ಬಿಜೆಪಿ ಶಾಸಕ, ಪದಾಧಿಕಾರಿಗಳ ಮೇಲೆ ವೃಥಾ ಕೇಸ್: ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಆರೋಪ

New Project (59)
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೂಡುಬಿದಿರೆ ತಾಲೂಕಿನ ಪುರಸಭೆ ಹಾಗೂ 12 ಗ್ರಾಮ ಪಂಚಾಯಿತಿ ಕಾರ್ಯಾಲಯಗಳ ಎದುರು ಬಿಜೆಪಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಪುರಸಭೆಯ ಮುಂಭಾಗದಲ್ಲಿ ಬಿಜೆಪಿ ಬೆಂಬಲಿತ ಪುರಸಭಾ ಸದಸ್ಯರು ಮತ್ತು ಪಕ್ಷದ ಪ್ರಮುಖರು ಪ್ರತಿಭಟನೆ ನಡೆಸಿದರು. ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಪ್ರತಿಭಟನೆಕಾರರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಸಂವಿಧಾನ ವಿರೋಧಿ ಸರ್ಕಾರ ಆಡಳಿತ ನಡೆಸುತ್ತಿದೆ. ಬಿಜೆಪಿ ಶಾಸಕರು ಸಹಿತ ಜನಪ್ರತಿನಿಧಿಗಳ ಮತ್ತು ಪದಾಧಿಕಾರಿಗಳ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ಕೇಸ್‌ಗಳನ್ನು ಹಾಕಲಾಗುತ್ತಿದೆ ಎಂದರು.

ಪುರಸಭಾ ಅಧ್ಯಕ್ಷ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯರು, ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಬಿಜೆಪಿ ನಗರಾಧ್ಯಕ್ಷ ಲಕ್ಷ್ಮಣ ಪೂಜಾರಿ, ಪ್ರಮುಖರಾದ ಸುಕೇಶ್ ಶೆಟ್ಟಿ, ರಾಜೇಶ್ ಮಲ್ಯ ಮತ್ತಿತರರು ಭಾಗವಹಿಸಿದ್ದರು.

ಪಾಲಡ್ಕ ಗ್ರಾಪಂ ಕಚೇರಿ ಎದುರು ದಿನೇಶ್ ಕಂಗ್ಲಾಯಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಹಿರಿಯ ವಕೀಲ ಕೆ.ಆರ್.ಪಂಡಿತ್ ಪ್ರತಿಭಟನೆಯಲ್ಲಿ ಮಾತನಾಡಿದರು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್, ಮುಖಂಡರಾದ ಮೋಹನ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ, ಸುದರ್ಶನ್ ಆಚಾರ್ಯ ಕೊಳಕೆಬೈಲ್, ಬೂತ್ ಅಧ್ಯಕ್ಷ ನಾಗರಾಜ ಪೂಜಾರಿ, ಮಂಡಲ ಒಬಿಸಿ ಮೋರ್ಚಾ ಕಾರ್ಯದರ್ಶಿ ಸಂತೋಷ್ ಭಂಡಾರಿ, ಜಗದೀಶ್ ಕಲ್ಲೋಟ್ಟು, ಸದಸ್ಯ ಸುಕೇಶ್ ಶೆಟ್ಟಿ, ರೇಖಾ, ಕಾಂತಿ, ಹರಿಣಿ ರಂಜಿತ್ ಭಂಡಾರಿ ಮತ್ತಿತರಿದ್ದರು.

ಪುತ್ತಿಗೆ ಗ್ರಾಪಂ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಬಿಜೆಪಿಯ ದ.ಕ. ಜಿಲ್ಲಾ ಸದಸ್ಯ ಎಂ.ಬಾಹುಬಲಿ ಪ್ರಸಾದ್, ಗ್ರಾಪಂ ಸದಸ್ಯರಾದ ದಿನೇಶ್ ಗೌಡ, ಸುಮ ಭಟ್, ಸಾರಿಕಾ ಆಚಾರ್ಯ, ಅಪ್ಪಿ, ಪ್ರಮುಖರಾದ ನಾಗವರ್ಮ ಜೈನ್, ಶಶಿಧರ್ ಪಿ.ನಾಯಕ್, ಶಶಿಧರ್ ಎಸ್.ಅಂಚನ್ ಎನಿಕ್ರಿಪಲ್ಲ, ನಾಗರಾಜ ಕರ್ಕೇರ, ಉದಯಕುಮಾರ್ ಶೆಟ್ಟಿ, ಪ್ರಭಾಕರ ಕುಲಾಲ್, ಕಿಶೋರ್ ಕುಮಾರ್, ಸಚಿನ್ ಭಟ್, ಗಿರೀಶ್ ಕುಮಾರ್ ಹಂಡೇಲು ಮತ್ತಿತರರಿದ್ದರು.

ದರೆಗುಡ್ಡೆ ಗ್ರಾಪಂ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಗ್ರಾಪಂ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಬಿಜೆಪಿ ಮಂಡಲ ಉಪಾಧ್ಯಕ್ಷ ಸೂರಜ್ ಜೈನ್, ಪ್ರಮುಖರಾದ ಸಮಿತ್‌ರಾಜ್ ದರೆಗುಡ್ಡೆ ಸಹಿತ ಕಾರ್ಯಕರ್ತರು ಉಪಸ್ಥಿತರಿದ್ದರು.

ಇರುವೈಲು ಗ್ರಾಪಂ ಕಾರ್ಯಾಲಯದ ಎದುರು ನಡೆದ ಪ್ರತಿಭಟನೆಯಲ್ಲಿ ಗ್ರಾಪಂ ಅಧ್ಯಕ್ಷೆ ಲಲಿತಾ ಮುಗೇರ, ಸದಸ್ಯರಾದ ನಾಗೇಶ್ ಅಮೀನ್, ನವೀನ್ ಪೂಜಾರಿ ಕಿಟ್ಟುಬೆಟ್ಟು, ರುಕ್ಮಿಣಿ, ಮೋಹಿನಿ, ಕುಸುಮ, ಜಯಶಂಕರ್, ಉಷಾ ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net