

ಸಂಡೂರು: ಡಿ.6 ಮತ್ತು7 ರಂದು ಬಳ್ಳಾರಿ ಬ್ಯುಸಿನೆಸ್ ಕಾಲೇಜ್‌ನಲ್ಲಿ ಆಯೋಜಿಸಿದ್ದ ಅಂತರ್ ಕಾಲೇಜ್‌ಗಳ ಇವೆಂಟ್ಸ್ ಸ್ಪರ್ಧೆಯಲ್ಲಿ ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆ ಬಿಕೆಜಿ ಪಪೂ ಕಾಲೇಜು ವಿದ್ಯಾರ್ಥಿಗಳು ಆರು ಬಹುಮಾನಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಹಣಕಾಸು ವಿಭಾಗದ ಸ್ಪರ್ಧೆಯಲ್ಲಿ ಎ.ಎನ್.ಸುಧೀಕ್ಷಾ, ನೀವ್ ಜೈನ್ ಪ್ರಥಮ, ಗಣಕಯಂತ್ರ ವಿಭಾಗದ ಸ್ಪರ್ಧೆಯಲ್ಲಿ ಸಹನ ಮತ್ತು ಸೌಮ್ಯ ದ್ವಿತೀಯ, ಮಾರಾಟ ವಿಭಾಗದ ಸ್ಪರ್ಧೆಯಲ್ಲಿ ಕೆ.ಅಶುತೋಶ್, ಜೆ.ಉಜ್ವಲ್ ದ್ವಿತೀಯ, ಮ್ಯಾನೇಜ್ಮೆಂಟ್ ವಿಭಾಗದ ಸ್ಪರ್ಧೆಯಲ್ಲಿ ರಿದ್ದಿ ಜೈನ್, ಯೋಗೀತಾ ದ್ವಿತೀಯ ಬಹುಮಾನ ಪಡೆದಿದ್ದಾರೆ. ಭಾರತೀಯ ಜನಪದ ನೃತ್ಯದಲ್ಲಿ ಬಿ.ಅನನ್ಯ ಗೌಡ, ಉಜ್ವಲ್, ಯೋಗೀತಾ, ಸ್ನೇಹಾ, ಸ್ಫೂರ್ತಿ ಮತ್ತು ರಿದ್ದಿ ಜೈನ್ ತಂಡ ದ್ವಿತೀಯ ಬಹುಮಾನಗಳಿಸಿದ್ದಾರೆ. ವಿದ್ಯಾರ್ಥಿಗಳ ಉತ್ತಮ ಪ್ರದರ್ಶನಕ್ಕಾಗಿ ಉತ್ತಮ ತಂಡ ಎಂದು ದ್ವಿತೀಯ ಬಹುಮಾನ ನೀಡಿ ಅಭಿನಂದಿಸಲಾಗಿದೆ ಕಾಲೇಜ್ ಆಡಳಿತ ಮಂಡಳಿ ತಿಳಿಸಿದೆ.