ದಾಖಲೆ ಇಲ್ಲದ 56 ಲಕ್ಷ ರೂ. ವಶ, ಇಬ್ಬರ ಬಂಧನ

18sirsi8
Published on

ಶಿರಸಿ: ದಾಖಲೆ ಪತ್ರ ಇಲ್ಲದೆ ಸಾಗಿಸುತ್ತಿದ್ದ 56 ಲಕ್ಷ ರೂಪಾಯಿಯನ್ನು ಶಿರಸಿ ಪೊಲೀಸರು ವಶಕ್ಕೆ ಪಡೆದು ಇಬ್ಬರನ್ನು ಮಂಗಳವಾರ ದಸ್ತಗಿರಿ ಮಾಡಿದ್ದಾರೆ. ಇಲ್ಲಿನ ಚಿಪಗಿ ಸರ್ಕಲ್ ಬಳಿ ಹುಬ್ಬಳ್ಳಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎ 31 ಎನ್ 2628 ನಂಬರ್ ಹೊಂದಿರುವ ವಾಹನವನ್ನು ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದರು. ಅಡಕೆ ವ್ಯಾಪಾರಸ್ಥರು ಎನ್ನಲಾದ ಅಬ್ದುಲ್ ಮುತಲಿಪ್ (31) ಹಾಗೂ ಹೆರೂರಿನ ಅಬ್ದುಲ್ ಸೌದ್ ಅಲಿ (42) ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಯಾವುದೇ ದಾಖಲೆ ಪತ್ರ ಇಲ್ಲದ ಎರಡು ಸಾವಿರ ಮುಖಬೆಲೆಯ 404, 500 ಮುಖಬೆಲೆಯ 7,720 ನೋಟು ಸೇರಿ ಒಟ್ಟು 56 ಲಕ್ಷ ರೂ. ವಶಕ್ಕೆ ಪಡೆದು ಪಂಚರ ಸಮಕ್ಷಮ ಪಂಚನಾಮೆ ಮಾಡಿ ಕಾನೂನು ಕ್ರಮ ಕೈಗೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಎಸ್​ಪಿ ಜಿ.ಟಿ. ನಾಯಕ ಮಾರ್ಗದರ್ಶನದಲ್ಲಿ ಸಿಬ್ಬಂದಿ ಕೃಷ್ಣ ರೇವಣಕರ, ರಾಜೇಶ ನಾಯ್ಕ ಇತರರು ದಾಳಿ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net