ಪ್ರಧಾನಿ ಮೋದಿಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ

bjp opem confrence
ದೇವದುರ್ಗದಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೋಮವಾರ ಉದ್ಘಾಟಿಸಿದರು. ಶಾಸಕ ಕೆ.ಶಿವನಗೌಡ ನಾಯಕ, ಸಂಸದ ರಾಜಾ ಅಮರೇಶ್ವರ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ಶಿವಣ್ಣ ತಾತ ಮುಂಡರಗಿ, ಗೋನಾಳ ಮಲ್ಲಣ್ಣ ತಾತ ಇತರರಿದ್ದರು.
Published on

ದೇವದುರ್ಗ;ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ಮುಕ್ತ ಆಡಲಿತ ನೀಡುವ ಪಣ ತೊಟ್ಟಿದ್ದು, 9 ವರ್ಷ ಸ್ವಚ್ಛ ಆಡಳಿತ ನೀಡಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಹಲವು ಕಾರ್ಯಕ್ರಮ ಮೂಲಕ ಜನರ ಮನಸು ಗೆದ್ದಿದ್ದು, ಬಿಜೆಪಿಯಿಂದ ಮಾತ್ರ ನಾಡಿನ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.


ಪಟ್ಟಣದಲ್ಲಿ ಆಯೋಜಿಸಿದ್ದ ಬಿಜೆಪಿ ಬಹಿರಂಗ ಸಮಾವೇಶ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಮೋದಿ ಸರ್ಕಾರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆ. ಕರೊನಾದಂತಹ ಸಂಕಷ್ಟದ ಸಮಯದಲ್ಲಿ ದೇಶದ 130 ಕೋಟಿ ಜನರಿಗೆ 2 ಡೋಸ್ ಲಸಿಕೆ ನೀಡಲಾಗಿದೆ. ಬೇರೆ ದೇಶಗಳು ಕರೊನಾಗೆ ತತ್ತರಿಸಿದ್ದರೆ, ಭಾರತ ಸವಾಲನ್ನು ಮೀರಿನಿಂತಿದೆ. 1919ರಲ್ಲಿ ವೈರಸ್ ಬಂದಾಗ ಜಗತ್ತಿನಲ್ಲಿ 4 ಕೋಟಿ ಜನರು ಮೃತಪಟ್ಟಿದ್ದರು. ಈ ಪೈಕಿ 2.5ಕೋಟಿ ಜನರು ಹಸಿವಿನಿಂದ ಸತ್ತಿದ್ದರು. ಆದರೆ, 2019ರಲ್ಲಿ ಜಗತ್ತನ್ನೇ ಕಾಡಿದ ಕರೊನಾ ವೈರಸ್ ಬಂದಾಗಿ ಮೋದಿ ಸರ್ಕಾರ ಸತತ ಎರಡು ವರ್ಷ 81 ಕೋಟಿ ಜನರಿಗೆ ಪಡಿತರ ನೀಡಿ ಹಸಿವು ನೀಗಿಸುವ ಜತೆಗೆ ಉಚಿತ ವ್ಯಾಕ್ಸಿನ್ ನೀಡಿ ಜೀವ ಉಳಿಸಿದೆ ಎಂದರು.

ಬಿಜೆಪಿ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ


ಪ್ರತಿಯೊಬ್ಬರ ಮನೆಗೂ ಶುದ್ಧ ಕುಡಿವ ನೀರು, ಉಚಿತ ಗ್ಯಾಸ್, ರೈತರ ಖಾತೆಗೆ ಪ್ರತಿವರ್ಷ 6 ಸಾವಿರ ರೂ. ಸಹಾಯಧನ ನೀಡುತ್ತಿದೆ. ಆದರೆ, ಸಿದ್ದರಾಮಯ್ಯ ಸರ್ಕಾರ ಬೇಡಿಕೆಗೆ ತಕ್ಕಂತೆ ವಿದ್ಯುತ್ ಉದ್ಘಾದನೆ ಮಾಡಲು ಆಗದೆ ಲೋಡ್ ಶೆಡ್ಡಿಂಗ್ ಮೊರೆ ಹೋಗಿತ್ತು. ಬಿಜೆಪಿ ಸರ್ಕಾರ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಆಗ ಉಚಿತ ವಿದ್ಯುತ್ ಕೊಡದವರು ಈಗ ಸುಳ್ಳು ಭರವಸೆ ನೀಡುತ್ತಿದ್ದಾರೆ. ರಾಜಸ್ಥಾನ, ಛತ್ತಿಸಗಢ, ಪಂಜಾಬ್‌ನಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಆದರೆ, ಇದುವರೆಗೂ ಭರವಸೆ ಈಡೇರಿಸಿಲ್ಲ ಎಂದು ಸಚಿವ ಜೋಶಿ ಟೀಕಿಸಿದರು. ಸಂಸದ ರಾಜಾ ಅಮರೇಶ್ವರ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ಶಿವಣ್ಣ ತಾತ ಮುಂಡರಗಿ, ಗೋನಾಳ ಮಲ್ಲಣ್ಣ ತಾತ ಇತರರಿದ್ದರು.


