ಬಿಜೆಪಿ ಜಾತಿ, ಪಂಥಗಳಿಗೆ ಸೀಮಿತವಾಗಿಲ್ಲ

halappa avhar namination
ಯಲಬುರ್ಗಾದಲ್ಲಿ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಚುನಾವಣಾಧಿಕಾರಿ ಕೆ.ವಿ.ಕಾವ್ಯಾರಾಣಿಗೆ ನಾಮಪತ್ರ ಸಲ್ಲಿಸಿದರು. ಎಂಎಲ್ಸಿ ಹೇಮಲತಾ ನಾಯಕ, ಪ್ರಮುಖರಾದ ಬಸಲಿಂಗಪ್ಪ ಭೂತೆ, ಸಿ.ಎಚ್.ಪಾಟೀಲ್, ಗೌರಾ ಬಸವರಾಜ, ಸುಧಾಕರ ದೇಸಾಯಿ ಇದ್ದರು.
Published on

ಯಲಬುರ್ಗಾ: ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಹಾಲಪ್ಪ ಆಚಾರ್ ಅವರು ಚುನಾವಣಾಧಿಕಾರಿ ಕೆ.ವಿ.ಕಾವ್ಯಾರಾಣಿಗೆ ಬುಧವಾರ ನಾಮಪತ್ರ ಸಲ್ಲಿಸಿದರು.
ಅಪಾರ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರೊಂದಿಗೆ ಶ್ರೀ ಮೊಗ್ಗಿ ಬಸವೇಶ್ವರ ದೇವಸ್ಥಾನದಿಂದ ವಿವಿಧ ವೃತ್ತಗಳಲ್ಲಿ ರೋಡ್ ಶೋ ನಡೆಸಿ ನಾಮಪತ್ರ ಸಲ್ಲಿಕೆ ಮಾಡಿದರು. ಏ.16 ರಂದು ಆಚಾರ್ ನಾಮಪತ್ರ ಸಾಂಕೇತಿಕವಾಗಿ ಉಮೇದುವಾರಿಕೆ ಸಲ್ಲಿಸಿದ್ದರು.


ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಜನರ ಆಶೀರ್ವಾದದಿಂದ ಮತ್ತೊಮ್ಮೆ ಶಾಸಕನಾಗುವ ವಿಶ್ವಾಸವಿದೆ. ಐದು ವರ್ಷದಲ್ಲಿ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಕೊಟ್ಟ ಮಾತಿನಂತೆ ಕೆರೆಗಳಿಗೆ ನೀರು ಹರಿಸಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ ಎಂದರು.

ರಾಯರಡ್ಡಿ,ನೀರಾವರಿ ಯೋಜನೆ ಅನುಷ್ಠಾನ ಮಾಡಲಿಲ್ಲ

ನೀರಾವರಿ ವಿಚಾರವಾಗಿ ಹಾಲಪ್ಪ ಆಚಾರ್‌ಗೆ ಜ್ಞಾನ ಇಲ್ಲ ಎನ್ನುವ ರಾಯರಡ್ಡಿ ಆರೋಪದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಅಷ್ಟೊಂದು ಜ್ಞಾನ ಇರುವ ರಾಯರಡ್ಡಿ, ಕಳೆದ 30 ವರ್ಷಗಳ ರಾಜಕೀಯ ಇತಿಹಾಸದಲ್ಲಿ ನೀರಾವರಿ ಯೋಜನೆ ಅನುಷ್ಠಾನ ಮಾಡಲಿಲ್ಲ. ಕ್ಷೇತ್ರದ ರೈತರು ಕತ್ತಲಲ್ಲಿ ಇರಿಸಿದ್ದಾರೆ ಎಂದು ದೂರಿದರು.


