ಬಿಜೆಪಿ ಉಗ್ರಗಾಮಿಗಳ ಪಕ್ಷ : ಖರ್ಗೆ ತಿರುಗೇಟು

kharge
Published on

ಅರ್ಬನ್ ನಕ್ಸಲ್‌ರು ಎಂದ ಮೋದಿಗೆ ಖರ್ಗೆ ತಿರುಗೇಟು | ಪ್ರಧಾನಿಯಾದಾಗಿನಿಂದಲೂ ದಲಿತ ಬುಡಕಟ್ಟು ಹಿಂದುಳಿದವರ ಮೇಲೆ ದಾಳಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಾಂಗ್ರೆಸ್ಸಿನವರು ಅರ್ಬನ್ ನಕ್ಸಲರು ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷರಾಗಿರುವ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಗುಡುಗಿದ್ದಾರೆ. ವಾಸ್ತವಾಗಿ ಬಿಜೆಪಿ ಪP್ಷÀವೇ ಉಗ್ರಗಾಮಿಗಳ ಪP್ಷÀವಾಗಿದೆ ಎಂದು ತಿರುಗೇಟು ನೀಡಿದರು.
ಮೋದಿ ಪ್ರಧಾನಿಯಾದ ಬಳಿಕ ಬಿಜೆಪಿಯವರು ದೇಶದಲ್ಲಿರುವ ದಲಿತ,ಹಿಂದುಳಿದ,ಬುಡಕಟ್ಟು ಇನ್ನಿತರ ಬಲಹೀನ ಸಮುದಾಯದವರ ಮೇಲೆ ನಿರಂತರವಾಗಿ ಉಗ್ರಗಾಮಿಗಳಂತೆ ದಾಳಿ ಮಾಡಿ ಹಿಂಸೆ ನೀಡುತ್ತಿದ್ದಾರೆ, ಅತ್ಯಾಚಾರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವರು ಮಾಡುತ್ತಿರುವುದು ಹಿಂಸೆ ಅಲ್ಲದೆ ಏನು ಎಂದು ಖಾರವಾಗಿ ಪ್ರಶ್ನಿಸಿದರು.
ನಗರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿ, ದೇಶದ ಬುದ್ದಿಜೀವಿಗಳು, ವಿಚಾರವಂತರನ್ನು ಪ್ರಧಾನಿ ಮೋದಿ ಅರ್ಬನ್ ನಕ್ಸಲ್ ಎನ್ನುತ್ತಾರೆ. ವಿಚಾರವಾದಿಗಳು, ಬುದ್ದಿಜೀವಿಗಳು ನಗರ ನಕ್ಸಲ್‌ರಾದರೆ ಬಿಜೆಪಿಯವರು ಉಗ್ರಗಾಮಿ ಎಂದು ಕಿಡಿಕಾರಿದರು. ಮೋದಿ ಈ ರೀತಿ ಮಾತು ಯಾವಾಗಲೂ ಹೇಳುತ್ತಲೇ ಇರುತ್ತಾರೆ ಎಂದು ಕಿಡಿಕಾರಿದರು.
ದುಕೃತ್ಯಗಳನ್ನು ಎಸಗುವವರಿಗೆ ಬೆಂಬಲ ನೀಡಿ ಈಗ ಬೇರೆಯವರ ಮೇಲೆ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ದಲಿತ, ಹಿಂದುಳಿದವರ ಮೇಲೆ ನಿರಂತರವಾಗಿ ಅತ್ಯಾಚಾರ, ದೌರ್ಜನ್ಯಗಳು ನಡೆಯುತ್ತಲೇ ಇವೆ. ಮೋದಿ ಅವರು ಬೇರೆಯವರ ಮೇಲೆ ಆರೋಪ ಮಾಡುವ ಬದಲು ಕೇಂದ್ರದಲ್ಲಿ ನಿಮ್ಮದೇ ಸರ್ಕಾರವಿದೆಯಲ್ಲ. ನಿಯಂತ್ರಣ ಮಾಡಿ, ನಿಮ್ಮ ವಿಫಲತೆ ಮುಚ್ಚಿಟ್ಟಿದ್ದರಿ, ಇಂತಹ ಕೃತ್ಯಗಳನ್ನು ಹತೋಟಿಗೆ ತರುವುದು ಅದು ಬಿಟ್ಟು ನಮ್ಮ ಮೇಲೆ ಆರೋಪ ಮಾಡುವುದು ಎಷ್ಟು ಸರಿ ಎಂದು ಖರ್ಗೆ ಪ್ರಶ್ನಿಸಿದರು.
