ನೀರಿಗೆ ಬಿದ್ದು ಬಿಜೆಪಿ ಮುಖಂಡ ನವೀನ್ ರೈ ಮೇನಾಲ ಮೃತ್ಯು

Naveen Rai
Published on

ಸುಳ್ಯ: ಬಿಜೆಪಿ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನವೀನ್ ರೈ ಮೇನಾಲ (52) ಗುರುವಾರ ಪಯಸ್ವಿನಿ ನದಿಯಲ್ಲಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ನವೀನ್ ತುದಿಯಡ್ಕ ಬಳಿಯಿರುವ ತೋಟಕ್ಕೆ ನೀರು ಹಾಯಿಸಲು ಹೋಗಿದ್ದರು. ಈ ವೇಳೆ ಪಂಪ್ ಸ್ಟಾರ್ಟ್ ಆಗದ ಕಾರಣ ಫುಟ್‌ವಾಲ್‌ನಲ್ಲಿ ಏನೋ ಸಮಸ್ಯೆ ಇದೆಯೆಂದು ಪರೀಕ್ಷಿಸಲು ನದಿಗೆ ಇಳಿದಿದ್ದರು. ಪರೀಕ್ಷಿಸುತ್ತಿದ್ದ ಸಂದರ್ಭ ಆಯ ತಪ್ಪಿ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತ ನವೀನ್ ರೈ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡು ಜನಾನುರಾಗಿಯಾಗಿದ್ದರು. ಅದಕ್ಕೂ ಮೊದಲು ಅವರು ಅಜ್ಜಾವರ ಗ್ರಾಮ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಉತ್ತಮ ಸಂಘಟನಾ ಚತುರರಾಗಿದ್ದ ಅವರು ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು. ಉದ್ಯಮಿಯಾಗಿದ್ದ ಅವರು ಕಲ್ಲಿನ ಕ್ವಾರಿಯನ್ನೂ ಹೊಂದಿದ್ದರು.

ಪತ್ನಿ ರೂಪಾ ರೈ, ಪುತ್ರಿಯರಾದ ಪೃಥ್ವಿ ರೈ ಹಾಗೂ ಆರ್ವಿ ರೈ ಅವರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net