ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಮಾಡಿ ಜನ್ಮದಿನಾಚರಣೆ

Birth day F
Published on

ಬೆಂಗಳೂರು: ಜನ್ಮದಿನಾಚರಣೆ ನೆಪದಲ್ಲಿ ಮೋಜು, ಮಸ್ತಿ ಮತ್ತಿತರ ಅರ್ಥಹೀನ ಆಚರಣೆಗಳಿಗೆ ಸಾಕ್ಷಿಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಶ್ರೀ ಶಿವಶಂಕರ ಶಾಸ್ತ್ರಿ ಗುರೂಜಿಯವರು ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ಮಾಡುವ ಮೂಲಕ ಅರ್ಥಪೂರ್ಣ ಜನ್ಮದಿನಾಚರಣೆ ಆಚರಿಕೊಂಡಿದ್ದಾರೆ.

ಗಾನಸುಧೆ ತಂಡದ ಮೂಲಕ ರಾಜ್ಯಾದ್ಯಂತ ಹೆಸರಾಗಿರುವ ನಾದಭಾಸ್ಕರ ಶಿವಶಂಕರ ಶಾಸ್ತ್ರೀಜಿಯವರು, ತಮ್ಮ 51ನೇ ಜನ್ಮದಿನದ ಅಂಗವಾಗಿ ತಾವು ಉಪನ್ಯಾಸಕರಾಗಿರುವ ಚಿಕ್ಕಪೇಟೆ ಮಹಂತರಮಠದ ಶ್ರೀಜಗದ್ಗುರು ರೇಣುಕಾಚಾರ್ಯ ಗುರುಕುಲದ ಎಲ್ಲ ವಿದ್ಯಾರ್ಥಿಗಳಿಗೆ ಶ್ರೀ ಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥವನ್ನು ನೀಡಿ ಜ್ಞಾನದಾಸೋಹ ಮಾಡಿದರು. ಇದೇ ವೇಳೆ ಮಠದ ಸ್ವಚ್ಛತಾ ಸಿಬ್ಬಂದಿಗಳಿಗೆ ವಸ್ತ್ರದಾನ ಮಾಡಿ ಸಾಮಾಜಿಕ ಕಳಕಳಿ ಮೆರೆದರು.

ಶಿವಶಂಕರ ಗುರೂಜಿಯವರು ಅದ್ಭುತ ಗಾಯಕರಾಗಿದ್ದು, ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಸಂಸ್ಕೃತಿ ಸೌರಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.

ಮಹಂತರ ಮಠದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿದ್ವಾನ್ ಚನ್ನಬಸವಾರಾಧ್ಯರು, ನಿರಂಜನಾರಾಧ್ಯರು, ವೀರಭದ್ರಯ್ಯನವರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಸದಸ್ಯರಾದ ಕಲ್ಪನಾ ಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net