ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

5 Arsi Protest
ಬೆಲೆ ಏರಿಕೆ ನೀತಿ ಖಂಡಿಸಿ ಬಿಜೆಪಿ ಮುಖಂಡರು ಅರಸೀಕೆರೆಯಲ್ಲಿ ಪ್ರತಿಭಟನೆ ನಡೆಸಿ, ಗ್ರೇಡ್ 2 ತಹಸೀಲ್ದಾರ್ ಪಾಲಾಕ್ಷ ಅವರಿಗೆ ಮನವಿ ಸಲ್ಲಿಸಿದರು. ಅವಿನಾಶ ನಾಯ್ಡು, ಯತೀಶ ಕುಮಾರ್, ಪ್ರಸಾದ್, ಸಿಂಧೂ ಇತರರು ಇದ್ದರು.
Published on

ಅರಸೀಕೆರೆ: ರಾಜ್ಯ ಸರ್ಕಾರದ ಸರಣಿ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಮುಖಂಡರು ನಗರದ ಬಸವೇಶ್ವರ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ನಗರ ಮಂಡಲ ಅಧ್ಯಕ್ಷ ಅವಿನಾಶ ನಾಯ್ಡು ಮಾತನಾಡಿ, ಗ್ಯಾರಂಟಿ ಘೋಷಣೆ ಹೆಸರಿನಲ್ಲಿ ಅಕಾರಕ್ಕೆ ಬಂದ ಕಾಂಗ್ರೆಸ್, ಜನ ಸಾಮಾನ್ಯರ ಜೇಬಿಗೆ ಬರೆ ಹಾಕಿ ಸುಲಿಗೆ ಮಾಡುವ ಪ್ರವೃತ್ತಿಗೆ ಇಳಿದಿರುವುದು ದುರಂತ ಎಂದರು.

2 ವರ್ಷದಲ್ಲಿ ಈ ಸರ್ಕಾರ 3 ಬಾರಿ ಹಾಲಿನ ದರ ಹೆಚ್ಚಳ ಮಾಡಿದೆ.ಪಹಣಿ, ಸ್ಟ್ಯಾಂಪ್ ಡ್ಯೂಟಿ, ಅಬಕಾರಿ, ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಎಲ್ಲ ಬಗೆಯ ಅಗತ್ಯ ವಸ್ತುಗಳ ಮೇಲೆ ಪದೇ ಪದೆ ಬೆಲೆ ಹೆಚ್ಚಿಸಿದೆ.

ಇದರಿಂದ ಬಡವರ ಬದುಕು ದುಬಾರಿಯಾಗಿದೆ. 5 ಗ್ಯಾರಂಟಿ ಕೊಡಲು ಹೋಗಿ 50 ರೀತಿಯಲ್ಲಿ ಹಣ ವಸೂಲಿಗೆ ಇಳಿದಿರುವುದು ಅಕ್ಷಮ್ಯ ಎಂದು ದೂರಿದರು. ಜನರು ದಂಗೆ ಏಳುವ ಮುನ್ನ ಹಾಲು, ಮೊಸರಿನ ದರ ಕಡಿಮೆ ಮಾಡಬೇಕು. ಹೊರೆ ತಗ್ಗಿಸಬೇಕು ಎಂದು ಅವಿನಾಶ ನಾಯ್ಡು ಆಗ್ರಹಿಸಿದರು.

ಗ್ರಾಮಾಂತರ ಮಂಡಲದ ಅಧ್ಯಕ್ಷ ಯತೀಶ ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಕಿರಣ್, ಸುನಿಲ್ ಶಾಸಿ, ಮಂಜು ಕುಮಾರ, ಸಿಂಧೂ, ಮುಖಂಡರಾದ ಪ್ರಸಾದ್, ಮನೋಜ್ ಕುಮಾರ, ಬಾಣಾವರ ಜಯಣ್ಣ, ಗಂಗಣ್ಣ, ದಿನೇಶ್, ಚೇತನ್ ಜೈನ್, ಸರೋಜಮ್ಮ, ಹೇಮಾವತಿ, ಪುರುಷೋತ್ತಮ, ರಮೇಶ್, ಲೋಕೇಶ್ ಇತರರು ಇದ್ದರು. ನಂತರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net