ಅಕ್ರಮ ಮರಳುಗಾರಿಕೆ ತಂದ ಆಪತ್ತು : ಉಳಿಯ ಕೈಸೇತುವೆಗೆ ಶಾಶ್ವತ ವಿದಾಯ? ಜನರೇ ಹಣ ಒಟ್ಟು ಮಾಡಿ ನಿರ್ಮಿಸಿದ್ದರು

New Project (53)
Published on

ಅನ್ಸಾರ್ ಇನೋಳಿ ಉಳ್ಳಾಲ

ದೋಣಿ ಸಂಚಾರಕ್ಕೆ ವಿದಾಯ ಹೇಳಲು ಸ್ಥಳೀಯರೇ ಹಣ ಒಟ್ಟು ಸೇರಿಸಿ ಕೈಸೇತುವೆ ನಿರ್ಮಿಸಿದರು. ಆದರೆ ಈಗ ಅದಕ್ಕೂ ಶಾಶ್ವತ ವಿದಾಯ ಹೇಳುವ ದಿನಗಳು ಬಂದಿವೆ. ಇದಕ್ಕೆ ಕಾರಣ ಅಕ್ರಮ ಮರಳುಗಾರಿಕೆಯಿಂದ ಆದ ಅಧ್ವಾನ ಎನ್ನುವುದು ಸತ್ಯ. ಇದು ಪಾವೂರು ಉಳಿಯದ ಕಥೆ.

ಒಂದು ಕಾಲದಲ್ಲಿ ಜನವಾಸದಿಂದಲೇ ಹೆಸರುವಾಸಿಯಾಗಿದ್ದ ಉಳಿಯ, ಮೂಲ ಸೌಕರ್ಯ ಕೊರತೆಯಿಂದ ಪ್ರಸ್ತುತ ದಿನಗಳಲ್ಲಿ ಜನವಾಸ ಕ್ಷೀಣಿಸಿದೆ. ಇಲ್ಲಿ ಈಗಲೂ 56 ಮನೆಗಳಿವೆ. ಆದರೆ ವಾಸವಿರುವುದು 33 ಕುಟುಂಬಗಳು ವಾತ್ರ. ಮಕ್ಕಳ ಶಿಕ್ಷಣ, ಉನ್ನತ ಉದ್ಯೋಗದ ಕನಸಿನಲ್ಲಿ ಸೌಕರ್ಯವಂಚಿತ ಉಳಿಯ ದ್ವೀಪಕ್ಕೆ ವಿದಾಯ ಹೇಳಿದ್ದಾರೆ. ಅವರು ವಾಸವಿದ್ದ ಮನೆಗಳ ಪೈಕಿ ಕೆಲವು ಶಿಥಿಲಗೊಂಡರೆ, ಕೆಲವು ಅರೆಬರೆ ಗೋಡೆಗಳಲ್ಲಿ ಉಳಿದುಕೊಂಡು ಇಲ್ಲಿನ ಸ್ಥಿತಿಯನ್ನು ಸಾಕ್ಷೀಕರಿಸುತ್ತಿವೆ.

ಪಾವೂರು ಗ್ರಾಮ ವ್ಯಾಪ್ತಿಯ ಉಳಿಯ ದ್ವೀಪದಲ್ಲಿ ವಾಸವಿರುವವರು ಅಗತ್ಯ ಕೆಲಸ ಕಾರ್ಯಗಳಿಗೆ, ತಮ್ಮ ಮಕ್ಕಳನ್ನು ನಗರ ಪ್ರದೇಶದ ಶಾಲೆಗೆ ಕಳುಹಿಸಲು ಹಿಂದೆ ದೋಣಿ ಬಳಸುತ್ತಿದ್ದರು. ಆದರೆ ಇದು ಅಪಾಯಕಾರಿ ಎಂದೆನಿಸಿದ್ದರಿಂದ ಸುಮಾರು 1993ರಿಂದ ಚರ್ಚ್ ಧರ್ಮಗುರುವಿನ ನೇತೃತ್ವದಲ್ಲಿ ಹಣ ಸಂಗ್ರಹಿಸಿ ಕೈಸೇತುವೆ ನಿರ್ಮಿಸುತ್ತಾ ಬರಲಾಗಿದೆ. ಆರಂಭದಲ್ಲಿ ಬಿದಿರಿನ ಸೇತುವೆ ನಿರ್ಮಿಸಿದ್ದು ಬಾಳಿಕೆ ಬರದ ಕಾರಣ ಬಳಿಕ ಕಬ್ಬಿಣ ಬಳಸಲಾಯಿತು. ಬಿದಿರಿನ ಸೇತುವೆಗೆ 70 ಸಾವಿರ ರೂ. ಖರ್ಚು ತಗಲಿದರೆ, ಕಬ್ಬಿಣದ ಸೇತುವೆಗೆ 19 ಲಕ್ಷದಷ್ಟು ಖರ್ಚು ತಗಲುತ್ತದೆ.

