ಅನಿರ್ದಿಷ್ಟಾವದಿ ಮುಷ್ಕರಕ್ಕೆ ಬಿಜೆಪಿ ಬೆಂಬಲ

FotoJet
Published on

ಮಾಗಡಿ : ಪುರಸಭೆ ಮುಂಭಾಗ ಪೌರ ನೌಕರರರು ನಡೆಸುತ್ತಿರುವ ಅನಿರ್ದಿಷ್ಟಾವದಿ ಮುಷ್ಕರ ಬುಧವಾರವೂ ಮುಂದುವರಿಯಿತು. ಮುಷ್ಕರಕ್ಕೆ ತಾಲೂಕು ಬಿಜೆಪಿ ಬೆಂಬಲ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಕೆ.ಆರ್.ಪ್ರಸಾದ್ ಗೌಡ ಮಾತನಾಡಿ, ಪೌರಕಾರ್ಮಿಕರು ಒಂದು ದಿನ ಕಾರ್ಯನಿರ್ವಹಿಸದಿದ್ದರೆ ಆ ನಗರವನ್ನು ನೋಡಲು ಸಾಧ್ಯವಿಲ್ಲ. ಅವರಿಗೆ ಖಾಯಂ ಗೊಳಿಸಲು ಸರ್ಕಾರ ಮಲತಾಯಿ ಧೋರಣೆ ತಾಳುವುದು ಸರಿಯಲ್ಲ. ಕೂಡಲೇ ಅವರ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಪೌರಕಾರ್ಮಿಕರ ಜತೆ ಬಿಜೆಪಿ ಹೋರಾಟಕ್ಕೆ ನಿಂತು ಧರಣಿ ಕೂರುವ ಮೂಲಕ ನ್ಯಾಯ ಒದಗಿಸುವ ಕೆಲಸ ಮಾಡುವುದಾಗಿ ಎಚ್ಚರಿಸಿದರು.

ಪೌರನೌಕರರ ಸಮಸ್ಯೆಗಳ ಬಗ್ಗೆ ಅರ್ಜಿ ನೀಡಿದರೆ ಬಿಜೆಪಿ ನಾಯಕರಾದ ಆರ್.ಅಶೋಕ್, ವಿಜಯೇಂದ್ರ ಅವರಿಗೆ ತಲುಪಿಸಿ ವಿಧಾನಸಭೆಯಲ್ಲಿ ಪೌರಕಾರ್ಮಿಕರ ಸಮಸ್ಯೆ ಬಗ್ಗೆ ಧ್ವನಿ ಎತ್ತಿ ಸರ್ಕಾರವನ್ನು ಕಿವಿ ಹಿಂಡುವ ಮೂಲಕ ನ್ಯಾಯ ಒದಗಿಸಲು ಬಿಜೆಪಿ ಬದ್ಧವಾಗಿದೆ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಆರ್.ರಾಘವೇಂದ್ರ ಮಾತನಾಡಿ, ಪೌರಕಾರ್ಮಿಕರು ತಮ್ಮ ಬೇಡಿಕೆಗಳಿಗಾಗಿ ಬೀದಿಯಲ್ಲಿ ಕೂರಿಸಿಕೊಂಡಿರುವುದು ಸರಿಯಲ್ಲ. ಸರ್ಕಾರ ಕೂಡಲೇ ಅವರ ಬೇಡಿಕೆ ಈಡೇರಿಸಬೇಕು ಎಂದರು.

ಮುಖಂಡರಾದ ಡೆಲ್ಲಿ ನಾರಾಯಣಪ್ಪ, ಹನುಮಂತೇಗೌಡ, ಬಜ್ಜ ಜಯರಾಮು, ಗೌತಮ್ ಬೋಪಣ್ಣ, ದಯಾನಂದ್, ಪೌರ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ನಾಗರಾಜು, ತಾಲೂಕು ಅಧ್ಯಕ್ಷ ರವಿ ಕುಮಾರ್, ಉಪಾಧ್ಯಕ್ಷ ಗಿರಿಧರ್, ದೇವರಾಜು, ಪ್ರಶಾಂತ್ ಕುಮಾರ್ ಶೆಟ್ಟಿ, ಆರ್‌ಐ.ರವಿ, ಹನುಮಯ್ಯ, ರೋಹಿತ್, ಕುಮಾರ್, ಅಶ್ವತ್ಥ್, ಗಂಗಾಧರ್, ಸರೋಜಾ, ಉಮಾದೇವಿ, ರಾಧಮ್ಮ, ವೆಂಕಟೇಶ್, ರವಿ, ದಿನೇಶ್ ಕುಮಾರ್, ಕೆಂಪಯ್ಯ, ಉಮೇಶ್, ಗಂಗರಾಮಯ್ಯ, ಅಪ್ಪಾಜಿ, ಇನಾಯಿತ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net