ಭಾರತೀಯ ಜನತಾ ಪಕ್ಷ ಉತ್ತರ ಮಂಡಲ ಎಸ್ಸಿ ಮೋರ್ಚಾಕ್ಕೆ ನೇಮಕ

Chandu Patil
Published on


ಕಲಬುರಗಿ: ಭಾರತೀಯ ಜನತಾ ಪಕ್ಷದ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಆದೇಶದ ಮೇರೆಗೆ ಉತ್ತರ ಮಂಡಲದ ಎಸ್ಸಿ ಮೋರ್ಚಾದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ, ಮಂಡಲ ಅಧ್ಯಕ್ಷ ವರದಾಶಂಕರ ಶೆಟ್ಟಿ ಆದೇಶಿಸಿದ್ದಾರೆ. ಪಕ್ಷದ ನೀಡಿರುವ ಜವಾಬ್ದಾರಿ ವಹಿಸಿಕೊಂಡು ಸಂಘಟನೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದ್ದಾರೆ.
ಪದಾಧಿಕಾರಿಗಳು: ದತ್ತು ಡೋಲಾರೆ (ಅಧ್ಯಕ್ಷ), ರವಿ ರಾಠೋಡ, ಹೀರಾ ಮಕ್ಕಳಕರ್, ಯೇಸು ಮೇಲಿನಕೇರಿ, ರವಿ ನಾಯಿಂದ್ರಕರ್ (ಉಪಾಧ್ಯಕ್ಷ), ರಮೇಶ ಜಾಧವ್, ರಾಘು ಯರಸ್ಕರ್ (ಪ್ರಧಾನ ಕಾರ್ಯದರ್ಶಿ), ದಯಾನಂದ ಕಮಲಾಪುರಕರ್, ಲೋಕೇಶ, ಶ್ರೀನಿವಾಸ ಡೋಲಾರೆ, ಶರಣು ಕಾತ್ರಕಿ (ಕಾರ್ಯದರ್ಶಿ), ಆನಂದ ಟೆಕ್ಕಿಕರ್ (ಖಜಾಂಚಿ) ಅವರನ್ನು ನೇಮಕ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net