ಬೆಲೆ ಏರಿಕೆ ಖಂಡಿಸಿ ಶಾಸಕ ಡಾ. ಜಾಧವ ಪ್ರತಿಭಟನೆ

WhatsApp Image 2025-04-05 at 2.20.39 PM
Published on

ಚಿಂಚೋಳಿ:  ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ಕೇಂದ್ರ ಬಸ್ ನಿಲ್ದಾಣದವರೆಗೆ ಭಾರತೀಯ ಜನತಾ ಪಕ್ಷವು ಬೃಹತ್ ಮೆರವಣಿಗೆ ನಡೆಸಿದರು. ಶಾಸಕ ಡಾ. ಅವಿನಾಶ್ ಜಾಧವ್ ಅವರು ಸರಕಾರದ ಹಗಲು ದರೋಡೆ ನಡೆಸಲು ಮುಂದಾಗಿದೆ. ಬಡವರ, ಕಾರ್ಮಿಕರ, ರೈತರ ಬದುಕು ದುಸ್ಥಿತಿಗೆ ತಳ್ಳುತ್ತಿದೆ. ಪ್ರತಿ ನಿತ್ಯ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರಿಸುತ್ತ ಗ್ಯಾರಂಟಿ ಹೆಸರಲ್ಲಿ ಜನರ ರಕ್ತ ಹಿರುತ್ತಿದ್ದಾರೆ ಎಂದು ಸರಕಾರದ ವಿರುದ್ಧ ಹರಿಹಾಯ್ದರು.

ಅದೇ ರೀತಿ ಕಾಂಗ್ರೇಸ್ ಸರಕಾರದ ಬೆಲೆ ಏರಿಕೆ ಖಂಡಿಸಿ ಬಿಜೆಪಿಯ ಹಿರಿಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ ಚೆಂಗಟಾ, ಗೌತಮ ಪಾಟೀಲ್, ಶಾಮರಾವ ಕೋರವಿ, ಸಂತೋಷ ಗಡಂತಿ, ಅಶೋಕ್ ಚವ್ಹಾಣ, ವಿವೇಕ ದೇಗಲ್ಮಡಿ, ಶ್ರೀಮಂತ ಕಟ್ಟಿಮನಿ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net