More

    ಜಿಪಂ ಹಂತದಿಂದ ತೇರ್ಗಡೆಯಾಗದ ಸಚಿವ-ಮಂಕಾಳ ವೈದ್ಯ ಬಗ್ಗೆ ಬಿಜೆಪಿ ಟೀಕೆ

    ಕಾರವಾರ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಉತ್ತರ ಕನ್ನಡದಲ್ಲಿ “ಸಾವಿನ”ರಾಜಕಾರಣ ಶುರುವಾಗಿದೆ. ಪ್ರಮುಖ ರಾಜಕೀಯ ಪಕ್ಷಗಳ ನಡುವೆ ಪರಸ್ಪರ ವಾಗ್ಯುದ್ದಕ್ಕೆ ಕಾರಣವಾಗುತ್ತಿದೆ. ಈ ಹಿಂದೆ 2018 ಹಾಗೂ ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಪರೇಶ ಮೇಸ್ತ ಹತ್ಯೆ ಪ್ರಕರಣ ಹೆಚ್ಚು ಸದ್ದು ಮಾಡಿತ್ತು.

    “ಲೋಕಸಭಾ ಚುನಾವಣೆ ಬರುತ್ತಿದೆ. ಬಿಜೆಪಿಯವರು ಯಾರನ್ನಾದರೂ ಕೊಲೆ ಮಾಡದಿದ್ರೆ ಸಾಕು” ಎಂದು ಸಚಿವ ಮಂಕಾಳ ವೈದ್ಯ ಶನಿವಾರ ಕಾರವಾರದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಅದಕ್ಕೆ ಬಿಜೆಪಿ ತಿರುಗೇಟು ನೀಡಿದೆ.
    ಹತ್ಯೆ, ಕೊಲೆಯ ರಾಜಕಾರಣ ಕಾಂಗ್ರೆಸ್‌ಗೆ ಹತ್ತಿರವಾಗಿದ್ದು ಎಂದು ಬಿಜೆಪಿ ವಕ್ತಾರ ನಾಗರಾಜ ನಾಯಕ ಕಿಡಿ ಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು, ಇನ್ನೂ ಜಿಲ್ಲಾ ಪಂಚಾಯಿತಿ ಮಟ್ಟದಿಂದ ತೇರ್ಗಡೆಯನ್ನೇ ಹೊಂದಿಲ್ಲ. ರಾಜಕಾರಣಿಯಾದ ಒಬ್ಬನಿಗೆ ಬದ್ಧತೆ ಬೇಕು. ಏನು ಮಾತನಾಡಬೇಕು ಎಂಬುದಕ್ಕಿಂತ ಏನು ಮಾತನಾಡಬಾರದು ಎಂಬ ಬಗ್ಗೆ ಅರಿವಿರಬೇಕು. ವೈದ್ಯ ಅವರು ಮಾತಿನ ಬರದಲ್ಲಿ ಅಪರಾಧಿಕ ಸ್ವರೂಪದ ಹೇಳಿಕೆ ನೀಡಿದ್ದಾರೆ. ಇದು ಅವರ ಕುತ್ಸಿತ ಮನೋಭವನ್ನು ತೋರಿಸುತ್ತದೆ. ಅವರ ಆಧಾರ ರಹಿತವಾದ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು. ಮತ್ತು ಇನ್ನು ಮುಂದೆ ಇಂಥ ಮಾತನಾಡಿದರೆ ಅವರ ವಿರುದ್ಧ ಕಾನೂನು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಜಿಹಾದಿ ಮನೋಭಾವದಬ್ರದರ್’ಗಳ ಮೇಲಿನ ಕ್ರಿಮಿನಲ್ ಪ್ರಕರಣ ಹಿಂಪಡೆದವರು ಕಾಂಗ್ರೆಸ್ಸಿಗರು. ಜಿಲ್ಲೆಯಲ್ಲಿ ಮುಂದೆ ಯಾವುದಾರೂ ಕೊಲೆ ನಡೆಯುವ ಮುನ್ಸೂಚನೆ ವೈದ್ಯರಿಗೆ ಇರಬೇಕು. ಅದನ್ನು ಬಿಜೆಪಿ ಮೇಲೆ ಹೊರಿಸುವ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಸಿದ್ಧತೆ ಮಾಡಿದಂತಿದೆ. ಜಿಲ್ಲೆಯಲ್ಲಿ ಇನ್ನು ಯಾರಾದರೂ ಅನುಮಾನಾಸ್ಪದ ಸಾವಾದರೆ ಎಲ್ಲದಕ್ಕಿಂತ ಮುಂಚೆ ವೈದ್ಯರನ್ನು ವಿಚಾರಣೆ ಮಾಡಬೇಕು ಎಂದು ನಾಗರಾಜ ನಾಯಕ ಒತ್ತಾಯಿಸಿದರು.

