ಸಂಗಬೆಟ್ಟಲ್ಲಿ ಬಿಜೆಪಿ ಪ್ರತಿಭಟನೆ

New Project (36)
Published on

ಬಂಟ್ವಾಳ: ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕುರ್ಚಿಗೆ ಸ್ವಪಕ್ಷೀಯ ಶಾಸಕರು ಬಾಂಬ್ ಇಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಆರೋಪಿಸಿದರು.

ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಬಿಜೆಪಿ ವತಿಯಿಂದ ಸಂಗಬೆಟ್ಟು ಗ್ರಾಪಂ ಕಚೇರಿ ಎದುರುಗಡೆ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಸಂಗಬೆಟ್ಟು ಗ್ರಾಪಂ ಅಧ್ಯಕ್ಷೆ ರಾಜೀವಿ ಪೂಜಾರ್ತಿ, ಉಪಾಧ್ಯಕ್ಷ ಸುರೇಶ್ ಕುಲಾಲ್, ಸದಸ್ಯರಾದ ಸಂದೇಶ್ ಶೆಟ್ಟಿ ಪೊಡುಂಬ, ಸುನೀಲ್ ಶೆಟ್ಟಿಗಾರ್, ಉದಯ ಪೂಜಾರಿ, ಶಕುಂತಲಾ, ಪ್ರೇಮಾ, ವಿದ್ಯಾ ಪ್ರಭು, ಶಾಂತಾ, ಸಿದ್ದಕಟ್ಟೆ ಸಿಎ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಶೆಟ್ಟಿಗಾರ್, ಶಕ್ತಿ ಕೇಂದ್ರದ ಪ್ರಮುಖ್ ನವೀನ್ ಹೆಗ್ಡೆ, ಬಿಜೆಪಿ ಪ್ರಮುಖರಾದ ದೀಪಕ್ ಶೆಟ್ಟಿಗಾರ್, ಉಮೇಶ್ ಗೌಡ, ಸುಂದರ ಪೂಜಾರಿ, ಭಾಸ್ಕರ ಪ್ರಭು, ಸದಾನಂದ ಪೂಜಾರಿ ಕರ್ಪೆ, ಮಾಧವ ಶೆಟ್ಟಿಗಾರ್, ವಿನೋದ್ ಅಡಪ, ಭೋಜ ಶೆಟ್ಟಿಗಾರ್, ಗಣೇಶ ಮೇಲುಗುಡ್ಡೆ, ದಾಮೋದರ ಪೂಜಾರಿ, ರಾಜೇಶ್ ಶೆಟ್ಟಿ, ಪ್ರಭಾಕರ ಪ್ರಭು, ಸಂದೇಶ್ ಶೆಟ್ಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net