

ಅಂಕೋಲಾ: ಕಿತ್ತೂರು, ಖಾನಾಪುರ ಒಳಗೊಂಡ ಸಮಗ್ರ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕೃಷಿಕರ, ಯುವಕರ ಶ್ರೇಯಸ್ಸಿಗೆ, ಅಭಿವೃದ್ಧಿಗೆ ಸದಾ ಬದ್ಧನಿದ್ದೇನೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲೂಕಿನ ಆಗಸೂರು, ಕಲ್ಲೇಶ್ವರ, ಹೆಬ್ಬುಳ, ಹೊಸಾಕಂಬಿ ಮೊಗಟ ಭಾಗಗಳಲ್ಲಿ ಬುಧವಾರ ಪ್ರಚಾರ ಸಭೆಗಳನ್ನು ನಡೆಸಿ,ಅವರು ಮಾತನಾಡಿದರು. ಖಾನಾಪುರದದ ಜನ ಅಂಜಲಿ ನಿಂಬಾಳ್ಕರ ಅವರನ್ನು ತಿರಸ್ಕಾರ ಮಾಡಿ, ಮನೆಗೆ ಕಳುಹಿಸಿದ್ದರು. 55 ಸಾವಿರ ಮತಗಳ ಅಂತರದಿAದ ಸೋಲು ಖಂಡ ಅಂಜಲಿ ಅವರು, ಹಣದ ಪ್ರಾಭಲ್ಯವನ್ನು ಉಪಯೋಗಿಸಿಕೊಂಡು ಗೆಲುವು ಸಾಸಬಹುದು ಎಂಬ ಆಲೋಚನೆಯಲ್ಲಿದ್ದಾರೆ. ಆದರೆ, ನಮ್ಮ ಮತದಾರರು ಅಂತಹ ಯಾವುದಕ್ಕೂ ಮರಳಾಗದೇ, ನರೇಂದ್ರ ಮೋದಿ ಗೆಲ್ಲಿಸುವಲ್ಲಿ ಪಣ ತೊಟ್ಟಿದ್ದಾರೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಮಾತನಾಡಿ, ನರೇಂದ್ರ ಮೋದಿ ಮೂರನೆಯ ಬಾರಿಗೆ ಪ್ರಧಾನಿಯಾಗಿ ಹಿಂದೂಸ್ತಾನವನ್ನು ಇನ್ನುಷ್ಟು ಮೇಲಕ್ಕೇತ್ತಿ, ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ನೋಡಬೇಕೆಂದು ಪ್ರತಿಯೊಬ್ಬರೂ ಭಯಸಿದ್ದಾರೆ. ಅವರಿಗೆ ಶಕ್ತಿ ನೀಡುವಲ್ಲಿ ಉತ್ತರ ಕನ್ನಡ ವಿಧಾನಸಭಾ ಕ್ಷೇತ್ರ ವಿಶೇಷ ಕೊಡುಗೆ ನೀಡಲಿದೆ ಎಂದರು. ಬಿಜೆಪಿ ಪ್ರಮುಖರಾದ ನಾಗರಾಜ ನಾಯಕ, ರಾಜೇಂದ್ರ ನಾಯ್ಕ, ಗೋಪಾಲಕೃಷ್ಣ ವೈದ್ಯ ಇತರರು ಇದ್ದರು.
ಲಕ್ಷ್ಮೀ ಇನಾಮ್ದಾರ್ ಸೇರ್ಪಡೆ ಸಹಕಾರ
ಕಿತ್ತೂರ ವಿಧಾನಸಭಾ ಕ್ಷೇತ್ರದ ಪ್ರಭಾವಿ ನಾಯಕರಾಗಿದ್ದ ಮಾಜಿ ಸಚಿವ ದಿವಂಗತ ಡಿಬಿ ಇನಾಮ್ದಾರ್ ಸೊಸೆ ಲಕ್ಷ್ಮೀ ವಿಕ್ರಂ ಇನಾಮ್ದಾರ್ ಮತ್ತು ಅವರ ಕುಟುಂಬಸ್ಥರು ಮತ್ತು ಅಪಾರ ಬೆಂಬಲಿಗರು ನರೇಂದ್ರ ಮೋದಿ ಬೆಂಬಲಕ್ಕೆ ಬಿಜೆಪಿ ತತ್ವ,ಸಿದ್ದಾಂತ ಒಪ್ಪಿ ಬಂದಿರುವುದು ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಇದು ರಾಷ್ಟ್ರ ಭಕ್ತರ ಚುನಾವಣೆ, ರಾಷ್ಟ್ರದ ನಾಯಕನ ಆಯ್ಕೆ ಮಾಡುವಲ್ಲಿ ತಾವೆಲ್ಲರೂ ಬಿಜೆಪಿ ಬೆಂಬಲಿಸಿ, ಮೇ.7 ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ನೀಡಬೇಕು. ಇದು ನನ್ನ ವಿನಂತಿ.ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಅಭ್ಯರ್ಥಿ