

ಕಾರವಾರ: ಸತೀಶ ಸೈಲ್ ಹಾಗೂ ಅವರ ಆಪ್ತರು ಸೇರಿ ಧಕ್ಷ ಅಧಿಕಾರಿಯ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಖಂಡನೀಯ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತಮಾಡಿದ ಅವರು ಗೋವಾ ಗಡಿಯ ಮಾಜಾಳಿ ಚೆಕ್ ಪೋಸ್ಟ್ ಗೆ ತೆರಳಿ ಶಾಸಕ ಸತೀಶ ಸೈಲ್ ಧಕ್ಷ ಅಬಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಸೈಲ್ ಗೆ ಗೋವಾದ ಲಿಕ್ಕರ್ ಕಂಪನಿಯ ಜತೆಗೋ ಅಥವಾ ಕರ್ನಾಟಕದ ಸ್ಪಿರಿಟ್ ಕಂಪನಿಯ ಜತೆಗೆ ಸಂಪರ್ಕವೋ ಎಂಬುದು ಬಹಿರಂಗವಾಗಬೇಕು. ಸೈಲ್ ಅಧಿಕಾರಕ್ಕೆ ಬಂದ ನಂತರ ಕಾರವಾರದಲ್ಲಿ ಗೂಂಡಾ ಪ್ರವೃತ್ತಿ ಹೆಚ್ಚಿದೆ. ಇದನ್ನು ನಿಲ್ಲಿಸದಿದ್ದರೆ ನಾವು ಹೋರಾಟ ಮಾಡುತ್ತೇವೆ ಎಂದರು.
ಕೋಟ್ಯಂತರ ವಂಚನೆ
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಗೋವಾ ಗಡಿಯ ಮಾಜಾಳಿಚೆಕ್ ಪೋಸ್ಟ್ ನಲ್ಲಿ ಅಬಕಾರಿ ಅಧಿಕಾರಿಗಳು ನ.4 ರಂದು ಅಕ್ರಮ ಸ್ಪಿರಿಟ್ ಟ್ಯಾಂಕರ್ ಲಾರಿ ಹಿಡಿದಿದ್ದಾರೆ. ಅದರಲ್ಲಿ ಕೋಟ್ಯಂತರ ರೂ.ಜಿಎಸ್ ಟಿ ವಂಚನೆ ಬಹಿರಂಗವಾಗಿದೆ.
ಹಿಡಿದ ಟ್ಯಾಂಕರ್ ನಲ್ಲಿ ಮದ್ಯ ತಯಾರಿಸುವ ಸ್ಪಿರಿಟ್ ಇತ್ತು ಎಂದು ಗೊತ್ತಾಗಿದೆ. ಕೈಗಾರಿಕೆಗೆ ಬಳಸುವ ಸ್ಪಿರಿಟ್ ಗೆ ಕಡಿಮೆ ಜಿಎಸ್ ಟಿ ಇದೆ. ಮಧ್ಯ ತಯಾರಿಕೆಗೆ ಬಳಸುವ ಸ್ಪಿರಿಟ್ ಗೆ ಹೆಚ್ಚಿನ ಜಿಎಸ್ ಟಿ ತುಂಬಬೇಕಿದೆ. ಬೀದರ್ ನಿಂದ ಗೋವಾಕ್ಕೆ ಹೋಗುತ್ತಿದ್ದ ಟ್ಯಾಂಕರ್ ನಲ್ಲಿ 30 ಸಾವಿರ ಲೀಟರ್ ಸ್ಪಿರಿಟ್ ಇತ್ತು ಎನ್ನಲಾಗಿದೆ.ಅದಕ್ಕೆ ಕೈಗಾರಿಕೆಗೆ ಬಳಸುವ ಸ್ಪಿರಿಟ್ ನ 2 ಲಕ್ಷ 70 ಸಾವಿರ ಲೀಟರ್ ಜಿಎಸ್ ಟಿ ತುಂಬಿದ್ದಾರೆ. ವಶಕ್ಕೆ ಪಡೆದ ಸ್ಪಿರಿಟ್ ಮದ್ಯಕ್ಕೆ ಬಳಸಲಾಗಿದ್ದು, ಅದರ ಮೌಲ್ಯ 80 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ. ಅದಕ್ಕೆ 18 ಲಕ್ಷ ರೂ. ಜಿ ಎಸ್ ಟಿ ತುಂಬಬೇಕಿತ್ತು.
80 ಲಕ್ಷ ರೂ. ಸ್ಪಿರಿಟ್ ನಿಂದ 4 ಕೋಟಿ ರೂ. ಮದ್ಯ ತಯಾರಿಸಬಹುದಾಗಿದೆ. ಅದಕ್ಕೆ 1.5 ಕೋಟಿ ಕರ ತುಂಬಬೇಕಿದೆ. ಕೋಟ್ಯಂತರ ಒಟ್ಟಿನಲ್ಲಿ ಕೋಟ್ಯಂತರ ರೂ. ಜಿಎಸ್ ಟಿ ವಂಚನೆ ಮಾಡಿ ಟ್ಯಾಂಕರ್ ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದೆ.
ಗೋವಾದ ಗ್ಲೋಬಲ್ ಇಂಡಸ್ಟ್ರಿಗೆ ಈ ಸ್ಪಿರಿಟ್ ಸರಬರಾಜಾಗುತ್ತಿತ್ತು. ಈ ಹಿಂದೆಯೂ ಹಲವು ಟ್ಯಾಂಕರ್ ಗೋವಾಕ್ಕೆ ಹೋಗಿತ್ತು ಎನ್ನಲಾಗಿದೆ. ಲಕ್ಷಾಂತರ ಲೀಟರ್ ಕಡಿಮೆ ಟ್ಯಾಕ್ಸ್ ತುಂಬಿ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗಿರುವುದು ಗಮನಕ್ಕೆ ಬರುತ್ತದೆ ಎಂದರು.
ಇದು ಭ್ರಷ್ಟಾಚಾರದ ಭಾಗವಾಗಿದೆ. ಅಕ್ರಮದ ಬಗ್ಗೆ ಶಾಸಕರ ಮುತುವರ್ಜಿ ಏನು. ಪ್ರಾಮಾಣಿಕ ಅಧಿಕಾರಿಗೆ ಸರ್ಕಾರದಿಂದ ರಕ್ಷಣೆ ಸಿಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರಾದ ನಾಗರಾಜ ನಾಯಕ, ನಯನಾ ನೀಲಾವರ, ನಾಗೇಶ ಕುರ್ಡೇಕರ್, ಸುಭಾಷ ಗುನಗಿ, ಆಶಾ ನಾಯ್ಕ ಇದ್ದರು.