ಗ್ಯಾಸ್‌ಗೂ ಸಾಕಾಗುತ್ತಿಲ್ಲ ಬೋಟು ಹಣ!

ಈ ಭಾಗದ ಜನರ ಅನುಕೂಲಕ್ಕಾಗಿ ಸರ್ಕಾರದಿಂದ ದೋಣಿ ನೀಡಲಾಗಿದೆ. ಚರ್ಚ್ ಅಧೀನದಲ್ಲಿರುವ ದೋಣಿಯನ್ನು ಸ್ಥಳೀಯರೇ ನಿರ್ವಹಿಸುತ್ತಿದ್ದಾರೆ. ಪ್ರತಿದಿನ ವಿದ್ಯಾರ್ಥಿಗಳ ಸಹಿತ 30ರಿಂದ 35 ಮಂದಿ ಈ ಬೋಟ್‌ನಲ್ಲಿ ಸಂಚರಿಸುತ್ತಾರೆ. ಕೆಲವೊಮ್ಮೆ ಹೊರಗಿನ ಜನರು, ವಿದ್ಯಾರ್ಥಿಗಳು ದ್ವೀಪಕ್ಕೆ ಬರುತ್ತಾರೆ. ಬೋಟ್‌ನಲ್ಲಿ ಹೋಗಿ ಬರಲು ಸ್ಥಳೀಯರಿಗೆ 20 ರೂಪಾಯಿ ದರವಿದ್ದರೆ, ಹೊರಗಿನವರಿಗೆ 30 ರೂಪಾಯಿ ದರ ವಿಧಿಸಲಾಗುತ್ತದೆ. ಮಕ್ಕಳಿಂದ ಐದು ರೂಪಾಯಿ ಪಡೆಯಲಾಗುತ್ತದೆ.

17 ಕೆ.ಜಿ.ಯ ಗ್ಯಾಸ್ ಸಿಲಿಂಡರ್ ಹತ್ತು ದಿನ ಬರುತ್ತದೆ. ಒಂದು ಸಿಲಿಂಡರ್ ದರ 1800 ರೂ. ಆಗುತ್ತದೆ. ಸಿಲಿಂಡರ್ ಬದಲಾಯಿಸುವಾಗ ಎರಡು ಲೀಟರ್ ಆಯಿಲ್ ಹಾಕಬೇಕಿದ್ದು, ಇದಕ್ಕೆ 360 ರೂ. ಖರ್ಚು ತಗಲುತ್ತದೆ. ಇವೆಲ್ಲವನ್ನೂ ಲೆಕ್ಕ ಹಾಕಿದರೆ ದೋಣಿಯಿಂದ ಸಂಗ್ರಹವಾಗುವ ಆದಾಯಕ್ಕಿಂತ ಖರ್ಚು ವೆಚ್ಚವೇ ಹೆಚ್ಚಾಗುತ್ತದೆ. ಇನ್ನು ರಜಾ ದಿನಗಳಲ್ಲಿ ಪ್ರಯಾಣಿಕರೇ ಇರುವುದಿಲ್ಲ ಎನ್ನುತ್ತಾರೆ ಬೋಟ್ ಚಾಲಕ ರೊನಾಲ್ಡ್ ಡಿಸೋಜ.

ಬೆಳಗ್ಗೆ 6.30, 7, 7.30, 8, 8.30, 9, 10 ಗಂಟೆಯವರೆಗೆ ಏಳು ಟ್ರಿಪ್ ಬೋಟು ಸಂಚರಿಸುತ್ತದೆ. ಮಧ್ಯಾಹ್ನ 1 ಗಂಟೆಯಿಂದ 3, 4, 4.30, 5, 5.30, 6, 6.30, 7 ಗಂಟೆಯವರೆಗೆ ಬೋಟ್ ಸಂಚರಿಸುತ್ತದೆ. ಹೀಗೆ ದಿನಕ್ಕೆ 16 ಬಾರಿ ಆ ಕಡೆಯಿಂದ ಈ ಕಡೆಗೆ ಬೋಟ್ ಸಂಚರಿಸುತ್ತದೆ.

