ಸಚಿವ ಪ್ರಿಯಾಂಕ್ ರಾಜೀನಾಮೆಗೆ ಕೇಸರಿಪಡೆ ಒಕ್ಕೊರಲ ಆಗ್ರಹ

klb BJP-9
ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಮುನ್ನ ಕಲಬುರಗಿ ಜಗತ್ ವೃತ್ತದಲ್ಲಿ ಶನಿವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಎಂಎಲ್‌ಸಿ ಡಾ.ಬಿ.ಜಿ.ಪಾಟೀಲ್, ಪ್ರಮುಖರಾದ ಅಮರನಾಥ ಪಾಟೀಲ್, ಚಂದು ಪಾಟೀಲ್, ಶರಣು ಸಲಗರ,ಡಾ.ಶೈಲೇಂದ್ರ ಬೆಲ್ದಾಳೆ, ಸುಭಾಷ ಗುತ್ತೇದಾರ್ ಇತರರಿದ್ದರು.
Published on

* ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆರಳಿದ ಕೇಸರಿಪಡೆ |ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಸಚಿನ್ ಪಾಂಚಾಳ್ ಆತ್ಮಹತ್ಯೆಗೆ ಸಂಬAಧಿಸಿದAತೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು, ಆತನ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ನೀಡಬೇಕು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂಬ ಒಕ್ಕೊರಲಿನ ಆಗ್ರಹ ಕಲಬುರಗಿಯಲ್ಲಿ ಶನಿವಾರ ಜರುಗಿದ ಪ್ರತಿಭಟನಾ ಸಭೆಯಲ್ಲಿ ರಣರಣಿಸಿತು.

ಪಾಂಚಾಳ್ ಆತ್ಮಹತ್ಯೆಗೆ ಸಂಬAಧಿಸಿದAತೆ ಸಚಿವ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಶನಿವಾರ ಮುತ್ತಿಗೆ ಹಾಕುವ ಮುನ್ನ ನಗರದ ಜಗತ್ ವೃತ್ತದಲ್ಲಿ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅನೇಕ ಮುಖಂಡರು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಗುಂಡಾಗಿರಿ ನಡೆಯಲ್ಲ

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಪ್ರೀಯಾಂಕ್ ಖರ್ಗೆ ಅವರೇ ಮೊದಲು ರಾಜೀನಾಮೆ ಕೊಟ್ಟು ಮಾತನಾಡಿ, ಯಾಕೆ ರಾಜೀನಾಮೆ ಕೊಡಬೇಕು ಅಂತಿರಿ ? ಡೆತ್‌ನೋಟ್‌ನಲ್ಲಿ ನಿಮ್ಮ ಹೆಸರಿದೆ ಅದಕ್ಕೆ ರಾಜೀನಾಮೆ ಕೊಡಬೇಕು. ಇದು ನಿಜಾಮನ ಕಾಲವಲ್ಲ. ನಿಜಾಮಗಿರಿ ಈಗ ನಡೆಯಲ್ಲ. ಗುಂಡಾಗಿರಿ ನಡೆಯೋದಿಲ್ಲ ಅಂತ ಹೇಳುವುದಕ್ಕಾಗಿ ನಾವೆಲ್ಲ ಬಂದಿz್ದೆÃವೆ.

ವಿಧಾನ ಪರಿಷತ್ ವಿಪಕ್ಷ ನಾಯಕ ಚೆಲುವಾದಿ ನಾರಾಯಣಸ್ವಾಮಿ ಮಾತನಾಡಿ, ನಾವು ನ್ಯಾಯ ಕೊಡ್ರಿ ಎಂದು ಕೇಳಿದರೆ ಏಳನೀರು ಕೊಡ್ತೀವಿ, ಟೀ ಕಾಫಿ ಕೊಡ್ತೀವಿ ಅಂತಾರೆ. ನಾವು ನಿಮ್ಮ ಜತೆ ನೆಂಟಸ್ತನಕ್ಕೆ ಬಂದಿದ್ದೀವಾ? ಸಂಬAಧವೇ ಇಲ್ಲದ ಪ್ರಕರಣದಲ್ಲಿ ಸಿ.ಟಿ.ರವಿಯವರನ್ನ ರಾತ್ರಿಯ¯್ಲÁ ಸುತ್ತಾಡಿಸಿದರು. ಆದರೆ ಇಲ್ಲಿ ಇನ್ನೂ ಯಾರ ಬಂಧನವೂ ಆಗಿಲ್ಲ ಎಂದು ಗುಡುಗಿದರು.

