ಬಿಐಎಸ್​ ವಾರ್ಷಿಕ ಪ್ರಾದೇಶಿಕ ಹಾಲ್​ಮಾರ್ಕಿಂಗ್​ ಸಭೆ

BIS
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಬಿಐಎಸ್​ ಬೆಂಗಳೂರು ಶಾಖಾ ಕಚೇರಿ ವತಿಯಿಂದ ದಕ್ಷಿಣ ವಲಯದ ವಾರ್ಷಿಕ ಪ್ರಾದೇಶಿಕ ಹಾಲ್​ಮಾರ್ಕಿಂಗ್​ ಸಭೆಯನ್ನು ಆ.20 ರಿಂದ 22ರವರೆಗೆ ಬೆಂಗಳೂರಿನಲ್ಲಿ ಆಯೋಜಿಸಿದೆ.

ಈ ಕಾರ್ಯಕ್ರಮದ ಅಂಗವಾಗಿ ಬುಧವಾರ ಐ. ವಿ. ಸ್ಯಾಂಕ್ಟಮ್​ ಹೋಟೆಲ್​ನಲ್ಲಿ ಅಸೇಯಿಂಗ್​ & ಹಾಲ್​ಮಾರ್ಕಿಂಗ್​ ಕೇಂದ್ರಗಳ (ಎಎಚ್​ಸಿ) ಹಾಗೂ ಆಭರಣ ವ್ಯಾಪಾರಿಗಳ ಸಭೆ ನಡೆಯಿತು.

ಬೆಳಿಗ್ಗೆ ಎಎಚ್​ಸಿಗಾಗಿ ಹಾಗೂ ಮಧ್ಯಾಹ್ನ ಜ್ಯುವೆಲ್ಲರ್ಸ್​ ಸಂಘಗಳಿಗಾಗಿ ಪ್ರತ್ಯೇಕ ಅಧಿವೇಶನಗಳನ್ನು ಆಯೋಜಿಸಲಾಗಿತ್ತು. ಹಾಲ್​ಮಾರ್ಕಿಂಗ್​ನ ಪ್ರಸ್ತುತ ಸ್ಥಿತಿ, ಸವಾಲುಗಳು ಹಾಗೂ ಭವಿಷ್ಯದ ಯೋಜನೆಗಳ ಕುರಿತು ತಜ್ಞರು ಚರ್ಚಿಸಿದರು.

ಚೆನ್ನೈನ ಎಸ್​ಆರ್​ಒ ಉಪ ಮಹಾನಿರ್ದೇಶಕಿ ಡಾ. ಮೀನಾಕ್ಷಿ ಗಣೇಶನ್​ ಅವರು ಹಾಲ್​ಮಾರ್ಕಿಂಗ್​ ಮೂಲಕ ಗ್ರಾಹಕರ ನಂಬಿಕೆಯನ್ನು ಹೆಚ್ಚಿಸುವುದು ಹಾಗೂ ಗುಣಮಟ್ಟದ ಮಾನದಂಡಗಳನ್ನು ಕಾಪಾಡುವ ಮಹತ್ವವನ್ನು ಹೇರಳವಾಗಿ ವಿವರಿಸಿದರು. ಹಾಲ್​ಮಾರ್ಕಿಂಗ್​ ಉಪ ಮಹಾನಿರ್ದೇಶಕಿ ಚಿತ್ರಾ ಗುಪ್ತಾ ಅವರು ಹೊಸ ಪೈಲಟ್​ ಯೋಜನೆಗಳು, ಸಿಲ್ವರ್​ ಹಾಲ್​ಮಾರ್ಕಿಂಗ್​ ಎಚ್​ಯುಐಡಿ, ಹಾಗೂ 9 ಕ್ಯಾರೆಟ್​ ಚಿನ್ನದ ಪರಿಚಯ ಕುರಿತಂತೆ ಮಾಹಿತಿ ನೀಡಿದರು.

ಅಕ್ಷಯ್​ ಕೌಶಕ್​, ಆರ್​. ತಿರುಮಲ ರಾವ್​ ಹಾಗೂ ಕೆ.ಎನ್​.ವಿ.ಎಸ್​. ಚೈತನ್ಯ ಸೇರಿ ಹಲವು ಅಧಿಕಾರಿಗಳು ತಾಂತ್ರಿಕ ಬದಲಾವಣೆಗಳು, ತಿದ್ದುಪಡಿ ನಿಯಮಗಳು ಹಾಗೂ ಪ್ರಾಯೋಗಿಕ ಅಡಚಣೆಗಳ ಕುರಿತು ವಿವರಿಸಿದರು. ಸಭೆಯಲ್ಲಿ ಪಾಲ್ಗೊಂಡವರು ತಮ್ಮ ಅಭಿಪ್ರಾಯಗಳು ಹಾಗೂ ಸಲಹೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮವನ್ನು ಬಿಐಎಸ್​ ಬೆಂಗಳೂರು ಶಾಖಾ ಕಚೇರಿಯ ನಿರ್ದೇಶಕಿ ವಿನೋದಿನಿ ಕಿಶೋರ್​ ಸಂಯೋಜಿಸಿದರು. ಎಂ. ಸುಷ್ಮಾ ರಾವ್​ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net