

ಪ್ರಧಾನಿ ನರೇಂದ್ರ ಮೋದಿ ಅವರ ದೇಶದ ಪ್ರಗತಿ ಕಾರ್ಯಕ್ಕೆ ವಿಶ್ವದೆಲ್ಲೆಡೆ ಶ್ಲಾಘನೆ : ಬಿಜೆಪಿ ದಕ್ಷಿಣ ಮುಖಂಡ ಸಲಗರ ಹೇಳಿಕೆ
ಕಲಬುರಗಿ : ಭಾರತೀಯ ಜನತಾ ಪಕ್ಷದ ಮುಖಂಡರಾದ ಬಿ.ರೇಣುಕಾಚಾರ್ಯ ಸಲಗರ ಅವರು ತಮ್ಮ ಬೆಂಬಲಿಗರು ಹಾಗೂ ಸಂಗಡಿಗರೊಂದಿಗೆಕಲಬುರಗಿ ದಕ್ಷಿಣ ಮತಕ್ಷೇತ್ರದ ಶರಣ ಸಿರಸಗಿ ಹಾಗೂ ಸಾವಳಗಿ ಗ್ರಾಮಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕೈಗೊಂಡರು.
ಮಂಗಳವಾರ ಎರಡು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಪಕ್ಷದ ಸಂಖ್ಯೆಗೆ ಮಿಸ್ಡ್ ಕಾಲ್ ಕೊಡುವುದರ ಮುಖಾಂತರ ನೂರಾರು ಜನರನ್ನು ಭಾರತೀಯ ಜನತಾ ಪಕ್ಷದ ಸದಸ್ಯರನ್ನಾಗಿ ಮಾಡಿಕೊಳ್ಳುವುದರ ಮುಖಾಂತರ ಬಿಜೆಪಿ ಸದಸ್ಯತ ಅಭಿಯಾನಕ್ಕೆ ರೇಣುಕಾಚಾರ್ಯ ಚಾಲನೆ ನೀಡಿದರು
. ಈ ಸಂದರ್ಭದಲ್ಲಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಪ್ರಗತಿಗಾಗಿ ಮಾಡುತ್ತಿರುವ ಕೆಲಸಗಳನ್ನು ಜನರಿಗೆ ತಿಳಿಸಿದರು. ಭಾರತ ವಿಶ್ವಗುರು ಆಗಲು ಎಲ್ಲರು ಬಿಜೆಪಿಗೆ ಬೆಂಬಲಿಸಲು ಕೋರಿದರು.
ಪ್ರಮುಖರಾದ ಸುಭಾಷ್ ಸಾವಳಗಿ, ಬಸವರಾಜ್ ಇಟಗಿ ರಮೇಶ್ ಚೂಟಿ, ಶಿವಕುಮಾರ್ ನಾಟೀಕಾರ, ರಮೇಶ ಬಿರಾದಾರ, ಸುರೇಶ ಸಜ್ಜನ, ಸಂತೋಷ ಪಟ್ಟಣಕರ್, ಶಂಕರಲಿಂಗ, ಶಾಂತಮಲ್ಲಪ್ಪ, ಮಲ್ಲಿಕಾರ್ಜುನ, ಶಾಮಸುಂದರ ಮೊದಲಾದವರಿದ್ದರು.