ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸಿ

08-GPT-1A
Published on

ಗುಂಡ್ಲುಪೇಟೆ: ಕೇಂದ್ರದಲ್ಲಿ ಮೂರನೇ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರ್ವಹಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್‌ನಿರಂಜನ್ ಕುಮಾರ್ ಹೇಳಿದರು.


ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿನ ಬರಗಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಬೇರಂಬಾಡಿ, ಮೂಖಹಳ್ಳಿ, ಕೂತನೂರು, ಮುಂತಾದ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಮಾಡಿದ ಸಾಧನೆಗಳನ್ನು ದೇಶದ ಜನತೆ ಮೆಚ್ಚಿಕೊಂಡಿದ್ದಾರೆ. ದೇಶದ ಸ್ವಾವಲಂಬನೆಗೆ ಆದ್ಯತೆ ನೀಡಿದ್ದರಿಂದ ಕೇವಲ ವಿದೇಶಗಳಲ್ಲಿ ಕಾಣಲಾಗುತ್ತಿದ್ದ ರಸ್ತೆ, ಸೇತುವೆ, ರೈಲು ವಿಮಾನ, ಉಪಗ್ರಹ ಉಡಾವಣೆ ಮುಂತಾದ ಕ್ಷೇತ್ರದಲ್ಲಿ ದೇಶವು ಅತ್ಯಂತ ಹೆಚ್ಚಿನ ಪ್ರಗತಿ ಸಾಧಿಸುತ್ತಿದ್ದು ಭಾರತವು ಅಭಿವೃದ್ಧಿಯಲ್ಲಿ ವಿಶ್ವದ ಪ್ರಮುಖ ದೇಶವಾಗುವತ್ತ ಮುನ್ನುಗ್ಗುತ್ತಿದೆ ಎಂದರು.


ದೇಶ-ವಿದೇಶಗಳಲ್ಲಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಒಪ್ಪಿಕೊಳ್ಳುತ್ತಿದ್ದು, ಈ ಬಾರಿ ಮತದಾರರ ಒಲವು ಬಿಜೆಪಿ ಕಡೆಗಿದೆ. ಸದಾ ಕಾಲ ಜನರ ನಡುವೆ ಇರುವ ಅಭ್ಯರ್ಥಿ ಬಾಲರಾಜ್ ಸಜ್ಜನರಾಗಿದ್ದು ಎಲ್ಲ ಮತದಾರರನ್ನೂ ಖುದ್ದಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಆಯಾ ಗ್ರಾಮಗಳ ಕಾರ್ಯಕರ್ತರೇ ಅಭ್ಯರ್ಥಿಯಾಗಿ ತಮ್ಮ ಬೂತ್‌ಗಳಲ್ಲಿ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.


ಮಂಡಲ ಅಧ್ಯಕ್ಷ ಸಿ.ಮಹದೇವಪ್ರಸಾದ್, ಮಾಜಿ ಅಧ್ಯಕ್ಷ ಎಲ್.ಸುರೇಶ್. ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಂ. ಮಲ್ಲಿಕಾರ್ಜುನಸ್ವಾಮಿ, ಕನ್ನೆಗಾಲ ಮಾದಪ್ಪ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚನ್ನಮಲ್ಲೀಪುರ ಬಸವಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ಸುನೀಲ್, ಮುಖಂಡರಾದ ಮಂಚಹಳ್ಳಿ ಬಾಬು, ಮಾಡ್ರಹಳ್ಳಿ ಮಲ್ಲೇಶ್, ಮಾಧ್ಯಮ ಸಂಚಾಲಕ ಎಸ್.ಸಿ.ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net