

ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಮುಂದಿನ ಐದು ವರ್ಷದ ಆಡಳಿತ ಅವಧಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ನೇತೃತ್ವದ ಕೋಟೆಕಾರು ಸಹಕಾರ ಅಭಿವೃದ್ಧಿ ಸಮಿತಿಯ ಸಮಾನ ಮನಸ್ಕ ಅಭ್ಯರ್ಥಿಗಳು 12 ಕ್ಷೇತ್ರಗಳಲ್ಲೂ ಗೆದ್ದಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಹಿನ್ನಡೆಯಾಗಿದೆ.
ಕೋಟೆಕಾರ್ ಸ್ಟೆಲ್ಲಾ ಮೆರೀಸ್ ಶಾಲೆಯಲ್ಲಿ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಸಂಘದ ಸದಸ್ಯರಿಂದ ಮತದಾನ ಪ್ರಕ್ರಿಯೆ ನಡೆಯಿತು. ಮಂಗಳೂರಿನ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಅಧೀಕ್ಷಕ ಬಿ.ನಾಗೇಂದ್ರ ಚುನಾವಣಾ ಅಧಿಕಾರಿಯಾಗಿದ್ದರು.
ಸಾಲಗಾರ ಸಾಮಾನ್ಯ ಕ್ಷೇತ್ರದಲ್ಲಿ ಅಬ್ಬುಸಾಲಿ ಕೆ.ಬಿ., ಕೃಷ್ಣಪ್ಪ ಸಾಲ್ಯಾನ್, ಗಂಗಾಧರ ಯು., ರಾಘವ ಉಚ್ಚಿಲ್, ರಾಘವ ಆರ್.ಉಚ್ಚಿಲ್, ಸಾಲಗಾರ ಅನುಸೂಚಿತ ಜಾತಿ ಕ್ಷೇತ್ರದಲ್ಲಿ ಕೃಷ್ಣಪ್ಪ, ಸಾಲಗಾರ ಅನುಸೂಚಿತ ಪಂಗಡ ಕ್ಷೇತ್ರದಲ್ಲಿ ಬಾಬು ನಾಯಕ್, ಸಾಲಗಾರ ಹಿಂದುಳಿದ ವರ್ಗ ಕ್ಷೇತ್ರದಲ್ಲಿ ಅರುಣ್ ಕುಮಾರ್ ಯು., ಸಾಲಗಾರ ಹಿಂದುಳಿದ ವರ್ಗ ಕ್ಷೇತ್ರದಲ್ಲಿ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು, ಸಾಲಗಾರ ಮಹಿಳಾ ಮೀಸಲು ಸ್ಥಾನ ಕ್ಷೇತ್ರದಲ್ಲಿ ಸುನಿತಾ ಲೋಬೊ, ಸುರೇಖಾ ಚಂದ್ರಹಾಸ್, ಸಾಲಗಾರರಲ್ಲದ ಕ್ಷೇತ್ರದಲ್ಲಿ ಉದಯ ಕುಮಾರ್ ಶೆಟ್ಟಿ ಕೊಂಡಾಣಗುತ್ತು ಜಯ ಗಳಿಸಿದ್ದಾರೆ.