ಬಿಜೆಪಿ-ಜೆಡಿಎಸ್ ಮೈತ್ರಿಗೆ ಕಾಂಗ್ರೆಸ್ ಜನಪ್ರಿಯತೆಯ ಆತಂಕ ಕಾರಣ !

KrishnaByre_Gowda
Published on

ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್ ಜನಪ್ರಿಯತೆ ಕಂಡು ಬಿಜೆಪಿ, ಜೆಡಿಎಸ್‌ನವರ ಆತಂಕದಲ್ಲಿ ಇದ್ದಾರೆ. ಈ ಆತಂಕದಿಂದ ಅವರು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಜಿಲ್ಲಾ ಪ್ರವಾಸ ಹಿನ್ನೆಲೆಯಲ್ಲಿ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ 9 ವರ್ಷ ದುರಾಡಳಿತದ ಬಿಸಿ ಜನರಿಗೆ ತಟ್ಟಿದೆ. ಉದ್ಯೋಗ ಕೊಡುವ ಭರವಸೆ ಕೊಟ್ಟು ಕೋಟ್ಯಂತರ ಉದ್ಯೋಗ ಕಿತ್ತುಕೊಂಡಿದ್ದಾರೆ. ಶ್ರೀಮಂತರ ಪರ ಇರುವ ಬಿಜೆಪಿ ವಿರುದ್ಧ ದುಡಿಯುವ ಜನ ದಂಗೆ ಎದ್ದಿದ್ದಾರೆ. ಈ ಆತಂಕದಿಂದ ಅವರು ಮೈತ್ರಿ ಮಾಡಿಕೊಂಡಿದ್ದಾರೆ ಎಂದರು.

ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಲ್ಲ !: ವಿಧಾನಸಭಾ ಚುನಾವಣಾ ಫಲಿತಾಂಶ ಬಂದು ನಾಲ್ಕು ತಿಂಗಳಾಗಿದೆ. ವಿಪಕ್ಷ ನಾಯಕರ ಆಯ್ಕೆ ಮಾಡಲು ಅವರಿಂದ ಸಾಧ್ಯ ಆಗಿಲ್ಲ. ಇದು ನಾಲಾಯಕತನ. ಅವರ ಆಂತರಿಕ ಕಚ್ಚಾಟದಿಂದ ವಿಪಕ್ಷ ನಾಯಕ ಆಯ್ಕೆ ಮಾಡಿಕೊಂಡಿಲ್ಲ.

ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲು ವಿರೋಧ ಪಕ್ಷದ ನಾಯಕನನ್ನ ಇನ್ನು ಆಯ್ಕೆ ಮಾಡಲು ವಿಫಲರಾಗಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಗೊಂದಲ ಗೂಡಾಗಿದೆ ಎಂದು ಕೃಷ್ಣಬೈರೇಗೌಡ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net