ಸಾತ್ವಿಕ ಗುಣದತ್ತ ಸಾಗಿಸುವ ಹಬ್ಬ

Ksd_Kalahsti

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ನವರಾತ್ರಿ ಉತ್ಸವ ಸಾತ್ವಿಕ ಗುಣದತ್ತ ಸಾಗಿಸುವ ಪರ್ವಕಾಲವಾಗಿದ್ದು, ಎಲ್ಲರೂ ಧರ್ಮ ಮಾರ್ಗದಲ್ಲಿ ಮುನ್ನಡೆಯುವ ಮೂಲಕ ಮಾತೆಯ ಅನುಗ್ರಹ ಪ್ರಾಪ್ತಿಯಾಗಲು ಬೇಡಿಕೊಳ್ಳೋಣ ಎಂಬುದಾಗಿ ಉಡುಪಿ ಕಟಪಾಡಿ ಪಡುಕುತ್ಯಾರಿನ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನದ ಪರಮಪೂಜ್ಯ ಜಗದ್ಗುರು ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಜಿ ತಿಳಿಸಿದರು.

ಮಧೂರು ಶ್ರೀ ಕಾಳಿಕಾಂಬ ಮಠಕ್ಕೆ ನವರಾತ್ರಿಯ ವೇಳೆ ಆಗಮಿಸಿ ಗುರುಪಾದುಕಾ ಪೂಜೆ, ನೂತನ ಪೀಠ ಸಮರ್ಪಣ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಮಧೂರು ಶ್ರೀ ಕಾಳಿಕಾಂಬಾ ಮಠದ ಅಧ್ಯಕ್ಷ ಕೆ.ಪ್ರಭಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ.ಆಚಾರ್ ಕಂಬಾರು, ಆನೆಗುಂದಿ ಮಠದ ಯೋಜನೆ ಹಾಗೂ ಸಮಾಜದ ಯುವ ತಲೆಮಾರುಗಳ ಪಾಲ್ಗೊಳ್ಳುವಿಕೆಯ ಬಗ್ಗೆ ಮಾಹಿತಿ ನೀಡಿದರು.

ಮಠದ ಪದಾಧಿಕಾರಿಗಳು, ಯುವಕ ಸಂಘ, ವಿಶ್ವರೂಪಂ ತಂಡ, ಭಜನಾ ಸಂಘ, ಮಹಿಳಾ ಸಂಘ ಸದಸ್ಯರು ಉಪಸ್ಥಿತರಿದ್ದರು.

ಮಧೂರು ಮಠದ ಉಪಾಧ್ಯಕ್ಷ ಕೆ.ಜಗದೀಶ್ ಆಚಾರ್ಯ ಕಂಬಾರು ಸ್ವಾಗತಿಸಿ, ವಂದಿಸಿದರು. ಶ್ರೀಗಳ ಗುರುಪಾದುಕಾ ಪೂಜೆಯನ್ನು ಕೇಶವ ಶರ್ಮ ಇರುವೈಲು, ಮೌನೇಶ್ ಶರ್ಮ, ಮಂಜು ಶರ್ಮ ಪಡುಕುತ್ಯಾರು, ಪುರೋಹಿತ್ ವಾಸುದೇವ ಆಚಾರ್ಯ ನೀರ್ಚಾಲು, ಪುರೋಹಿತ್ ಮೌನೇಶ್ ಆಚಾರ್ಯ ಪುತ್ತಿಗೆ ನೆರವೇರಿಸಿದರು.

Share This Article

ಗಂಡ, ಹೆಂಡತಿ ಜಗಳದಿಂದ ಮನೆಯಲ್ಲಿ ನೆಮ್ಮದಿ ಇಲ್ಲವೇ? ಈ Vastu Tips ಪಾಲಿಸಿ..!

Vastu Tips: ಪ್ರತಿಯೊಬ್ಬ ವ್ಯಕ್ತಿಯು ತನ್ನ ವೈವಾಹಿಕ ಜೀವನ ಯಾವಾಗಲೂ ಸಂತೋಷವಾಗಿರಬೇಕೆಂದು ಬಯಸುತ್ತಾನೆ. ಆದಾಗ್ಯೂ, ಸ್ವಲ್ಪ…

ದಪ್ಪ ಹೊಟ್ಟೆಯಿಂದ ತೊಂದರೆ ಆಗ್ತಿದೆಯೇ? ಇವುಗಳನ್ನು ಸೇವಿಸಿದ್ರೆ ಸಾಕು ಬೆಣ್ಣೆಯಂತೆ ಕರಗುತ್ತೆ ಕೊಬ್ಬು | Stomach trouble

Stomach trouble : ಅನೇಕರು ಹೊಟ್ಟೆಯ ಸಮಸ್ಯೆಗಳಿಂದ ಪ್ರತಿ ನಿತ್ಯ ಬಳಲುತ್ತಿದ್ದಾರೆ. ನಿಮಗೂ ದಪ್ಪ ಹೊಟ್ಟೆ…

ಆಯಾ ವಯಸ್ಸಿಗೆ ಅನುಗುಣವಾಗಿ ಯಾರು ಎಷ್ಟು ಗಂಟೆ ನಿದ್ದೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಪಟ್ಟಿ… Sleep

Sleep : ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಕ್ತಿಗೆ ಸಾಕಷ್ಟು ನಿದ್ರೆ ಬೇಕೇ ಬೇಕು.…