ಸುಪಾರಿ ಗ್ಯಾಂಗ್ ಒಬ್ಬ ದಲಿತ ನಾಯಕನ ಬೆಳೆಯಲು ಬಿಡಲಿಲ್ಲ

ಪೊಲೀಸರೇ ನಿಮ್ಮ ಅಧಿಕಾರ ಚಲಾಯಿಸಿ. ಆದರೆ, ಅವರ ಗುಲಾಮಗಿರಿ ಮಾಡಬೇಡಿ. ಸಚಿನ್ ಕೇಸ್ ಸಿಬಿಐಗೆ ವಹಿಸಿದರೆ ಮಾತ್ರ ನ್ಯಾಯ ಸಿಗಲು ಸಾಧ್ಯ. ಸಚಿನ್ ಪ್ರಕರಣದ ಹಿಂದೆ ಕೇವಲ ಸುಪಾರಿ ಗ್ಯಾಂಗ್ ಅಷ್ಟೇ ಅಲ್ಲ. ಹನಿಟ್ರಾÈಪ್ ಗ್ಯಾಂಗ್ ಕೂಡಾ ಇದೆ. ಖರ್ಗೆ ಅವರು ಬೀದರ್‌ನಿಂದ ಬಳ್ಳಾರಿಯವರೆಗೂ ತಮ್ಮ ಪಕ್ಷದಲ್ಲಿರುವ ಒಬ್ಬ ದಲಿತ ಕಾರ್ಯಕರ್ತರು, ನಾಯಕರನ್ನು ಬೆಳೆಯಲು ಬಿಡಲಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ದಲಿತ ನಾಯರ‍್ಯಾರಿದ್ದಾರೆ ಹೇಳಿ ಎಂದು ಚಲುವಾದಿ ನಾರಾಯಣ ಸ್ವಾಮಿ ಪ್ರಶ್ನಿಸಿದರು.

ಪ್ರಿಯಾಂಕ್ ಖರ್ಗೆ ಯಾವ ಕೋಟಾದಲ್ಲಿ ಮಂತ್ರಿಯಾದರು ?, ಮೂರು ಸಲ ಗೆದ್ದ ಮೂಲು ಸಲ ಮಂತ್ರಿಯಾದರಿ. ಅದು ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್‌ರನ್ನು ಹೊರಹಾಕಿಸಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿರಿ.ಕಾAಗ್ರೆಸ್‌ನಲ್ಲಿ ಮೂರು ಬಾರಿ ಗೆದ್ದ ಅನೇಕ ದಲಿತ ಶಾಸಕರಿz್ದÁರೆ. ಅವರನ್ನೇಕೆ ಮಂತ್ರಿ ಮಾಡಲಿಲ್ಲ ಎಂದು ಹಲವರ ಹೆಸರು ಉಲ್ಲೇಖಿಸಿ ಪ್ರಶ್ನಿಸಿದರು. ಮಲ್ಲಿಕಾರ್ಜುನ ಖರ್ಗೆ ಸಾಹೇಬರ ಬಗ್ಗೆ ಬಹಳ ಗೌರವವಿದೆ. ಅವರ ಬಗ್ಗೆ ನಾನು ಏನೂ ಮಾತನಾಡಲ್ಲ.

ಖರ್ಗೆ ಸಾಹೇಬ್ರೆ ನೀವು ಮಾಜಿ ಸಿಎಂ ಧರ್ಮಸಿಂಗ್ ಸ್ನೇಹಿತರು.ಅವರ ಪುತ್ರ ಡಾ.ಅಜಯಸಿಂಗ್ ಸತತ ಮೂರು ಬಾರಿ ಗೆದ್ದಿz್ದÁರೆ. ಅವರನ್ನೇಕೆ ಮಂತ್ರಿ ಮಾಡಲಿಲ್ಲ. ಇಲ್ಲಿ ಜಾತಿ, ಧರ್ಮಕ್ಕಿಂತ ಮಾನವೀಯತೆ ಮುಖ್ಯ ಎಂದು ಛೇಡಿಸಿದರು.

ಅಂಬೇಡ್ಕರ್‌ಗೆ ಕಾಂಗ್ರೆಸ್ ಅವಮಾನ

ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಿಗೆ ಕಳಪೆ ಔಷಧಿ ಸರಬರಾಜು ಮಾಡಿದ ಪರಿಣಾಮ ರಾಜ್ಯದಲ್ಲಿ ೭೬೦ ಜನ ಬಾಣಂತಿಯರ ಸಾವು ಆಗಿದೆ. ಅಧಿಕಾರಿಗಳು, ಗುತ್ತಿಗೆದಾರರ ಸರಣಿ ಆತ್ಮಹತ್ಯೆ ನಡೆಯುತ್ತಿವೆ. ಅನ್ಯಾಯದ ವಿರುದ್ಧ ಹೋರಾಟ ಮಾಡಿದರೆ ವಿರೋಧ ಪಕ್ಷದವರನ್ನು ದಮನ ಮಾಡಲು ನೋಡ್ತಾರೆ ಎಂದರು.