    ಇದನ್ನೂ ಓದಿ: ಬಿಜೆಪಿಯವರು ಯಾರನ್ನೂ ಕೊಲೆ ಮಾಡದಿದ್ರೆ ಸಾಕು-ಸಚಿವ ಮಂಕಾಳ ವೈದ್ಯ ಹೇಳಿಕೆ
    ಸಾವಿನ ರಾಜಕಾರಣವನ್ನು ಬಿಜೆಪಿ ಎಂದೂ ಮಾಡಿಲ್ಲ. ಹಿಂದೆ ಸುಭಾಷ್ ಚಂದ್ರ ಭೋಸ್, ಲಾಲ್ ಬಹಾದ್ದೂರ್ ಶಾಸ್ತಿç ಅವರ ಸಾವಿನ ಬಗ್ಗೆ ಉತ್ತರ ಕೊಡಬೇಕಿರುವುದು ಕಾಂಗ್ರೆಸ್ ಎಂದರು. ನಗರ ಘಟಕದ ಅಧ್ಯಕ್ಷ ನಾಗೇಶ ಕುರ್ಡೇಕರ್, ನಗರಸಭೆ ಸದಸ್ಯರಾದ ಮಾಲಾ ಹುಲಸ್ವಾರ, ರೇಷ್ಮಾ ಮಾಳ್ಸೇಕರ್ ಇದ್ದರು.

    ಮರು ತನಿಖೆಗೆ ಮನವಿ ಮಾಡಿದ್ದೇವೆ
    ಹೊನ್ನಾವರದ ಪರೇಶ ಮೇಸ್ತ ಸಾವಿನ ಪ್ರಕರಣದಲ್ಲಿ ಸಿದ್ದರಾಮಯ್ಯ ಸರ್ಕಾರದ ರಾಜ್ಯ ಪೊಲೀಸ್ ಅಽಕಾರಿಗಳು ಸಾಕ್ಷ÷್ಯಗಳನ್ನು ನಾಶ ಮಾಡಿ, ಅದನ್ನು ಸಿಬಿಐಗೆ ವಹಿಸಿದ್ದರು. ಇದರಿಂದ ಸಿಬಿಐ `ಬಿ’ ವರದಿ ಸಲ್ಲಿಸಲು ಕಾರಣ. ತನಿಖೆಯ ಬಗ್ಗೆ ನಮಗೆ ಅಸಮಾಧಾನವಿಲ್ಲ. ಮರು ತನಿಖೆ ನಡೆಸಬೇಕು ಎಂದು ಹೊನ್ನಾವರ ನ್ಯಾಯಾಲಯಕ್ಕೆ ನಾವು ಮೇಲ್ಮನವಿ ಸಲ್ಲಿಸಿದ್ದೇವೆ. ಮಂಕಾಳ ವೈದ್ಯ ಅವರು ಆ ಬಗ್ಗೆ ತನಿಖೆ ನಡೆಸಲಿ ಎಂದು ನಾಗರಾಜ ನಾಯಕ ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts