ಯಾವ ಪುರುಷಾರ್ಥಕ್ಕಾಗಿ ಜನಸ್ಪಂದನ ಕಾರ್ಯಕ್ರಮ: ಈಶ್ವರ್ ಖಂಡ್ರೆ

Eshwara Khandre
Published on

ತುಮಕೂರು

ಯಾವ ಪುರುಷಾರ್ಥಕ್ಕಾಗಿ ಜನಸ್ಪಂದನ ಹಾಗೂ ಜನೋತ್ಸವ ಕಾರ್ಯಕ್ರಮವನ್ನು ಬಿಜೆಪಿಯವರು ಮಾಡಿಕೊಳ್ಳುತ್ತಿದ್ದಾರೆ. ಜನ ಸಂಕಷ್ಟಕ್ಕೆ ಸಿಲುಕಿ ಸಾಯುತ್ತಿದ್ದು ಅದಕ್ಕಾಗಿಯಾ ಈ ಜನೋತ್ಸವನಾ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹರಿಹಾಯ್ದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರೆಲ್ಲಾ ಇವತ್ತು ದಾರಿ ತಪ್ಪಿಹೋಗ್ತಿದ್ದು ಉದ್ಯೋಗ ಸೃಷ್ಟಿಸಿದೆ ಅವರ ಭವಿಷ್ಯ ನಾಶ ಮಾಡಿದ್ದಿರಾ. ಅದಕ್ಕಾಗಿ ಈ ಉತ್ಸವನಾ? ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು ಸರ್ಕಾರವು ದಾರಿ ತಪ್ಪಿಹೋಗಿದೆ. ನಿಮ್ಮ ದುರಾಡಳಿತದಿಂದ ಜನ ಬೇಸತ್ತು ಜನ ಛೀಮಾರಿ ಹಾಕುತ್ತಿದ್ದು ಅದಕ್ಕೆ ನೀವು ಜನೋತ್ಸವಾ ಮಾಡಿಕೊಳ್ತೀರಾ ಎಂದು ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net