ಡಾ.ಅAಬೇಡ್ಕರ್ ನಮಗೆ ದೇವರು ಅಂತೀರಲ್ಲ. ಸ್ವಾಮಿ ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿದವರು ಯಾರು ? ದೆಹಲಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ತೀರಿ ಹೋದಾಗ ಮಣ್ಣು ಮಾಡುವುದಕ್ಕೆ ಆರು ಅಡಿ ಜಾಗಾ ಕೊಡಲಿಲ್ಲ ಈ ಕಾಂಗ್ರೆಸ್ ಸರ್ಕಾರ. ಈಶ್ವರಪ್ಪ ರಾಜೀನಾಮೆ ನೀಡುವಂತೆ ಇದೇ ಪ್ರಿಯಾಂಕ್ ಖರ್ಗೆ ಒತ್ತಾಯ ಮಾಡಿದ್ದರು. ಇದೀಗ ನೀವ್ಯಾಕೆ ರಾಜೀನಾಮೆ ನೀಡುತ್ತಿಲ್ಲ. ರಾಜ್ಯದಲ್ಲಿ ಕಮೀಷನ್ ಸರ್ಕಾರ ಅಧಿಕಾರದಲ್ಲಿದೆ. ಹೀಗಾಗಿ ಜನಸಾಮಾನ್ಯರಿಗೆ ನ್ಯಾಯ ಸಿಗುತ್ತಿಲ್ಲ ಎಂದು ದೂರಿದರು.

ಪೊಲೀಸರ ವೈಫಲ್ಯ

ಬಿಜೆಪಿ ರಾಜ್ಯ ಪ್ರಧಾನ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಮಾತನಾಡಿ, ಸಚಿವ ಪ್ರಿಯಾಂಕ್ ಖರ್ಗೆಯವರಿಗೆ ಮಾನವೀಯತೆ ಇದ್ದರೆ ಆತ್ಮಹತ್ಯೆ ಮಾಡಿಕೊಂಡ ಸಚಿನ್ ಕುಟುಂಬಕ್ಕೆ ಸಾಂತ್ವನ ಹೇಳಿ, ನ್ಯಾಯ ಕೊಡಿಸುವ ಭರವಸೆ ನೀಡಿ ಬನ್ನಿ ಎಂದು ಸವಾಲೆಸೆದರು. ಸಚಿನ್ ಸಹೋದರಿಯರು ದೂರು ನೀಡಿದರೂ ಪೊಲೀಸರು ದಾಖಲಿಸಿಕೊಳ್ಳಲಿಲ್ಲ. ಹಾಗೊಂದು ವೇಳೆ ದಾಖಲಿಸಿಕೊಂಡು ಮೊಬೈಲ್ ಟ್ರೇಸ್ ಮಾಡಿದ್ದರೆ ಆತ್ಮಹತ್ಯೆ ತಡೆಯಬಹುದಿತ್ತು ಎಂದರು.

ಸೊಲ್ಲಾಪುರದ ಗ್ಯಾಂಗ್‌ವೊAದಕ್ಕೆ ಸುಪಾರಿ ನೀಡಿ ಪಕ್ಷದ ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಮಣಿಕಂಠ ರಾಠೋಡ, ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಕೊಲೆಗೆ ಸಂಚು ನಡೆದಿತ್ತು ಎಂಬುದು ಈ ಡೆತ್‌ನೋಟ್‌ನಿಂದ ಬಹಿರಂಗವಾಗಿದೆ. ಇಷ್ಟೆಲ್ಲಾ ಸಂಗತಿ ಹೊರಬಿದ್ದರೂ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿರುವುದು ಖೇದಕರ ಎಂದರು.

ಮಾಜಿ ಸಚಿವ ಎನ್.ಮಹೇಶ ಮಾತನಾಡಿ, ಸಚಿವ ಪ್ರಿಯಾಂಕ್ ರಾಜೀನಾಮೆ ನೀಡಿ, ತನಿಖೆಗೆ ಸಹಕರಿಸಲಿ. ಹಾಗೊಂದು ವೇಳೆ ನಿರಪರಾಧಿ ಎಂದಾದರೆ ತಕ್ಷಣ ಮತ್ತೆ ಮಂತ್ರಿಯಾಗಿ. ನಮ್ಮದೇನೂ ಅಭ್ಯಂತರ ಇಲ್ಲ. ಅಧಿಕಾರ ಶಾಶ್ವತ ಅಲ್ಲ. ಆದರೆ ಮಾನವೀಯತೆ ಮುಖ್ಯ. ಬಡ ಕುಟುಂಬಕ್ಕೆ ಆಧಾರವಾಗಿದ್ದ ಸಚಿನ್ ಪಾಂಚಾಳ್ ಕಳೆದುಕೊಂಡು ಮನೆಯವರು ಕಣ್ಣೀರು ಹಾಕುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಇವರ ಶಾಪ ತಟ್ಟದೇ ಬಿಡದು ಎಂದು ಗುಡುಗಿದರು.

ಶಾಸಕರಾದ ಬಸವರಾಜ ಮತ್ತಿಮಡು, ಶರಣು ಸಲಗರ, ಡಾ.ಬಿ.ಜಿ.ಪಾಟೀಲ್, ಮಾಜಿ ಶಾಸಕರಾದ ರಾಜಕುಮಾರ ಪಾಟೀಲ್ ತೇಲ್ಕೂರ್, ದತ್ತಾತ್ರೇಯ ಪಾಟೀಲ್ ರೇವೂರ್, ಮಾಜಿ ಸಂಸದ ಡಾ.ಉಮೇಶ ಜಾಧವ್, ಪಿ.ರಾಜೀವ್ ಇತರರು ಮಾತನಾಡಿದರು.

ನ್ಯಾಯ ಸಿಗುವವರೆಗೂ ಪಕ್ಷದ ಹೋರಾಟ

ಸಚಿನ್ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಪಕ್ಷದ ಹೋರಾಟ ನಿರಂತರ ನಡೆಯಲಿದೆ. ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಕುಟುಂಬದ ಸದಸ್ಯರೊಬ್ಬರಿಗೆ ರಾಜ್ಯ ಸರ್ಕಾರ ನೌಕರಿ ನೀಡುವ ಮೂಲಕ ಜೀವನಕ್ಕೆ ಆಧಾರ ಮಾಡಿಕೊಡಬೇಕು. ತಕ್ಷಣ ಒಂದು ಕೋಟಿ ರೂ. ಪರಿಹಾರ ಒದಗಿಸಬೇಕು.

ಚಂದೂ ಪಾಟೀಲ್,

ಅಧ್ಯಕ್ಷ, ಬಿಜೆಪಿ ಕಲಬುರಗಿ ಮಹಾ ನಗರ ಜಿಲ್ಲೆ.

ಒಂದು ಕೋಟಿ ರೂ. ಪರಿಹಾರ ನೀಡಿ

ಸಚಿನ್ ಆತ್ಮಹತ್ಯೆ ಪ್ರಕರಣ ನಡೆದು ಒಂದು ವಾರವಾದರೂ ಸರ್ಕಾರ ಏನೂ ನಡೆದಿಲ್ಲ ಎನ್ನುವಂತಿದೆ. ಆತನ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಈವರೆಗೂ ಆಗಿಲ್ಲ.ಸಂಕಷ್ಟದಲ್ಲಿರುವ ಸದಸ್ಯರಿಗೆ ಸಾಂತ್ವನ ಹೇಳುವ ಕೆಲಸವೂ ಆಗಿಲ್ಲ. ಒಂದು ಕೋಟಿ ರೂ. ಪರಿಹಾರ ನೀಡಿ ಆಸರೆಯಾಗಬೇಕು.

ಬಸವರಾಜ ಮತ್ತಿಮಡು,

ಶಾಸಕ, ಕಲಬುರಗಿ ಗ್ರಾಮೀಣ.

ನ್ಯಾಯ ದೊರೆಬೇಕಾದರೆ ಸಿಬಿಐ ತನಿಖೆಗೆ ವಹಿಸಬೇಕು

ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುವ ಸಿಐಡಿ ಸೇರಿ ಯಾವುದೇ ಏಜೆನ್ಸಿಗೆ ತನಿಖೆ ನೀಡಿದರೂ ನ್ಯಾಯ ಸಿಗುವುದಿಲ್ಲ. ಸಂಕಷ್ಟದಲ್ಲಿರುವ ಕುಟುಂಬಕ್ಕೆ ನ್ಯಾಯ ದೊರೆಬೇಕಾದರೆ ಸಿಬಿಐ ತನಿಖೆಗೆ ವಹಿಸಬೇಕು.

ಡಾ.ಉಮೇಶ ಜಾಧವ್,

ಮಾಜಿ ಸಂಸದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net