ಸೈನಿಕರಿಗೆ ಗೌರವ ಸಲ್ಲಿಸಿದ ಬಿಜೆಪಿ, ಜೆಡಿಎಸ್

IMG-20250529-WA0020
ಎಚ್.ಡಿ.ಕೋಟೆ ಪಟ್ಟಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ತಿರಂಗಾ ಯಾತ್ರೆ ಮೆರವಣಿಗೆ ನಡೆಸಿದರು.
Published on

ಎಚ್.ಡಿ ಕೋಟೆ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ 26 ಭಾರತೀಯರ ಹತ್ಯೆಗೈದ ಉಗ್ರಗಾಮಿಗಳನ್ನು ಮಟ್ಟ ಹಾಕಿ ಭಯೋತ್ಪಾದಕರ ಅಡಗು ತಾಣಗಳನ್ನು ನಾಶಪಡಿಸಿ ಪರಾಕ್ರಮ ಮೆರೆದ ದೇಶದ ಸೈನಿಕರಿಗೆ ಗೌರವ ಸಲ್ಲಿಸುವ ಅಂಗವಾಗಿ ಪಟ್ಟಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಗುರುವಾರ ತಿರಂಗಾ ಯಾತ್ರೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು.

ಪಟ್ಟಣದ ಗದ್ದಿಗೆ ವೃತ್ತದಿಂದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ರಾಷ್ಟ್ರಧ್ವಜಗಳನ್ನು ಹಿಡಿದು ಭಾರತ್ ಮಾತಾ ಕೀ ಜೈ, ಜೈ ಜವಾನ್, ಜೈ ಕಿಸಾನ್ ಎಂದು ಘೋಷಣೆ ಹಾಕುತ್ತಾ ಪಟ್ಟಣದ ಮುಖ್ಯರಸ್ತೆ ಮೂಲಕ ಮೆರವಣಿಗೆ ಸಾಗಿ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಮುಂಭಾಗ ಇರುವ ವೀರಯೋಧ ದಿ.ಮಹೇಶ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಂತರ ಮೆರವಣಿಗೆ ತಾಲೂಕು ಆಡಳಿತ ಸೌಧ ತಲುಪಿ ಅಂತ್ಯಗೊಳಿಸಿದರು.

ಬಿಡಗಲು ಪಡುವಲು ವಿರಕ್ತ ಮಠದ ಮಹದೇವಸ್ವಾಮೀಜಿ ಮಾತನಾಡಿ, ಪ್ರತಿ ಗ್ರಾಮ, ಮನೆಯಲ್ಲಿ ದೇಶಾಭಿಮಾನ ಬೆಳೆಸುವಲ್ಲಿ ನಾವು ಮುಂದಾಗಬೇಕು. 26 ಭಾರತೀಯರನ್ನು ಭಯೋತ್ಪಾದಕರು ಹತ್ಯೆ ಮಾಡಿರುವುದು ನೋವಿನ ಸಂಗತಿ. ಇದಕ್ಕೆ ದೇಶದ ಮೂರು ಸಶಸ್ತ್ರ ಪಡೆಗಳು ದಿಟ್ಟ ಪ್ರತ್ಯುತ್ತರ ನೀಡಿರುವುದು ಹೆಮ್ಮೆಯ ವಿಷಯ ಎಂದರು.

ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದ್ದ ಪಾಕಿಸ್ತಾನದ ಕೃತ್ಯವನ್ನು ನಮ್ಮ ಸೈನಿಕರು ಆಪರೇಷನ್ ಸಿಂಧೂರದ ಮೂಲಕ ಭಯೋತ್ಪಾದಕ ಕೇಂದ್ರಗಳನ್ನು ಭಾರತದ ಸೈನಿಕರು ಯಶಸ್ವಿಯಾಗಿ ನಾಶ ಪಡಿಸಿದೆ ಎಂದರು.

ದೇಶದ ಸೈನಿಕರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಇಡೀ ದೇಶದಲ್ಲಿ ತಿರಂಗಾ ಯಾತ್ರೆಯನ್ನು ನಡೆಸಲಾಗುತ್ತಿದೆ. ದೇಶದ ಪ್ರಧಾನ ಮಂತ್ರಿ ಸೂಕ್ತ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಉತ್ತರವನ್ನು ನೀಡಿದ್ದಾರೆ ಎಂದು ಶ್ಲಾಘಿಸಿದರು.

ಮೆರವಣಿಗೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಶಂಬೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜೇಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಚ್.ಸಿ.ಲಕ್ಷ್ಮಣ್, ವೆಂಕಟಸ್ವಾಮಿ, ಸರಗೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಕನ್ನಡ ಪ್ರಮೋದ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಪಳನಿಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಬಸವರಾಜಪ್ಪ, ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ರುದ್ರಪ್ಪ, ಮುಖಂಡರಾದ ದೊಡ್ಡನಾಯಕ, ಸಿ.ವಿ.ನಾಗರಾಜು, ಮಾರುತಿ, ಗೋಪಾಲಸ್ವಾಮಿ, ಸೋಮೇಶ್, ಸತೀಶ್, ಸಿ.ಕೆ.ಗಿರೀಶ್, ಗುರುಸ್ವಾಮಿ, ರಾಜು, ಪ್ರಶಾಂತ್, ಬಸವರಾಜು ಚಂದ್ರಮೌಳಿ, ವಿವೇಕ್, ನಾರಾಯಣಗೌಡ, ಜಯಂತ್, ಶ್ರೀಕಾಂತ್, ಗಿರಿಜಾ, ಸುನಂದಾ, ಮಂಜುಳಾಬಾಯಿ, ಮಂಜುಳಾ, ನಟರಾಜು, ಗಣಪತಿ, ಟಿ.ವೆಂಕಟೇಶ್, ಪೃಥ್ವಿ, ಪ್ರಶಾಂತ್, ಗೋವಿಂದ ರಾಜು, ಜವರಯ್ಯ, ಸಿದಗದಯ್ಯ, ಸಂತೋಷ್, ಸುಧಾಕರ್, ಮಾದೇವಪ್ಪ, ಬಿ.ಟಿ.ನರಸಿಂಹಮೂರ್ತಿ, ಅಕ್ರಮ್ ಪಾಷ, ಚಂದ್ರಶೇಖರ್, ಮಹೇಶ್, ಶಿವರಾಜಪ್ಪ, ಜವರೇಗೌಡ, ರಘು, ರಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net