ಅಭಿವೃದ್ಧಿ ಮೂಲಕವೇ ಉತ್ತರ ನೀಡುವೆ


ಅಭಿವೃದ್ಧಿ ಮೂಲಕವೇ ಉತ್ತರ ನೀಡುವೆ ರಾಜಕೀಯವಾಗಿ ತುಳಿಯಲು ಕೆಲವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಜನರ ಆಶೀರ್ವಾದ ಇರುವವರೆಗೂ ಯಾರೂ ಏನು ಮಾಡುವುದಿಲ್ಲ ಹಾಗೂ ನಾನು ಹೆದರಲ್ಲ. ಅಭಿವೃದ್ಧಿ ಮೂಲಕವೇ ಉತ್ತರ ನೀಡುವುದಾಗಿ ಶಾಸಕ, ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ ಹೇಳಿದರು. ಅರಕೇರಾ, ಪಲಕನಮರಡಿ ಸೇರಿ ಕ್ಷೇತ್ರದ ವಿವಿಧೆಡೆ 8 ಏತನೀರಾವರಿ ಮಂಜೂರು ಮಾಡಿಸುವ ಮೂಲಕ ಸಮಗ್ರ ನೀರಾವರಿಗೆ ಆದ್ಯತೆ ನೀಡಿದ್ದೇನೆ. 500 ಗುಡಿ-ಗುಂಡಾರಗಳಿಗೆ ಅನುದಾನ ನೀಡಿ ಜೀರ್ಣೋದ್ಧಾರ ಮಾಡಿದ್ದೇವೆ. ಕ್ಷೇತ್ರದ ಅಭಿವೃಧ್ಧಿಗೆ ಹಗಲಿರುಳು ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಕ್ಷೇತ್ರಕ್ಕೆ 5800 ಕೋಟಿ ರೂ. ಅನುದಾನ ತಂದಿದ್ದಾರೆ

ಅಧಿಕಾರಿಗಳಿಗೆ ಜೋರು ಮಾಡುವುದು ಅನಿವಾರ್ಯಶಾಸಕ ಕೆ.ಶಿವನಗೌಡ ನಾಯಕ ರಾಜ್ಯದಲ್ಲಿ ಅಭಿವೃದ್ಧಿಯಿಂದ ಸದ್ದು ಮಾಡಿದ್ದು, ಕ್ಷೇತ್ರಕ್ಕೆ 5800 ಕೋಟಿ ರೂ. ಅನುದಾನ ತಂದಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಹುಬ್ಬಳಿ-ಧಾರವಾಡದಲ್ಲಿ ಪ್ರತಿ ಮನೆಗೆ ನೀರಿಲ್ಲ. ಆದರೆ, ದೇವದುರ್ಗದಲ್ಲಿ ಪ್ರತಿಮನೆಗೆ ನೀರು ಕೊಟ್ಟಿದ್ದು ದೊಡ್ಡ ಸಾಧನೆಯಾಗಿದೆ. ಏತ ನೀರಾವರಿ ಯೋಜನೆ ಜಾರಿ, ಇಂಜಿನಿಯರಿಂಗ್, ಡಿಪ್ಲೊಮಾ ಕಾಲೇಜು ತಂದು ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಶಿವನಗೌಡರಂತೆ ನಾವೂ ಅಧಿಕಾರಿಗಳಿಗೆ ಜೋರು ಮಾಡಿ ಕೆಲಸ ಮಾಡಿಸಿಕೊಳ್ಳುವುದನ್ನು ಕಲಿಯಬೇಕಿದೆ. ಇದು ನಾಮಪತ್ರ ಸಲ್ಲಿಸುವ ಸಮಾವೇಶವಲ್ಲ, ವಿಜಯೋತ್ಸವ ಸಮಾರಂಭ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net