ಕಚೇರಿಯಲ್ಲೇ ಹುಟ್ಟುಹಬ್ಬ ಆಚರಣೆ

ಭೂಮಾಪನ ಕಚೇರಿಯ ಮೇಲ್ವಿಚಾರಕರೊಬ್ಬರ ಹುಟ್ಟುಹಬ್ಬವನ್ನು ಕಚೇರಿಯಲ್ಲೇ ಕೇಕ್ ಕತ್ತರಿಸಿ ಕೆಲಸದ ವೇಳೆ ಆಚರಿಸಿಕೊಂಡಿದ್ದಾರೆ.
01 SDLP 03
ಭೂಮಾಪನ ಕಚೇರಿಯ ಮೇಲ್ವಿಚಾರಕರೊಬ್ಬರ ಹುಟ್ಟುಹಬ್ಬವನ್ನು ಕಚೇರಿಯಲ್ಲೇ ಕೇಕ್ ಕತ್ತರಿಸಿ ಕೆಲಸದ ವೇಳೆ ಆಚರಿಸಿಕೊಂಡಿದ್ದಾರೆ.
Published on

ಕೆಲಸದ ವೇಳೆಯಲ್ಲಿ ಸಂಭ್ರಮಿಸಿದ್ದಕ್ಕೆ ಸಾರ್ವಜನಿಕರ ಆಕ್ಷೇಪ- ಸಿಬ್ಬಂದಿಗೆ ತಹಸೀಲ್ದಾರ್ ತರಾಟೆ


ಶಿಡ್ಲಘಟ್ಟ: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ತಾಲೂಕು ಕಚೇರಿಯಲ್ಲಿ ನೌಕರರೊಬ್ಬರು ಕೆಲಸದ ಸಮಯದಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸುತ್ತಿರುವ ಫೋಟೋ, ವಿಡಿಯೋಗಳು ಫೇಸ್‌ಬುಕ್, ವಾಟ್ಸ್‌ಆ್ಯಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದಕ್ಕೆ ಸಾರ್ವಜನಿಕವಾಗಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಕಚೇರಿಯ ನಿರೀಕ್ಷಕರೊಬ್ಬರ ಹುಟ್ಟುಹಬ್ಬವನ್ನು ಅಧಿಕಾರಿಗಳು, ಸಿಬ್ಬಂದಿ ಮತ್ತು ನ್ಯಾಯಬೆಲೆ ಅಂಗಡಿಗಳ ಕೆಲ ಮಾಲೀಕರು ಸೇರಿ ಕಚೇರಿಯಲ್ಲೇ ಸೇರಿ ಆಚರಿಸಿ ಸಂಭ್ರಮಿಸಿದ್ದಾರೆ. ಕೇಕ್ ಕತ್ತರಿಸಿ ಪರಸ್ಪರ ತಿನ್ನಿಸಿರುವ, ಹಾರ ತುರಾಯಿ ಹಾಕಿಕೊಂಡು ತೆಗೆಸಿಕೊಂಡ ಸೆಲ್ಫಿ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ತಹಸೀಲ್ದಾರ್ ಬಿ.ಎನ್.ಸ್ವಾಮಿ ಅವರು ಆಹಾರ ನಾಗರಿಕ ಪೂರೈಕೆ ಶಿರಸ್ತೇದಾರ್ ಧನಲಕ್ಷ್ಮೀ ಅವರನ್ನು ಕರೆಸಿ ತರಾಟೆ ತೆಗೆದುಕೊಂಡಿದ್ದಾರೆ. ಕೆಲಸದ ವೇಳೆ ಯಾರೇ ಆಗಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವಂತಿಲ್ಲ. ನಿಮ್ಮ ಕಚೇರಿಯಲ್ಲಿ ಕೆಲಸದ ವೇಳೆ ಆಗುವ ಇಂತಹ ಎಲ್ಲ ಚಟುವಟಿಕೆ, ಘಟನೆಗಳಿಗೆ ನೀವೇ ಹೊಣೆ ಆಗಲಿದ್ದೀರಿ. ಘಟನೆ ಕುರಿತು ಲಿಖಿತ ಸಮಜಾಯಿಷಿ ನೀಡುವಂತೆ ಸೂಚಿಸಿದ್ದಾರೆ.

ಸಾರ್ವಜನಿಕರಿಂದ ತರಾಟೆ
ಭೂ ಮಾಪನ ಕಚೇರಿ ಮೇಲ್ವಿಚಾರಕರೊಬ್ಬರು ಹುಟ್ಟುಹಬ್ಬವನ್ನು ಕಚೇರಿಯಲ್ಲಿ ಕೆಲಸದ ವೇಳೆ ಆಚರಿಸಿಕೊಂಡಿದ್ದಾರೆ. ಟೇಬಲ್ ಮೇಲೆ ಕೇಕ್ ಇಟ್ಟು ಕತ್ತರಿಸಿ ಪರಸ್ಪರ ತಿನ್ನಿಸುತ್ತಾ ಶುಭಾಶಯ ಕೋರಿದ್ದಾರೆ. ಶಿಡ್ಲಘಟ್ಟ ತಾಲೂಕು ಕಚೇರಿಯಲ್ಲಿಂದು ವಿವಿಧ ಶಾಖೆೆಗಳ ಮೂವರ ಹುಟ್ಟುಹಬ್ಬವಾಗಿದ್ದು, ಕಚೇರಿ ಸಮಯದಲ್ಲಿ ಸಂಭ್ರಮಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net