

ಉಡುಪಿ: ಸಂಘಟನೆಯ ಮೂಲಕ ಸಮಾಜದಲ್ಲಿ ಪರಿವರ್ತನೆ ತರುವ ಕೆಲಸ ಕೆಥೊಲಿಕ್ ಸಭಾ ನಿರಂತರ ನಡೆಸುತ್ತಿದೆ. ಉತ್ತಮ ಸೇವೆ ದೇಶದಲ್ಲಿಯೇ ಮಾದರಿಯಾಗಿದೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಭಾನುವಾರ ಉಡುಪಿ ಶೋಕ ಮಾತಾ ಇಗರ್ಜಿಯ ಸಭಾಂಗಣದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಗೋಡಂಬಿ ಉತ್ಪಾದಕರ ಸಂಘದ ಅಧ್ಯಕ್ಷ ಸಂತೋಷ ಡಿಸಿಲ್ವ ಕಾರ್ಕಳ ಮಾತನಾಡಿ, ಸಂಘಟನೆ ದೇಶದಲ್ಲಿಯೇ ಖ್ಯಾತಿ ಪಡೆದಿರುವುದಕ್ಕೆ ಅದು ನೀಡುತ್ತಿರುವ ನಿಸ್ವಾರ್ಥ ಸೇವೆ ಕಾರಣ. ಸಮಾಜದಲ್ಲಿ ಸಮುದಾಯದ ವ್ಯಕ್ತಿಗಳು ಉನ್ನತ ಹುದ್ದೆಗಳನ್ನು ಪಡೆಯುವತ್ತ ಇನ್ನಷ್ಟು ಪ್ರಯತ್ನ ಮುಂದುವರಿಸುವಂತೆ ಕರೆ ನೀಡಿದರು.
ಇದನ್ನೂ ಓದಿ: ತಮ್ಮನ್ನು ಫೇಕ್ ಅಂದವರಿಗೆ ಸೋನು ಕೊಟ್ಟ ಉತ್ತರವೇನು?
ಸಂಘಟನೆ ಅಧ್ಯಕ್ಷ ರೋಬರ್ಟ್ ಮಿನೇಜಸ್ ಅಧ್ಯಕ್ಷತೆ ವಹಿಸಿದ್ದರು. ಹಿಂದಿನ ಸಾಲಿನ ವಾರ್ಷಿಕ ಮಹಾಸಭೆ ವರದಿಯನ್ನು ಸಹಕಾಯದರ್ಶಿ ಗ್ರೆಗೋರಿ ಪಿಕೆ ಡಿಸೋಜ, ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಸಂತೋಷ್ ಕರ್ನೆಲಿಯೊ, ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಮಾನಸ ಸಂಸ್ಥೆ ವರದಿಯನ್ನು ಹೆನ್ರಿ ಮಿನೇಜಸ್, ಸಶಕ್ತ ಸಮುದಾಯ ಟ್ರಸ್ಟ್ ವರದಿಯನ್ನು ಆಲಿಸ್ ರೊಡ್ರಿಗಸ್ ಮಂಡಿಸಿದರು.
ಇದನ್ನೂ ಓದಿ: ನಿಷೇಧದ ನಡುವೆ ನಡೆಯಿತು ದೇವರಗಟ್ಟು ಬಡಿಗೆ ಉತ್ಸವ
ಕೆಥೊಲಿಕ್ ಸಭಾ ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ನಿಯೋಜಿತ ಅಧ್ಯಕ್ಷೆ ಮೇರಿ ಡಿಸೋಜ, ಸಶಕ್ತ ಸಮುದಾಯ ಟ್ರಸ್ಟ್ ಸಂಚಾಲಕರಾದ ವಾಲ್ಟರ್ ಸಿರಿಲ್ ಪಿಂಟೊ, ವಲಯಾಧ್ಯಕ್ಷರಾದ ಮೇಬಲ್ ಡಿಸೋಜಾ ಕುಂದಾಪುರ, ರೋಸಿ ಬಾರೆಟ್ಟೊ ಕಲ್ಯಾಣಪುರ, ಸೊಲೋಮನ್ ಆಲ್ವಾರಿಸ್ ಕಾರ್ಕಳ, ಐಡಾ ಕರ್ನೆಲಿಯೋ ಶಿರ್ವಾ, ರೊನಾಲ್ಡ್ ಆಲ್ಮೇಡಾ ಉಡುಪಿ ಉಪಸ್ಥಿತರಿದ್ದರು. ರೋಬರ್ಟ್ ಮಿನೇಜಸ್ ಸ್ವಾಗತಿಸಿ, ಸಂತೋಷ್ ಕರ್ನೆಲಿಯೊ ವಂದಿಸಿದರು. ಎಡ್ವರ್ಡ್ ಲಾರ್ಸನ್ ಡಿಸೋಜಾ ನಿರೂಪಿಸಿದರು.
ಬಹುಮಾನ ವಿತರಣೆ: ದಿ.ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಮರ್ಧೆಯಲ್ಲಿ ವಿಜೇತರಾದವರಿಗೆ ಬಹಮಾನ ವಿತರಣೆ ಮತ್ತು 2020-21ನೇ ವರ್ಷದ ಡೈರಕ್ಟರಿಯ ಅನಾವರಣ ಕಾರ್ಯಕ್ರಮ ಜರುಗಿತು. ಬರಹಗಾರ ರಿಚ್ಚಾರ್ಡ್ ದಾಂತಿ ಪಾಂಬೂರ್ ಅವರಿಗೆ ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು.