

ಬೆಳಗಾವಿ: ಜನ್ಮದಿನ ಆಚರಣೆ ವೇಳೆ ಕೇಕ್ ಕತ್ತರಿಸಲು ಖಡ್ಗ ಬಳಸಿದ್ದ ಯುವಕನನ್ನು ಮಾರಿಹಾಳ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ತಾಲೂಕಿನ ಪಂತಬಾಳೇಕುಂದ್ರಿ ಗ್ರಾಮದ ಪ್ರೇಮ್ ಅಶೋಕ ಕೋಲಕಾರ(26) ಬಂಧಿತ.
ಈತ ಖಡ್ಗ ಬಳಸಿ ಕೇಕ್ ಕತ್ತರಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಾರ್ವಜನಿಕರು ಈ ವಿದ್ಯಮಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.