

ಉಪ್ಪಿನಂಗಡಿ: ರಾಜ್ಯ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ, ತುಷ್ಟೀಕರಣ ನೀತಿ ಸಹಿತ ಜನವಿರೋಧಿ ಆಡಳಿತವನ್ನು ವಿರೋಧಿಸಿ ಇಳಂತಿಲ ಗ್ರಾಪಂ ಕಚೇರಿ ಮುಂಭಾಗ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರಮುಖರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿ, ಸ್ವಪಕ್ಷೀಯರೇ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಿದ್ದರೂ ಸರಕಾರ ಲಜ್ಜೆಗೆಟ್ಟಂತೆ ವರ್ತಿಸುತ್ತಿದೆ ಎಂದರು.
ರವೀಂದ್ರ ಆಚಾರ್ಯ, ತಿಮ್ಮಪ್ಪ ಗೌಡ, ರಾವ ನಾಯ್ಕ, ಪೆಲಪ್ಪಾರು ವೆಂಕಟರಮಣ ಭಟ್, ಪುರಂದರ, ರಮೇಶ್ ಶ್ರೀ ದುರ್ಗಾ, ಕರುಣಾಕರ, ಮೋಹನ್ ಶೆಟ್ಟಿ, ವಸಂತ ಪಂಚವಟಿ, ಪ್ರವೀಣ್, ಶಶಿ ನಾರಾಯಣ ಭಟ್, ಪ್ರೀತಂ ಮತ್ತಿತರರು ಭಾಗವಹಿಸಿದ್ದರು.