ಕಳೆದ ವರ್ಷ ಮುಳುಗಡೆ

ಪ್ರತಿವರ್ಷ ನಿರ್ಮಿಸಲಾಗುತ್ತಿದ್ದ ಕೈಸೇತುವೆಯನ್ನು ಜೂನ್ ಮೊದಲ ವಾರದಲ್ಲಿ ತೆರವುಗೊಳಿಸಲಾಗುತ್ತಿತ್ತು. 2022ರಲ್ಲಿ ಹರೇಕಳ - ಅಡ್ಯಾರ್ ಅಣೆಕಟ್ಟು ನಿರ್ವಾಣಗೊಂಡ ಹಿನ್ನೆಲೆಯಲ್ಲಿ ಸೇತುವೆ ಏಪ್ರಿಲ್ ತಿಂಗಳಲ್ಲೇ ಮುಳುಗಡೆಯಾಗಿದ್ದರಿಂದ ತೆರವುಗೊಳಿಸಲಾಗಿತ್ತು. ನಂತರದ ವರ್ಷಗಳಲ್ಲಿ ಕೈಸೇತುವೆ ನಿರ್ಮಿಸಲಾಗಿತ್ತಾದರೂ ಈ ವರ್ಷ ಅದಕ್ಕೆ ಅವಕಾಶವೇ ಸಿಕ್ಕಿಲ್ಲ. ಯಾಕೆಂದರೆ ಪ್ರತಿವರ್ಷ ಇಲ್ಲಿ 18 ಅಡಿಗಿಂತ ಕಡಿಮೆ ನೀರು ಇರುತ್ತಿತ್ತು. ಆದರೆ ಈ ವರ್ಷ 20 ಅಡಿಗಿಂತ ಹೆಚ್ಚಿದೆ. ಇದಕ್ಕೆ ದ್ವೀಪದ ಸಮೀಪದಲ್ಲಿ ನಡೆದ ಅಕ್ರಮ ಮರಳುಗಾರಿಕೆಯೇ ಕಾರಣ ಎನ್ನುವ ಗಂಭೀರ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.

ಕಳೆದ ವರ್ಷ ನೀರು 18 ಅಡಿಗಿಂತ ಕಡಿಮೆಯಿದ್ದ ಕಾರಣ ಜೂನ್ 2ರಂದು ಕೈ ಸೇತುವೆ ತೆರವುಗೊಳಿಸಲಾಗಿತ್ತು. ಈ ಬಾರಿ ಮರಳುಗಾರಿಕೆಯಿಂದಾಗಿ ನದಿ ಆಳವಾಗಿದ್ದು ಕೈ ಸೇತುವೆ ನಿರ್ವಾಣ ಸಾಧ್ಯವಾಗಿಲ್ಲ. ನೀರು ಕಡಿಮೆಯಾದರೆ ಡಿಸೆಂಬರ್‌ನಲ್ಲಿ ಕೈಸೇತುವೆ ನಿರ್ಮಾಣವಾಗುತ್ತದೆ. ದೋಣಿಯಿಂದ ಬರುವ ಆದಾಯ ನಿರ್ವಹಣೆಗೂ ಸಾಕಾಗುವುದಿಲ್ಲ. ರೊನಾಲ್ಡ್ ಡಿಸೋಜ, ದೋಣಿ ಚಾಲಕ ಹಿಂದೆ ಕೈ ಸೇತುವೆ ಇರುವಾಗ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದರೆ, ಈಗ ನಾವು ಪ್ರತಿದಿನ ಬೋಟ್‌ನಲ್ಲೇ ಶಾಲೆಗೆ ಹೋಗಿ ಬರುತ್ತೇವೆ. ಮಳೆಗಾಲದಲ್ಲಿ ನೀರು ಹೆಚ್ಚು ಇರುವಾಗ ಸ್ವಲ್ಪ ಭಯವಾಗುತ್ತದೆ. ಏಂಜಲ್ ಕುಟಿನ್ಹೋ, ಮೂರನೇ ತರಗತಿ ವಿದ್ಯಾರ್ಥಿನಿ https://www.vijayavani.net/%e0%b2%a1%e0%b3%8d%e0%b2%b0%e0%b2%97%e0%b3%8d%e0%b2%b8%e0%b3%8d-%e0%b2%ae%e0%b2%be%e0%b2%ab%e0%b2%bf%e0%b2%af%e0%b2%be-%e0%b2%b5%e0%b2%bf%e0%b2%b0%e0%b3%81%e0%b2%a6%e0%b3%8d%e0%b2%a7-%e0%b2%a7 https://www.vijayavani.net/bajrang-dal-leader-d-vijayashishs-nudinamana

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net