ಸಂವಿಧಾನ ವಿರೋಧಿ ಮಸೂದೆ ಜಾರಿ : ಶಾಸಕ ರಾಜೇಶ್ ನೈಾಕ್ ಹೇಳಿಕೆ

New Project (64)
Published on

ಬಂಟ್ವಾಳ: ಸಂವಿಧಾನ ಬದಲು ಮಾಡುತ್ತೇವೆ ಎಂದು ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಬುಧವಾರ ಬಿ.ಸಿ.ರೋಡು ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಯಿತು.

ಶಾಸಕ ರಾಜೇಶ್ ನೈಾಕ್ ಮಾತನಾಡಿ, ಸರ್ಕಾರಿ ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಬೇಕೆನ್ನುವ ಸಂವಿಧಾನ ವಿರೋಧಿ ಮಸೂದೆಯನ್ನು ಜಾರಿಗೊಳಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಧರ್ಮಾಧರಿತವಾದ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ, ಯಾವುದೋ ಒಂದು ಸಮುದಾಯವನ್ನು ಓಲೈಕೆ ಮಾಡಿ ಓಟು ಬ್ಯಾಂಕ್ ಗಟ್ಟಿ ಮಾಡುವ ಉದ್ದೇಶದಿಂದ ಈ ಬಿಲ್ ಪಾಸ್ ಮಾಡಲು ಸರ್ಕಾರ ಉದ್ದೇಶಿಸಿತ್ತು. ಸಂವಿಧಾನ ಬದಲಾವಣೆ ಮಾಡಿಯಾದರೂ ಮಸೂದೆ ಜಾರಿ ತರುತ್ತೇವೆ ಎಂದು ಉಪಮುಖ್ಯಮತ್ರಿ ಡಿ.ಕೆ.ಶಿವಕುಮಾರ್ ಹೇಳಿರುವುದು ವಿಷಾದನೀಯ. ಈ ಬಗ್ಗೆ ಕ್ಷಮೆ ಕೇಳಬೇಕು, ಕಾಂಗ್ರೆಸ್ ಪಕ್ಷ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಮಾತನಾಡಿ, ತನ್ನ ಹುದ್ದೆಗೆ ರಾಜಿನಾಮೆ ಕೊಟ್ಟು ಕರ್ನಾಟಕಕ್ಕೆ ಮಾದರಿ ರಾಜಕಾರಣಿಯಾಗಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಆಡಳಿತದಲ್ಲಿ ಜಾತಿ ರಾಜಕಾರಣ, ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಲಂಚತನ, ವಂಶಾಡಳಿತ, ಮುಸ್ಲಿಂ ತುಷ್ಟೀಕರಣದ ರಾಜಕಾರಣವನ್ನು ಮಾಡಿದೆ ಎಂದು ಆರೋಪಿಸಿದರು.

ಸಭಾಧ್ಯಕ್ಷ ಯು.ಟಿ. ಖಾದರ್ 18 ಶಾಸಕರನ್ನು ಅಮಾನತು ಮಾಡಿದ್ದು ಹೀನ ಕೃತ್ಯ. ತುಳುನಾಡಿನ ಮಣ್ಣಿನ ಋಣ ಇದ್ದರೆ ಶಾಸಕರ ಮೇಲಿನ ಕ್ರಮವನ್ನು ವಾಪಸ್ಸು ಪಡೆದುಕೊಳ್ಳಿ ಎಂದು ಆಗ್ರಹಿಸಿದರು.

ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ರಾಜ್ಯ ನಾಯಕಿ ಸುಲೋಚನಾ ಭಟ್, ಪಕ್ಷದ ಪ್ರಮುಖರಾದ ರವೀಂದ್ರ ಕಂಬಳಿ ಶಿವಪ್ರಸಾದ್, ದಿನೇಶ್ ಭಂಡಾರಿ, ದೇವಪ್ಪ ಪೂಜಾರಿ, ದಿನೇಶ್ ಅಮ್ಟೂರು ಪ್ರಭಾಕರ ಪ್ರಭು, ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಕಮಲಾಕ್ಷಿ ಪೂಜಾರಿ ಸಂಜೀವ ಪೂಜಾರಿ ಪಿಲಿಂಗಾಲು, ಪುರುಷೋತ್ತಮ ಶೆಟ್ಟಿ, ಜನಾರ್ದನ ಕುಲಾಲ್ ಬೊಂಡಾಲ, ರಾಮದಾಸ್ ಬಂಟ್ವಾಳ್, ಹರಿಪ್ರಸಾದ್, ಸುದರ್ಶನ್ ಬಜ, ಪ್ರೇಮನಾಥ ಶೆಟ್ಟಿ, ಜಯರಾಂ ರೈ ಹರ್ಷಿಣಿ ಪುಷ್ಪಾನಂದ, ಡೊಂಬಯ್ಯ ಅರಳ, ಮನೋರಂಜನ್ ಕರೈ, ಪುರುಷೋತ್ತಮ ಕೊಟ್ಟಾರಿ, ರೊನಾಲ್ಡ್ ಡಿಸೋಜಾ, ಕಿಶೋರ್ ಪಲ್ಲಿಪ್ಪಾಡಿ, ವೆಂಕಟೇಶ್ ನಾವಡ ರಾಧಕೃಷ್ಣ ತಂತ್ರಿ, ಮಚ್ಚೇಂದ್ರ ಸಾಲ್ಯಾನ್ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net