

ಕಾರವಾರ:ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂಬ ಹೇಳಿಕೆ ನೀಡಿದ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ವಿರುದ್ಧ ಜಿಲ್ಲಾ ಬಿಜೆಪಿ ವಕ್ತಾರ ನಾಗರಾಜ ನಾಯಕ ಇಲ್ಲಿನ ಶಹರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಿಜೆಪಿ ಪದಾಧಿಕಾರಿಗಳ ಜತೆ ಮಂಗಳವಾರ ಶಹರ ಪೊಲೀಸ್ ಠಾಣೆಗೆ ತೆರಳಿ ಅವರು ದೂರು ನೀಡಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ವೇ ಜನಾಃ ಸುಖಿನೋ ಭವಂತು ಎಂದು ಹೇಳುವ ಸನಾತನ ಧರ್ಮದ ವಿರುದ್ಧ ಮಾತನಾಡಿರುವುದು ಸ್ಟಾಲಿನ್ ಅವರ ಕುತ್ಸಿತ ಮನೋಭಾವವನ್ನು ಸೂಚಿಸುತ್ತದೆ.
ಸ್ಟಾಲಿನ್ ಉದ್ದೇಶಪೂರ್ವಕವಾಗಿ ಹಿಂದು ಸನಾತನ ಧರ್ಮವನ್ನು ಹೀಗಳೆದಿದ್ದು, ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಅವರ ಹೇಳಿಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ದೂರಿದ್ದಾರೆ.
ಇದನ್ನೂ ಓದಿ:ಭತ್ತದ ಬೆಳೆಗೆ ಮಳೆ ಕೊರತೆ
ಬಿಜೆಪಿ ನಗರ ಮಂಡಳ ಅಧ್ಯಕ್ಷ ನಾಗೇಶ ಕುರ್ಡೇಕರ್, ಮನೋಜ ಭಟ್, ಸುನೀಲ ತಾಮ್ಸೆ, ರವಿ ರಾವ್, ಉದಯ ಬಶೆಟ್ಟಿ, ಅರುಣ ಹಬ್ಬು, ಗಜಾನ ಕುಬಡೆ, ಎಲ್.ಕೆ.ನಾಯ್ಕ ರೋಶನಿ ಮಾಳ್ಸೇಕರ್, ಉಲ್ಲಾ ಕೇಣಿ, ಸಂದೇಶ ಶೆಟ್ಟಿ, ಸೂರ್ಯಪ್ರಕಾಶ ಶೆಟ್ಟಿ, ಮಹೇಂದ್ರ ಬಾನಾವಳಿ, ರವಿರಾಜ ಅಂಕೋಲೆಕರ್ ಇದ್ದರು.