ಗೃಹ ಸಚಿವರ ರಾಜೀನಾಮೆಗೆ ಡಾ.ಸುಧಾ ಹಾಲಕಾಯಿ ಆಗ್ರಹ

ರಾಜ್ಯದಲ್ಲಿ ಕಳೆದ ೬ ತಿಂಗಳುಗಳಿAದ ಕಾನೂನು- ಸುವ್ಯವಸ್ಥೆ ದಿನೇದಿನೇ ಹದಗೆಡುತ್ತಲೇ ನಡೆದಿದೆ. ಒಂದು ಕಡೆ ಜಿಹಾದಿ ಮನಸ್ಥಿತಿಯವರನ್ನು ರP್ಷÀಣೆ ಮಾಡುವಂತ ಕಾರ್ಯ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಮಹಿಳೆಯರ ಮಾನ-ಪ್ರಾಣ ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ವೈದ್ಯರ ಪ್ರಕೋಷ್ಠದ ರಾಜ್ಯ ಸಂಚಾಲಕಿ ಹಾಗೂ ವಕ್ತಾರೆ ಡಾ.ಸುಧಾ ಹಾಲಕಾಯಿ ಕಿಡಿ ಕಾರಿದ್ದಾರೆ.
Dr.Sudha Halakai
Published on

ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆ  ಬಿಜೆಪಿ ಕಿಡಿ
ವಿಜಯವಾಣಿ ಸುದ್ದಿಜಾಲ ಕಲಬುರಗಿ

ರಾಜ್ಯದಲ್ಲಿ ಕಳೆದ ೬ ತಿಂಗಳುಗಳಿAದ ಕಾನೂನು- ಸುವ್ಯವಸ್ಥೆ ದಿನೇದಿನೇ ಹದಗೆಡುತ್ತಲೇ ನಡೆದಿದೆ. ಒಂದು ಕಡೆ ಜಿಹಾದಿ ಮನಸ್ಥಿತಿಯವರನ್ನು ರP್ಷÀಣೆ ಮಾಡುವಂತ ಕಾರ್ಯ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಮಹಿಳೆಯರ ಮಾನ-ಪ್ರಾಣ ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ವೈದ್ಯರ ಪ್ರಕೋಷ್ಠದ ರಾಜ್ಯ ಸಂಚಾಲಕಿ ಹಾಗೂ ವಕ್ತಾರೆ ಡಾ.ಸುಧಾ ಹಾಲಕಾಯಿ ಕಿಡಿ ಕಾರಿದ್ದಾರೆ.
ಬೆಳಗಾವಿಯಲ್ಲಿ  ಅಧಿವೇಶನ ನಡೆಯುತ್ತಿರುವ  ಸಂದರ್ಭದ¯್ಲೆÃ ಬೆಳಗಾವಿ ಜಿ¯್ಲÉಯ ಗ್ರಾಮವೊಂದರಲ್ಲಿ ಮಹಿಳೆಯನ್ನು ವಿವಸ್ತçಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣ ಇಡಿ ಮಾನವ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಇಡಿ ಸರ್ಕಾರವೇ ಅಲ್ಲಿದ್ದರೂ ಇಂತಹ ಘಟನೆ ನಡೆದಿದ್ದು  ಸರ್ಕಾರದ ಕಾರ್ಯವೈಖರಿಗೆ ಮತ್ತು ಕಾನೂನು- ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಎಲ್ಲ ಹಂತದಲ್ಲಿ ವಿಫಲವಾಗಿದೆ. ಘಟನೆಯ ನೈತಿಕತೆ ಹೊತ್ತು ತP್ಷÀಣವೇ ಗೃಹ ಸಚಿವ ಡಾ.ಪರಮೇಶ್ವರ ಅವರು ರಾಜೀನಾಮೆ ಕೊಡಬೇಕು ಎಂದು ಡಾ.ಹಾಲಕಾಯಿ ಆಗ್ರಹಿಸಿದ್ದಾರೆ.
ಪೊಲೀಸರು ಸಹ ಪ್ರತಿಭಟನೆ ನಡೆಸಿದ್ದು ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂಬುದರ ಸಾಕ್ಷಿಯಾಗಿದೆ.ಮಹಿಳೆಯರ ರಕ್ಷಣೆ ವಿಷಯದಲ್ಲಿ ಅದೇ ಜಿಲ್ಲೆಯವರೇ ಆಗಿರುವ ಸಚಿವೆ ಲಕ್ಷಿö್ಮÃ ಹೆಬ್ಬಾಳಕರ್ ಅವರು ವಿಫಲಗೊಂಡಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. ಇದಕ್ಕೆ ಕಡಿವಾಣ ಹಾಕಬೇಕು.ಇಲ್ಲದಿದ್ದರೆ ಸರ್ಕಾರದ ವಿರುದ್ಧ ಜನರು ತಿರುಗಿಬಿದ್ದು ಹೋರಾಟಕ್ಕಿಳಿಯುವ ಕಾಲ ದೂರವಿಲ್ಲ ಎಂದು ಡಾ.ಸುಧಾ ಹಾಲಕಾಯಿ ಎಚ್ಚರಿಸಿದ್ದಾರೆ. ಅಲ್ಲದೆ ಬಿಜೆಪಿ ಸಹ ಹೋರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net