ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಕರೊನಾಗೆ ಬಲಿ; ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ

Corona Death
ಸಾಂದರ್ಭಿಕ ಚಿತ್ರ
Published on

ಕೋಲಾರ: ದೇಶ ಹಾಗೂ ರಾಜ್ಯದಲ್ಲಿ ಕರೊನಾ ವಿಪರೀತವಾಗಿ ಹೆಚ್ಚಾಗುತ್ತಿದ್ದು, ಸೋಂಕಿನ ಪ್ರಕರಣಗಳಷ್ಟೇ ಅಲ್ಲದೆ ಸಾವಿನ ಪ್ರಕರಣಗಳೂ ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲೇ ಇವೆ.

ಸೋಂಕು ವ್ಯಾಪಿಸುತ್ತಿರುವ ಹಾಗೂ ಅದರಿಂದ ಉಂಟಾಗುತ್ತಿರುವ ಗಂಭೀರ ಪರಿಸ್ಥಿತಿಯ ಬೇಡಿಕೆಗೆ ತಕ್ಕಂತೆ ಹಾಸಿಗೆ, ಐಸಿಯು, ಆಕ್ಸಿಜನ್ ಸಿಗದ್ದರಿಂದ ಬಹಳಷ್ಟು ಮಂದಿ ಸಾವಿಗೀಡಾಗುತ್ತಿದ್ದಾರೆ. ಮತ್ತೊಂದೆಡೆ ಕರೊನಾಗೆ ಬಲಿಯಾಗುತ್ತಿರುವವರ ಪೈಕಿ ಜನಪ್ರತಿನಿಧಿಗಳೂ ಇದ್ದು, ಆ ಪಟ್ಟಿಗೆ ಇಂದು ಮತ್ತೊಬ್ಬರ ಸೇರ್ಪಡೆ ಆದಂತಾಗಿದೆ. ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರೊಬ್ಬರು ಕರೊನಾದಿಂದಾಗಿ ಇಂದು ಮೃತಪಟ್ಟಿದ್ದಾರೆ.

ಕೋಲಾರ ಜಿಲ್ಲಾ ಬಿಜೆಪಿಯ ಮಾಜಿ ಅಧ್ಯಕ್ಷ ಲಕ್ಷ್ಮಯ್ಯ (55) ಮೃತಪಟ್ಟವರು. ಒಂದು ವಾರದ ಹಿಂದೆ ಇವರಲ್ಲಿ ಸೋಂಕು ದೃಢಪಟ್ಟಿತ್ತು. ಅಲ್ಲದೆ ಸೋಂಕಿನ ಕಾರಣದಿಂದಾಗಿ ಉಸಿರಾಟದ ಸಮಸ್ಯೆಗೂ ಒಳಗಾಗಿದ್ದ ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net