈ ವೃತ್ತಿ ನತೆ ಕುಂದಿಸುತ್ತಿರುವ ಕ್ರಿಮಿನಲ್ ಪತ್ರಕರ್ತರನ್ನು ಪತ್ರಿಕಾರಂಗದಿಂದಲೇ ಹೊರಗಿಡಬೇಕು. ಆ ಕೆಲಸವನ್ನು ಜಿಲ್ಲಾ, ತಾಲೂಕು ಟಕಗಳು ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಸಕ್ರೀಯ, ನೈಜ ಪತ್ರಕರ್ತರನ್ನು ಗುರುತಿಸಬೇಕಾದ ಜವಾಬ್ದಾರಿ ನಮ್ಮದು ಎಂದರು.
ಸಮ್ಮೇಳನಕ್ಕೆ 40 ಲಕ್ಷ ರೂ., ನೆರವು
ರಾಜ್ಯ ಸಮ್ಮೇಳನಕ್ಕೆ ಈ ಹಿಂದೆ 15 ಲಕ್ಷ ರೂ., ನೆರವನ್ನು ಸರ್ಕಾರ ನೀಡುತ್ತಿತ್ತು. ಅದನ್ನು 20 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಮತ್ತೊಮ್ಮೆ ನಾವೆಲ್ಲಾ ಗೃಹ ಸಚಿವರು ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಹೆಚ್ಚಿನ ನೆರವು ಕೇಳಿದಾಗ 40 ಲಕ್ಷ ರೂ., ನೆರವು ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಪ್ರಕಟಿಸಿದರು ಎಂದು ತಗಡೂರು ಕೃತಜ್ಞತೆ ಸಲ್ಲಿಸಿದರು.