

ಆನೇಕಲ್: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ. ರಮೇಶ್ ಮತ್ತು ಜೆಡಿಎಸ್ ಅಭ್ಯರ್ಥಿ ರಾಜಗೋಪಾಲರೆಡ್ಡಿ ಹಲವು ವರ್ಷ ಗಳಿಂದ ಒಂದೇ ಪಕ್ಷದಲ್ಲಿದ್ದವರು. ಇವರಿಬ್ಬರೂ ಹೆಚ್ಚು ಮತ ಪಡೆಯಲು ಹೋರಾಡುತ್ತಿದ್ದಾರೆ. ಹಾಗಾಗಿ ಬಿಜೆಪಿ ಅಭ್ಯರ್ಥಿಗೆ ಪ್ರತಿಸ್ಪರ್ಧಿಗಳಿಲ್ಲ. ದಕ್ಷಿಣ ಕ್ಷೇತ್ರದ ಅಭಿವೃದ್ಧಿಯೇ ಗೆಲುವಿನ ಮೂಲವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಎಂ. ಕೃಷ್ಣಪ್ಪ ಹೇಳಿದ್ದಾರೆ.
ತಾಲೂಕಿನ ಜಿಗಣಿಯಲ್ಲಿ ಜಿಗಣಿ ಪುರಸಭೆ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು. ಗ್ರಾಮ ಪಂಚಾಯಿತಿಯಾಗಿದ್ದ ಜಿಗಣಿಯು ಪುರಸಭೆಯಾಗಿ ಮೇಲ್ದರ್ಜೆಗೇರಿದ್ದು, ಪುರಸಭೆ ವ್ಯಾಪ್ತಿಯಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಸರ್ಕಾರಿ ಆಸ್ಪತ್ರೆ, ದ್ವಿಪಥ ರಸ್ತೆ, ಪೊಲೀಸ್ ಠಾಣೆ, ಕೆರೆಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಗಣಿ ಪುರಸಭಾ ಸದಸ್ಯ ಜಿಗಣಿ ಪುನೀತ್ ಮಾತನಾಡಿ, ಎಂ. ಕೃಷ್ಣಪ್ಪ ಅವರಿಗೆ ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆಯಾಗಿವೆ. ಜನರೊಂದಿಗಿನ ಉತ್ತಮ ಸಂಪರ್ಕಗಳು ಅವರ ಗೆಲುವನ್ನು ಸುಲಭಗೊಳಿಸಲಿದೆ ಎಂದರು.
ಆನೇಕಲ್ ಯೋಜನಾ ಪ್ರಾಧಿಕಾರದ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರೆಡ್ಡಿ, ಪುರಸಭಾ ಸದಸ್ಯರಾದ ಮಲ್ಲಿಗೆ ಆನಂದ್, ಜೆ.ಸಿ. ಕೃಷ್ಣಪ್ಪ, ಮುಖಂಡರಾದ ಬನ್ನೇರುಘಟ್ಟ ಜಯರಾಮ್, ಚುಂಚಘಟ್ಟ ಮಣಿ, ವೆಂಕಟೇಶ್ ಗೌಡ, ಮೆಡಿಕಲ್ ಬಾಬು, ಗಿರೀಶ್, ರಾಮಚಂದ್ರಪ್ಪ, ಎಂ.ಸಿ. ರಾಜಪ್ಪ, ಮಂಜುನಾಥ್, ಪಿ. ರಾಜಣ್ಣ ಇತರರಿದ್ದರು.
ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಕೃಷ್ಣಪ್ಪ ಗುರುವಾರ ಮತಯಾಚನೆ ಮಾಡಿದರು. ಸ್ಥಳೀಯ ಮುಖಂಡರು ಜತೆಗಿದ್ದರು.