ಜನನ-ಮರಣ ನೋಂದಣಿ ನಕಲು ಕಂಡುಬAದರೆ ಕ್ರಮ ಕೈಗೊಳ್ಳಿ

DC Metting
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಜನನ -ಮರಣ ನೋಂದಣಿ ಬಗ್ಗೆ-ಮರು ನೋಂದÀಣಿ, ನಕಲು ಪ್ರತಿ ಬರೆಯುವುದು ಕಂಡು ಬಂದರೆ ಅಂಥವರ ವಿರುದ್ಧ ಎಫ್‌ಐಆರ್ ದಾಖಲು ಮಾಡುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಸೂಚಿಸಿದರು.

ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ೨೦೨೪-೨೫ ನೇ ಸಾಲಿನ ಎರಡನೇ ತ್ರೆÊಮಾಸಿಕ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

೨೦೨೪-೨೫ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮ್ (ವಿಮಾ ) ಯೋಜನೆಯಡಿ ಬೆಳೆ ಕಟಾವು ಪ್ರಯೋಗ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೃಷಿ ಅಂಕಿ ಆಂಶಗಳನ್ನು ಸುಧಾರಣೆಗಾಗಿ ೧೧ ನೇ ಕೃಷಿ ಗಣತಿಯ ಎರಡನೇ ಹಂತದ ಮುಕ್ತಾಯದ ಕುರಿತು ಮತ್ತು ಜನನ-ಮರಣ ನೋಂದಣಿ ಕುರಿತು ಚರ್ಚಿಸಲಾಯಿತು.

ತಾಲೂಕು ಹೊಬಳ್ಳಿ ಗ್ರಾಮಮಟ್ಟದಲ್ಲಿ ಜನನ-ಮರಣ ನೋಂದಣಿ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರತಿ ವರ್ಷ ಖುತುವಾರು ( ಮುಂಗಾರು, ಹಿಂಗಾರು, ಹಾಗೂ ಬೇಸಿಗೆ ) ಬೆಳೆ ಕ್ಷೇತ್ರ ಮರು ಹೊಂದಾಣಿಕೆ ವರದಿ ತಯಾರಿಸುವುದು. ಬೆಳೆ ಸಮೀಕ್ಷೆ ತಂತ್ರಾAಶದಲ್ಲಿ ಗ್ರಾಮವಾರು ಬೆಳೆ ಕ್ಷೇತ್ರ ಅಂತಿಮಗೊಳಿಸಲು ನಿಗದಿತ ೭-೧೦ ದಿನಗಳ ಕಾಲಾವಕಾಶ ಮಾತ್ರ ಇರುತ್ತದೆ ಎಂದರು.

ಗ್ರಾಮವಾರು ಬೆಳೆ ಕ್ಷೇತ್ರ ಅಂತಿಮಗೊಳಿಸುವಾಗ ಗ್ರಾಮದಲ್ಲಿ ಸಮೀಕ್ಷೆ ಕೈಗೊಳ್ಳುವ ಸಂದರ್ಭದಲ್ಲಿ ಕೈಬಿಟ್ಟು ಹೋದ ಬೆಳೆಗಳ ಕ್ಷೇತ್ರ ಸೇರ್ಪಡೆ ಮಾಡಬೇಕಾದರೆ ಸಂಬAಧಿಸಿದ ಮೇಲಧಿಕಾರಿಗಳು ನಿಗದಿತ ಸಮಯದಲ್ಲಿ ಬೆಳೆ ವಿಸ್ತೀರ್ಣ ದೃಢೀಕರಿಸಿ ವರದಿ ಸಲ್ಲಿಸಿದ್ದಲ್ಲಿ ಮೇಲಧಿಕಾರಿಗಳಿಂದ ಅನುಮತಿ ಪಡೆದು ಬೆಳೆಗಳ ವಿಸ್ತೀರ್ಣ ಸೇರ್ಪಡೆ ಮಾಡಬಹುದು ಎಂದರು.

ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಶರಣಯ್ಯ ಮಠಪತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮದ್ ಪಟೇಲ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಸಂತೋಷ ಇನಾಂದರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಜಯಶ್ರೀ ಕರಗಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಂತೋಷಕುಮಾರ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net