ಕಪ್ಪು ಬಟ್ಟೆ ಕಟ್ಟುವ ಮೂಲಕ ಪ್ರತಿಭಟನೆ

02-dsbr-hdl--03
ಹೂವಿನಹಡಗಲಿಯಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಉಪನ್ಯಾಸಕರು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಭಟನೆ ನಡೆಸಿದರು. ಸಂಘದ ರಾಜ್ಯಾಧ್ಯಕ್ಷ ಜಿ.ಬಿ.ಮನುಕುಮಾರ, ಉಪನ್ಯಾಸಕರಾದ ಬಿ.ಕೊಟ್ರಬಸಪ್ಪ, ನಾಜಿಯಾ, ಉಮಾಪತಿ, ಅನುರಾಧ ಇತರರಿದ್ದರು.
Published on

ಹೂವಿನಹಡಗಲಿ: ಬೇಡಿಕೆ ಈಡೇರಿಕೆಗಾಗಿ ಅಖಿಲ ಕರ್ನಾಟಕ ಇಂಜಿನಿಯರಿಂಗ್ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರ ಕ್ಷೇಮಾಭಿವೃದ್ಧಿ ಸಂಘ ಶನಿವಾರ ಕಣ್ಣಿಗೆ ಬಟ್ಟೆ ಕಟ್ಟಿ ಪ್ರತಿಭಟನೆ ನಡೆಸಿದರು.

ಬುಧವಾರ ಹೂವಿನಹಡಗಲಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಅರೆಕಾಲಿಕ ಉಪನ್ಯಾಸಕರು ಅನಿರ್ದಿಷ್ಟಾವಧಿವರೆಗೆ ತರಗತಿಗಳನ್ನು ಬಹಿಷ್ಕರಿಸಿ ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆಯನ್ನು ಪ್ರಾರಂಭಿಸಿ ನಾಲ್ಕುದಿನಗಳಾದರೂ ಸಂಬಂಧ ಪಟ್ಟವರು ಇತ್ತ ಕಡೆ ಬರದೆ ಇರುವುದರಿಂದ ಈ ರೀತಿಯಲ್ಲಿ ಪ್ರತಿಭಟಿಸುತ್ತಿದ್ದಾರೆ.

ಬೇಡಿಕೆ ಈಡೆರಿಸುವವರಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಸಂಘದ ರಾಜ್ಯಾಧ್ಯಕ್ಷ ಜಿ.ಬಿ.ಮನುಕುಮಾರ, ಉಪನ್ಯಾಸಕರಾದ ಬಿ.ಕೊಟ್ರಬಸಪ್ಪ, ನಾಜಿಯಾ, ಉಮಾಪತಿ, ಅನುರಾಧ, ಶಂಕ್ರಮ್ಮ, ವಾಣಿಶ್ರೀ, ಪ್ರಿಯಾಂಕ, ಬಾನು, ರವಿನಾಯ್ಕ, ಛತ್ರಿನಾಯ್ಕ, ದೇವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net