ಕ್ಷೇತ್ರಕ್ಕೆ ಕಾಂಗ್ರೆಸ್ ಪರವಾಗಿ ಚುನಾವಣಾ ಪ್ರಚಾರ ನಡೆಸಲು ಶೆಟ್ಟರ್, ಸವದಿ ಆಗಮಿಸುವುದರಿಂದ ಪಕ್ಷಕ್ಕೆ ಯಾವುದೇ ನಷ್ಟವಾಗುವುದಿಲ್ಲ. ಪಕ್ಷ ಯಾವುದೇ ಜಾತಿ, ಪಂಥಗಳಿಗೆ ಸೀಮಿತವಾಗಿಲ್ಲ. ತತ್ವ-ಸಿದ್ಧಾಂತ ಮತ್ತು ಸಾಮಾನ್ಯ ಕಾರ್ಯಕರ್ತರಿಂದ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದರು.

ಕಾಂಗ್ರೆಸ್‌ನವರು ದಾರಿ ತಪ್ಪಿಸುವ ಕೆಲಸ

ಬಿ.ಎಲ್.ಸಂತೋಷರಂತಹ ನಾಯಕರಿಂದಲೇ ಸಾಮಾನ್ಯ ಕಾರ್ಯಕರ್ತರು ಮಂತ್ರಿವರೆಗೆ ಬೆಳೆದಿದ್ದಾರೆ. ಪ್ರಹ್ಲಾದ ಜೋಶಿ ಬಿಜೆಪಿಯ ಮುಂದಿನ ಸಿಎಂ ಅಭ್ಯರ್ಥಿ ಎನ್ನುವ ಮೂಲಕ ಕಾಂಗ್ರೆಸ್‌ನವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಉತ್ತಮ ಆಡಳಿತ ನಡೆಸುವವರಿಗೆ ಪಕ್ಷ ಅವಕಾಶ ಕೊಡುತ್ತದೆ.ಬಿಜೆಪಿ ಎಂದರೆ ವಾಂತಿ ಬರುವಂತಾಗಿದೆ ಎನ್ನುವ ಜನಾರ್ದನ ರೆಡ್ಡಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ ಆಚಾರ್, ರೆಡ್ಡಿ ಅವರು ಬಿಜೆಪಿಯಿಂದಲೇ ದೇಶದಲ್ಲಿ ಗುರುತಿಸಿಕೊಂಡಿದ್ದು ಎಂಬುದನ್ನು ಮರೆಯಬಾರದು ಎಂದು ತಿರುಗೇಟು ನೀಡಿದರು.

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸುವ ಮುನ್ನ ಅಪಾರ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ರೋಡ್ ಶೋ ನಡೆಸಿದರು.
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸುವ ಮುನ್ನ ಅಪಾರ ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ರೋಡ್ ಶೋ ನಡೆಸಿದರು.


ಎಂಎಲ್ಸಿ ಹೇಮಲತಾ ನಾಯಕ, ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್, ಪ್ರಮುಖರಾದ ಬಸಲಿಂಗಪ್ಪ ಭೂತೆ, ಸಿ.ಎಚ್.ಪಾಟೀಲ್, ಅರವಿಂದಗೌಡ ಪಾಟೀಲ್, ಶಿವಶಂಕರ ದೇಸಾಯಿ, ಗೌರಾ ಬಸವರಾಜ, ರತನ್ ದೇಸಾಯಿ, ಶಂಕ್ರಪ್ಪ ಸುರಪುರ, ಸುಧಾಕರ ದೇಸಾಯಿ, ಶಿವಲೀಲಾ ದಳವಾಯಿ, ಶಿವಪ್ಪ ವಾದಿ, ಅಯ್ಯಪ್ಪ ಗುಳೇದ, ಶರಣಪ್ಪ ಈಳಿಗೇರ್, ಅಯ್ಯನಗೌಡ ಕೆಂಚಮ್ಮನವರ್, ಫಕೀರಪ್ಪ ತಳವಾರ, ಮಹಾದೇವಿ ಕಂಬಳಿ, ಯಮನೂರಪ್ಪ ಬ್ಯಾಳಿ, ಈಶಪ್ಪ ಸಿದ್ದಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net