

ಕಡಬ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಹಿಂದು ವಿರೋಧಿ ಶಕ್ತಿಗಳ ಅಟ್ಟಹಾಸ ಜೋರಾಗುತ್ತಿದೆ. ಕಿಡಿಗೇಡಿಗಳ ಕೃತ್ಯದ ಬಗ್ಗೆ ಮೃದು ಧೋರಣೆ ತಳೆದು ಕಾಂಗ್ರೆಸ್ ಅವರಿಗೆ ಕುಮ್ಮಕ್ಕು ನೀಡುತ್ತಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೃಷ್ಣ ಶೆಟ್ಟಿ ಕಡಬ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಸಂಜೆ ಕಡಬ ಪೇಟೆಯಲ್ಲಿ ಕಡಬ ತಾಲೂಕು ಗಣೇಶೋತ್ಸವ ಸಮಿತಿಗಳ ನೇತೃತ್ವದಲ್ಲಿ, ಮಂಡ್ಯದ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆಯ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿರುವುದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಹಿರಿಯ ಹಿಂದು ಮುಖಂಡ ಕಡ್ಯ ವಾಸುದೇವ ಭಟ್ ಮಾತನಾಡಿದರು. ಪ್ರಮುಖರಾದ ವೆಂಕಟ್ರಮಣ ರಾವ್ ಮಂಕುಡೆ, ಶ್ರೀಕೃಷ್ಣ ಎಂ.ಆರ್, ಪ್ರಮೀಳಾ ಲೋಕೇಶ್, ಚಂದ್ರಶೇಖರ ತುಂಬಿಮನೆ, ಪ್ರಮೋದ್ ರೈ ನಂದುಗುರಿ, ಮೇದಪ್ಪ ಗೌಡ ಡೆಪ್ಪುಣಿ, ರಘುರಾಮ ನಾಕ್ ಕುಕ್ಕೆರೆಬೆಟ್ಟು, ಪ್ರಶಾಂತ್ ಪಂಜೋಡಿ, ಮಾಧವ ಕೋಲ್ಪೆ, ಸಂತೋಷ್ ಸುವರ್ಯ ಕೋಡಿಬೈಲು, ದೇವಿಪ್ರಸಾದ್ ಮರ್ದಾಳ, ಅಶೋಕ್‌ಕುಮಾರ್ ಪಿ, ವಾಸುದೇವ ಗೌಡ ಕೊಲ್ಲೆಸಾಗು, ಗಿರೀಶ್ ಕೊರುಂದೂರು, ವಿಶ್ವನಾಥ ರೈ ಪೆರಿಯಡ್ಕ, ಪ್ರೇಮಚಂದ್ರ ಅಜ್ಜರಮೂಲೆ, ಸದಾನಂದ ಪಿ, ಸುರೇಶ್ ಕಲ್ಲೆಂಬಿ, ಸುಕೇಶ್ ರೈ, ಬಾಲಕೃಷ್ಣ ಗೌಡ ಡಿ.ಕೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಿಜೆಪಿ ಮುಖಂಡ ಗಿರೀಶ್ ಎ.ಪಿ. ಸ್ವಾಗತಿಸಿದರು. ಜನಾರ್ದನ ಗೌಡ ಬಲ್ಯ ವಂದಿಸಿದರು.