ಕಾಂಗ್ರೆಸ್ ಪP್ಷÀವನ್ನು ಹಿಯಾಳಿಸುವುದು ಮೋದಿ ಚಾಳಿಯಾಗಿದೆ.ಹಿಂದಿನAತೆ ಈಗಲೂ ಅದನ್ನೇ ಹೇಳಿz್ದÁರೆ. ಕಾಂಗ್ರೆಸ್ ಬಗ್ಗೆ ಮೋದಿ ಹೇಳಿಕೆ ಹೊಸದೆನಲ್ಲ ಎಂದರು.
ಹರಿಯಾಣ ಕೈತಪ್ಪಿದಕ್ಕೆ ಬೇಸರ
ಹರಿಯಾಣ ವಿಧಾನ ಸಭಾ ಚುನಾವಣೆಯ ಸೋಲಿನ ಬಗ್ಗೆ ಎಐಸಿಸಿ ಅಧ್ಯP್ಷÀ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್ ಗೆಲ್ಲುತ್ತೆ ಅಂತ ಇಡೀ ದೇಶವೇ ಹೇಳುತ್ತಿತ್ತು. ದೃಶ್ಯ ಹಾಗೂ ಮುದ್ರಣ ಮಾಧ್ಯಮದವರು, ಎಲ್ಲ ಸಮುದಾಯ, ರಾಜಕೀಯ ಮುಖಂಡರು ಎಲ್ಲರ ಅಭಿಪ್ರಾಯ ಕಾಂಗ್ರೆಸ್ ಗೆಲ್ಲುತ್ತೆ ಅಂತಿತ್ತು. ಆದರೆ, ಫಲಿತಾಂಶ ಬೇರೆ ಬಂದಿದೆ. ಈ ರೀತಿ ಫಲಿತಾಂಶ ಬರಲು ಏನು ಕಾರಣ ಎನ್ನುವುದರ ಬಗ್ಗೆ ವಿಶ್ಲೇಷಣೆ ನಡೆಯುತ್ತಿದೆ ಎಂದರು.ಪ್ರತಿಯೊAದು ಬೂತ್‌ನಿಂದ ವರದಿ ತರಿಸಿಕೊಳ್ಳಲು ಸೂಚಿಸಿz್ದೆÃನೆ.ವರದಿ ಬಂದ ಬಳಿಕ ಮಾತನಾಡುವೆ. ಎಲ್ಲವೂ ನಮ್ಮ ಪರವಾಗಿದ್ದಾಗ ಫಲಿತಾಂಶ ಹೀಗೆಕಾಯಿತು ಎಂಬುದು ಅರ್ಥವಾಗುತ್ತಿಲ್ಲ. ಈಗ ಅದರ ಬಗ್ಗೆ ಏನನ್ನು ಹೇಳಲ್ಲ. ವರದಿ ಬಂದ ನಂತರ ನಮ್ಮ ತಪ್ಪೇನಾಗಿದೆ.ಚುನಾವಣೆಯಲ್ಲಿ ಮತ್ತೇನಾದರೂ ಆಗಿದೆಯೇ ಎನ್ನುವುದರ ಕುರಿತು ನೋಡೋಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net