ಜಿಎಸ್‌ಟಿ ಕಡಿತ ಬಿಜೆಪಿಯಿಂದ ಸಂಭ್ರಮಾಚರಣೆ

22 bannur 1
Published on

 ಬನ್ನೂರು: ಅಗತ್ಯ ವಸ್ತಗಳ ಬೆಲೆ ಇಳಿಕೆಯಿಂದ ಜನರಿಗೆ ಅನುಕೂಲವಾಗಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎನ್.ಎಂ.ರಾಮಚಂದ್ರ ತಿಳಿಸಿದರು.

ಪಟ್ಟಣದಲ್ಲಿ ಬಿಜೆಪಿ ಮುಖಂಡರಿಂದ ಸೋಮವಾರ ಅಗತ್ಯ ವಸ್ತುಗಳ ಜಿಎಸ್‌ಟಿ ಕಡಿತವಾಗಿರುವುದನ್ನು ಬೆಂಬಲಿಸಿ, ಪ್ರಧಾನಿ ಮೋದಿಗೆ ಜಯಘೋಷ ಕೂಗಿ, ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಿ ಮಾತನಾಡಿದರು.

ಪ್ರಧಾನಿ ಮೋದಿ ಅವರ ಜಿಎಸ್‌ಟಿ ಕಡಿತ ದಸರಾ ನವರಾತ್ರಿಯ ಕೊಡುಗೆಯಾಗಿದ್ದು, ಜೀವನದಲ್ಲಿ ಪ್ರತಿಯೊಬ್ಬರಲ್ಲೂ ನಗೆ ಮೂಡಿಸುವಂತಹ ಕಾರ್ಯವನ್ನು ಮಾಡಿ, ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.

ಅಗತ್ಯ ವಸ್ತುಗಳ ಬೆಲೆ ಎರಿಕೆಯಿಂದಾಗಿ ಜನ ಹೈರಾಣಾಗಿದ್ದು, ನಿತ್ಯದ ಸಂಪಾದನೆ ಅಗತ್ಯ ವಸ್ತುಗಳನ್ನು ಖರೀದಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು ಪ್ರಧಾನಿ ಮೋದಿ ನವರಾತ್ರಿಯ ಆರಂಭದ ದಿನದಂದೆ ಭರ್ಜರಿ ಕೊಡುಗೆ ನೀಡಿ ಜನರ ಮೊಗದಲ್ಲಿ ಹರ್ಷ ತಂದಿದ್ದಾರೆ ಎಂದರು.

ಇದರಿಂದಾಗಿ ನಂದಿನಿ ಉತ್ಪನ್ನಗಳು ಸೇರಿದಂತೆ ನಿತ್ಯ ಬಳಸುವಂತೆ ಪೇಸ್ಟ್, ಸೋಪು, ದ್ವಿಚಕ್ರ ವಾಹನಗಳು, ದಿನಸಿ ಪದಾರ್ಥಗಳು ಸೇರಿದಂತೆ ಹಲವು ವಸ್ತುಗಳ ಬೆಲೆ ಇಂದಿನಿಂದ ಕಡಿಮೆ ಆಗಲಿದೆ. ಮುಂದಿನ ದಿನದಲ್ಲಿ ಸಾಕಷ್ಟು ಬದಲಾವಣೆ ಆಗಲಿದ್ದು, ಶೇ 98ರಷ್ಟು ವಸ್ತುಗಳ ಬೆಲೆ ಕಡಿಮೆ ಆಗಲಿದೆ ಎಂದರು.

ಪುರಸಭೆ ಮಾಜಿ ಸದಸ್ಯ ಪ್ರಭಾಕರ್ ಮಾತನಾಡಿ, ಪ್ರಧಾನಿ ಮೋದಿಯ ಸಾಧನೆ ಪ್ರತಿಯೊಬ್ಬರು ಮೆಚ್ಚುವಂತಹದ್ದು, ಜಿಎಸ್‌ಟಿ ಇಳಿಕೆಯಿಂದ ಜನರ ಜೀವನ ಹಸನಾಗಿದೆ. ಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಜಿಎಸ್‌ಟಿ ಕಡಿತ ಮಾಡಿರುವುದು ಪ್ರತಿಯೊಬ್ಬರಿಗೂ ಅನುಕೂಲವಾಗಿದ್ದು, ನಾಡಿನ ಜನತೆಗೆ ದಸರಾ ಬಂಪರ್ ನೀಡಿದ್ದಾರೆ ಎಂದರು. ಟೌನ್ ಅಧ್ಯಕ್ಷ ಕಾಳೇಗೌಡ, ಗಣೇಶ್, ರವಿ, ಮಲಿಯೂರು ಸುಂದರ್, ಮಲಿಯೂರು ಮಹದೇವು, ಭವ್ಯ, ನಂದೀಶ್, ಕೆಂಪಣ್ಣ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net