ಸುಳ್ಯದಲ್ಲಿ ಬಿಜೆಪಿ ಸಿಹಿ ಹಂಚಿ ಸಂಭ್ರಮ : ಹರಿಯಾಣದಲ್ಲಿ ಬಿಜೆಪಿ ಗೆಲುವಿಗೆ ವಿಜಯೋತ್ಸವ

hariyana
Published on

ಸುಳ್ಯ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಸುಳ್ಯ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಸುಳ್ಯ ಹಳೇ ಬಸ್ ನಿಲ್ದಾಣದ ಬಳಿ ಮಂಗಳವಾರ ಸಂಭ್ರಮಾಚರಣೆ ನಡೆಸಲಾಯಿತು. ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು. ನಗರ ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಎ.ಟಿ.ಕುಸುಮಾಧರ, ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ.ಶಾಂತಿನಗರ, ನಪಂ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ಧ ನಾಯ್ಕ, ಸದಸ್ಯರಾದ ಶಿಲ್ಪಾ ಸುದೇವ್, ಶೀಲಾ ಅರುಣ ಕುರುಂಜಿ, ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ಲಡ್ಕ, ಪ್ರಮುಖರಾದ ಕೇಶವ ಮಾಸ್ತರ್, ಜಿನ್ನಪ್ಪ ಪೂಜಾರಿ, ದಾಮೋದರ ಮಂಚಿ, ಸತೀಶ್ ಭಟ್, ನವೀನ್ ಕುದ್ರಾಜೆ, ಸುರೇಂದ್ರ ಕಾಮತ್, ಸೋಮನಾಥ ಪೂಜಾರಿ, ರಮೇಶ್ ಇರಂತಮಜಲು, ಶೀನಪ್ಪ, ವಿಶ್ವೇಶ್ವರ ಬಡ್ಡಡ್ಕ, ಚಂದ್ರಶೇಖರ ಜೋಡಿಪಣೆ, ವಸಂತ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net