ವಿಧಾನಸಭಾ ಚುನಾವಣೆ: ಬಿಜೆಪಿ ವಾರ್ ರೂಮ್ ಈಗಿಂದಲೇ ಕಾರ್ಯಾರಂಭ!

BJP War Room
Published on

ಬೆಂಗಳೂರು: 2023ರ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿ ವಾರ್​ ರೂಮ್​ ಈಗಿಂದಲೇ ಆರಂಭಗೊಂಡಿದ್ದು, ಅದಕ್ಕಾಗಿ ಸಕಲ ವ್ಯವಸ್ಥೆಗಳನ್ನು ಒಳಗೊಂಡ ಕೇಂದ್ರವನ್ನೂ ತೆರೆಯಲಾಗಿದೆ. ಮಲ್ಲೇಶ್ವರದ 8ನೇ ಮುಖ್ಯ ರಸ್ತೆಯಲ್ಲಿ ಕೆನರಾ ಯೂನಿಯನ್ ಎದುರು ಇಂದು ಈ ವಾರ್​ ರೂಮ್ ಉದ್ಘಾಟನೆಗೊಂಡಿದೆ.

ಈ ವಾರ್ ರೂಮ್​ನಲ್ಲಿ ಮೀಡಿಯಾ ಸೆಂಟರ್, ಕಾಲ್ ಸೆಂಟರ್, ಸಾಮಾಜಿಕ ಜಾಲತಾಣಕ್ಕೆ ಬೇಕಾದ ಎಲ್ಲ ವ್ಯವಸ್ಥೆ, ಮಾಧ್ಯಮ ಮಿತ್ರರಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸಿಕೊಡುವ ಮೂಲಕ ಸರ್ವಸನ್ನದ್ಧಗೊಳಿಸಲಾಗಿದೆ.

ಬಿಜೆಪಿ ಮುಂದಿನ ಚುನಾವಣೆ ದೃಷ್ಟಿಯಿಂದ ಪೇಜ್ ಕಮಿಟಿಯಿಂದ ಆರಂಭಿಸಿ ಬೂತ್ ಸಶಕ್ತೀಕರಣ ಕಾರ್ಯಪೂರ್ಣಗೊಳಿಸಿದೆ. ಚುನಾವಣೆಗೆ ಕಾರ್ಯಕರ್ತ ಸೈನಿಕರ ಪೂರ್ಣ ಸಿದ್ಧತೆ ಆಗಿದೆ. ಮತಗಟ್ಟೆಯಲ್ಲೂ ವಾರ್ ರೂಮ್​ಗಳು ಆರಂಭಗೊಂಡಿವೆ.

ಮತಗಟ್ಟೆ ವಾರ್ ರೂಂ ಮೂಲಕ ಜಿಲ್ಲೆ, ಜಿಲ್ಲೆಯಿಂದ ಮಂಡಲ, ಮಂಡಲದಿಂದ ಮತಗಟ್ಟೆವರೆಗೆ, ಮತಗಟ್ಟೆಯಿಂದ ಕಾರ್ಯಕರ್ತ, ಅಲ್ಲಿಂದ ಮತದಾರರನ್ನು ಸಂಪರ್ಕಿಸುವ ಕಾರ್ಯಯೋಜನೆಗಳನ್ನು ಬಿಜೆಪಿ ಅನುಷ್ಠಾನಕ್ಕೆ ತರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net